ಸಿಎಂ ಸೂಚನೆ ಪಾಲಿಸದ ಕೊಪ್ಪಳ ಜಿಲ್ಲಾಧಿಕಾರಿ: ಯಥಾಸ್ಥಿತಿ ಮುಂದುವರಿದ ಬಲ್ಡೋಟ ಫ್ಯಾಕ್ಟರಿ ಕಾಮಗಾರಿ

ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಉಕ್ಕು ಕಾರ್ಖಾನೆಯ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರೂ, ಜಿಲ್ಲಾಡಳಿತ ಅದನ್ನು ನಿರ್ಲಕ್ಷಿಸಿದೆ. ಹಾಗಾಗಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸಿಎಂ ಆದೇಶವನ್ನು ಉಲ್ಲಂಘಿಸಿದ ಕೊಪ್ಪಳ ಜಿಲ್ಲಾಡಳಿತದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸಿಎಂ ಸೂಚನೆ ಪಾಲಿಸದ ಕೊಪ್ಪಳ ಜಿಲ್ಲಾಧಿಕಾರಿ: ಯಥಾಸ್ಥಿತಿ ಮುಂದುವರಿದ ಬಲ್ಡೋಟ ಫ್ಯಾಕ್ಟರಿ ಕಾಮಗಾರಿ
ಸಿಎಂ ಸೂಚನೆ ಪಾಲಿಸದ ಕೊಪ್ಪಳ ಜಿಲ್ಲಾಧಿಕಾರಿ: ಯಥಾಸ್ಥಿತಿ ಮುಂದುವರಿದ ಬಲ್ಡೋಟ ಫ್ಯಾಕ್ಟರಿ ಕಾಮಗಾರಿ
Updated By: ಗಂಗಾಧರ​ ಬ. ಸಾಬೋಜಿ

Updated on: Mar 05, 2025 | 2:42 PM

ಕೊಪ್ಪಳ, ಮಾರ್ಚ್​​ 05: ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ಕೊಪ್ಪಳದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ರಾಜಕೀಯ ನಾಯಕರು ಬಂದ್​ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಮಧ್ಯೆ ನಿನ್ನೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚಿಸಿದ್ದರು. ಆದರೆ ಕಾರ್ಖಾನೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸಿಎಂ ಸೂಚನೆಗೂ ಬಲ್ಡೋಟ ಆಡಳಿತ ಮಂಡಳಿ ಡೋಂಟ್​ಕೇರ್ ಎಂದಿದೆ.

ಕೊಪ್ಪಳ ನಗರ ಬಳಿ ಬೃಹತ್ ಸ್ಟೀಲ್ ಫ್ಯಾಕ್ಟರಿ ನಿರ್ಮಾಣವಾಗುತ್ತಿದೆ. ಆದರೆ ಕೊಪ್ಪಳದ ಜನರು ಸ್ಟೀಲ್​ ಫ್ಯಾಕ್ಟರಿ ಆರಂಭಿಸದಂತೆ ಒತ್ತಾಯಿಸಿದ್ದರು. ಹಾಗಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದ ಜನಪ್ರತಿನಿಧಿಗಳ ನಿಯೋಗ ಮನವಿ ಮಾಡಿತ್ತು. ಈ ವೇಳೆ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್​​ಗೆ ಕರೆ ಮಾಡಿದ್ದ ಸಿಎಂ ಫ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದ್ದರು. ಆದರೆ ಇತ್ತ ಕಾಮಗಾರಿ ಮಾತ್ರ ಸ್ಥಗಿತವಾಗಿಲ್ಲ.

ಇದನ್ನೂ ಓದಿ: ಕೊಪ್ಪಳ ಜನರ ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ

ಇದನ್ನೂ ಓದಿ
ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಫ್ಯಾಕ್ಟರಿ ಬೇಡ: ಗವಿಶ್ರೀ ಭಾಗವಹಿಸಿದ್ದ ಕೊಪ್ಪಳ ಬಂದ್ ಹೇಗಿತ್ತು ನೋಡಿ
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು

ಕೊಪ್ಪಳ ಜಿಲ್ಲಾಡಳಿತದ ನಡೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಫ್ಯಾಕ್ಟರಿಗೆ ಹೋಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ಡಿಸಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಡಿಸಿದ್ದು, ಬಲ್ಡೋಟ ಫ್ಯಾಕ್ಟರಿಯೊಳಗೆ ಹೋಗಲು ಬಿಡದ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರ ಮಧ್ಯೆ ವಾಗ್ವಾದ ಉಂಟಾಗಿದೆ.

ಫ್ಯಾಕ್ಟರಿ ನಿರ್ಮಾಣಕ್ಕೆ ಬಲ್ಡೋಟಾ ಸಂಸ್ಥೆ 54 ಸಾವಿರ ಕೋಟಿ ರೂ ಬಂಡವಾಳ ಹೂಡಿಕೆ ಮಾಡುತ್ತಿದೆ. ವರ್ಷಕ್ಕೆ 10.50 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಬಲ್ಡೋಟಾ ಫ್ಯಾಕ್ಟರಿ ಆರಂಭದಿಂದ ಜನರಿಗೆ ತೊಂದರೆ ಆಗಲಿದೆ. ಈಗಾಗಲೇ ಕೊಪ್ಪಳ ತಾಲೂಕಿನಲ್ಲೇ 200 ಕ್ಕೂ ಹೆಚ್ಚು ವಿವಿಧ ಫ್ಯಾಕ್ಟರಿಗಳಿವೆ. ಇವುಗಳಿಂದ ಜನರು ಕ್ಯಾನ್ಸರ್, ಅಸ್ತಮಾ ರೋಗಗಳಿಗೆ ತುತ್ತಾಗುತ್ತಾರೆಂದು ಜನ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಿಸುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ: ಕುಮಾರಸ್ವಾಮಿ

ಫ್ಯಾಕ್ಟರಿಗಳ ಮಾಲಿನ್ಯದಿಂದ ಬದುಕು ದುಸ್ಥರವಾಗಿದೆ. ಬೃಹತ್ ಘಟಕ ಆರಂಭವಾದರೆ ನಾವು ಕೊಪ್ಪಳ ಬಿಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬಲ್ಡೋಟಾ ಫ್ಯಾಕ್ಟರಿ ಆರಂಭ ಬೇಡ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:40 pm, Wed, 5 March 25