AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಬಿಸಿಲು, ಬಿಸಿಗಾಳಿಗೆ ಕೋಳಿಗಳು ಮೊಟ್ಟೆ ಹಾಕ್ತಿಲ್ಲ, ಸಾಯುತ್ತಿವೆ: ರಾಜ್ಯದ ಬೃಹತ್​​ ಕುಕ್ಕುಟೋದ್ಯಮ ಕಂಗಾಲು

Koppal Poultry: ಕೋಳಿಗಳಿಗೆ ಒಂದೇ ರೀತಿಯ ತಾಪಮಾನ ಇದ್ರೆ ಅವು ಚೆನ್ನಾಗಿ ಬದುಕುತ್ತವೆ. ಅವುಗಳಿಂದ ಮಾಂಸ ಕೂಡಾ ಚೆನ್ನಾಗಿ ಸಿಗುತ್ತದೆ. ಮೊಟ್ಟೆ ಇಡೋ ಕೋಳಿಗಳಿದ್ದರೆ, ಮೊಟ್ಟೆಗಳನ್ನು ಸರಿಯಾಗಿ ಹಾಕ್ತವೆ. ಆದ್ರೆ ತಾಪಮಾನದಲ್ಲಿ ಸ್ವಲ್ಪ ವ್ಯತ್ಯಾಸವಾದ್ರು ಕೂಡಾ ಕೋಳಿಗಳು ಹೊಂದಿಕೊಳ್ಳುವದಿಲ್ಲಾ. ಇದರಿಂದ ಅವುಗಳು ಆಹಾರ ತಿನ್ನೋದನ್ನು ಕಡಿಮೆ ಮಾಡ್ತವೆ.

ಕೊಪ್ಪಳದಲ್ಲಿ ಬಿಸಿಲು, ಬಿಸಿಗಾಳಿಗೆ ಕೋಳಿಗಳು ಮೊಟ್ಟೆ ಹಾಕ್ತಿಲ್ಲ, ಸಾಯುತ್ತಿವೆ: ರಾಜ್ಯದ ಬೃಹತ್​​ ಕುಕ್ಕುಟೋದ್ಯಮ ಕಂಗಾಲು
ಬಿಸಿಲು ಬಿಸಿಗಾಳಿಗೆ ಕೊಪ್ಪಳದಲ್ಲಿ ಕೋಳಿಗಳು ಮೊಟ್ಟೆ ಹಾಕ್ತಿಲ್ಲ
ಸಂಜಯ್ಯಾ ಚಿಕ್ಕಮಠ
| Edited By: |

Updated on: May 21, 2024 | 10:26 AM

Share

ರಾಜ್ಯದಲ್ಲಿ ಒಂದಡೆ ಮಳೆ ಅಬ್ಬರ ಜೋರಾಗುತ್ತಿದೆ. ಇನ್ನೊಂದಡೆ ಕಳೆದ ಕೆಲ ದಿನಗಳಿಂದ ಹೆಚ್ಚಾಗಿರುವ ಬಿಸಿಲಿನ ತಾಪಮಾನ (Summer) ಇನ್ನು ಕೂಡಾ ಕಡಿಮೆಯಾಗುತ್ತಿಲ್ಲ. ನಿರಂತರವಾಗಿ ಹವಾಮಾನ ಬದಲಾವಣೆಯಿಂದ ಕುಕ್ಕುಟೋದ್ಯಮದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಬಿಸಿಲು ಮತ್ತು ಬಿಸಿಗಾಳಿಗೆ ಕೋಳಿಗಳು ಸರಿಯಾಗಿ ಮೊಟ್ಟೆ ಹಾಕ್ತಿಲ್ಲ. ಜೊತೆಗೆ ಕೋಳಿಗಳ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಇನ್ನೊಂದಡೆ ಮೊಟ್ಟೆ, ಚಿಕನ್ ಬೆಲೆ ಕೂಡಾ ಕಡಿಮೆಯಾಗಿದೆ. ಇದು ಕುಕ್ಕುಟೋದ್ಯಮವನ್ನೇ ನಂಬಿದವರು ಕಂಗಾಲಾಗುವಂತೆ ಮಾಡಿದೆ (Koppal Poultry).

ಹೌದು ಕೊಪ್ಪಳ ಜಿಲ್ಲೆ ಭತ್ತ ಬೆಳೆಯಲು ಹೇಗೆ ಪ್ರಸಿದ್ದಿಯನ್ನು ಪಡೆದಿದೆಯೋ ಅದೇ ರೀತಿ, ಕುಕ್ಕುಟೋದ್ಯಮದಲ್ಲಿ ಕೂಡಾ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ ಬೃಹತ್ ಮಟ್ಟದಲ್ಲಿ ಸಾವಿರಾರು ಜನರು ಕುಕ್ಕುಟೋದ್ಯಮವನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ 29 ಕ್ಕೂ ಹೆಚ್ಚು ದೊಡ್ಡ ಪೌಲ್ಟ್ರಿ ಫಾರ್ಮ್ ಗಳಿವೆ. ಒಂದೊಂದು ಪೌಲ್ಟ್ರಿ ಫಾರ್ಮ್ ನಲ್ಲಿ ಲಕ್ಷಕ್ಕೂ ಅಧಿಕ ಕೋಳಿಗಳಿವೆ. ಇನ್ನು ಸಣ್ಣಪುಟ್ಟ ಪೌಲ್ಟ್ರಿ ಫಾರ್ಮ್ ಗಳು ಸಾವಿರಾರು ಸಂಖ್ಯೆಯಲ್ಲಿವೆ. ಸಾವಿರಾರು ಜನರಿಗೆ ಈ ಉದ್ಯಮ ಕೆಲಸವನ್ನು ಕೂಡಾ ನೀಡಿದೆ.

ಜಿಲ್ಲೆಯಲ್ಲಿ ಉತ್ಫಾದನೆಯಾಗೋ ಮೊಟ್ಟೆ ಮತ್ತು ಚಿಕನ್ , ರಾಜ್ಯ ಮತ್ತು ದೇಶದ ವಿವಿಧಡೆ ರವಾನೆಯಾಗುತ್ತದೆ. ಆದ್ರೆ ಇದೀಗ ಕೊಪ್ಪಳ ಜಿಲ್ಲೆಯಲ್ಲಿರುವ ಕುಕ್ಕಟೋದ್ಯಮಿಗಳು ಕಂಗಾಲಾಗಿದ್ದಾರೆ. ಕುಕ್ಕುಟೋದ್ಯಮಿಗಳು ಕಂಗಾಲಾಗಲು ಕಾರಣವಾಗಿದ್ದು ಹವಾಮಾನ ವೈಪರಿತ್ಯ. ಹೌದು ಕೊಪ್ಪಳದಲ್ಲಿ ಪ್ರತಿವರ್ಷ 38-40 ಡಿಗ್ರಿ ವರಗೆ ತಾಪಮಾನ ದಾಖಲಾಗುತಿತ್ತು. ಆದ್ರೆ ಈ ವರ್ಷ 44 ಡಿಗ್ರಿವರಗೆ ಬಿಸಿಲು ದಾಖಲಾಗಿದೆ.

ಜೊತೆಗೆ ಅನೇಕ ದಿನಗಳಿಂದ ಬಿಸಿಗಾಳಿ ಕೂಡಾ ಬೀಸುತ್ತಿರುವುದು ಕೋಳಿಗಳ ಮೊಟ್ಟೆ ಉತ್ಫಾದನೆ ಗಣನೀಯವಾಗ ಕಡಿಮೆಯಾಗಿದೆಯಂತೆ. ಪ್ರತಿವರ್ಷಕ್ಕೆ ಮುನ್ನೂರು ಮೊಟ್ಟೆ ನೀಡ್ತಿದ್ದ ಕೋಳಿಗಳು ಇದೀಗ ಇನ್ನೂರು, ಇನ್ನೂರಾ ಐವತ್ತು ಮೊಟ್ಟೆ ನೀಡ್ತಿವೆಯಂತೆ. ಇನ್ನು ಕೋಳಿಗಳ ಸಾವಿನ ಪ್ರಮಾಣ ಕೂಡಾ ಹೆಚ್ಚಾಗಿದೆಯಂತೆ. ಪ್ರತಿನಿತ್ಯ ನೂರರಿಂದ ಇನ್ನೂರು ಕೋಳಿಗಳು ಸಾಯ್ತಿವೆ. ಕೋಳಿಗಳು ಸತ್ತರೆ ನಮಗೆ ದೊಡ್ಡ ಮಟ್ಟದ ಲಾಸ್ ಅಂತಿದ್ದಾರೆ ಕುಕ್ಕುಟೋದ್ಯಮಿ ಸ್ವರೂಪ್ ರೆಡ್ಡಿ.

ಕೋಳಿಗಳಿಗೆ ಒಂದೇ ರೀತಿಯ ತಾಪಮಾನ ಇದ್ರೆ ಅವು ಚೆನ್ನಾಗಿ ಬದುಕುತ್ತವೆ. ಅವುಗಳಿಂದ ಮಾಂಸ ಕೂಡಾ ಚೆನ್ನಾಗಿ ಸಿಗುತ್ತದೆ. ಮೊಟ್ಟೆ ಇಡೋ ಕೋಳಿಗಳಿದ್ದರೆ, ಮೊಟ್ಟೆಗಳನ್ನು ಸರಿಯಾಗಿ ಹಾಕ್ತವೆ. ಆದ್ರೆ ತಾಪಮಾನದಲ್ಲಿ ಸ್ವಲ್ಪ ವ್ಯತ್ಯಾಸವಾದ್ರು ಕೂಡಾ ಕೋಳಿಗಳು ಹೊಂದಿಕೊಳ್ಳುವದಿಲ್ಲಾ. ಇದರಿಂದ ಅವುಗಳು ಆಹಾರ ತಿನ್ನೋದನ್ನು ಕಡಿಮೆ ಮಾಡ್ತವೆ.

ಅನೇಕ ಕೋಳಿಗಳು ಸತ್ತರೆ, ಬಹುತೇಕ ಕೋಳಿಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ರೆ ಈ ಬಾರಿ ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲು ಇದ್ದು ಮತ್ತು ಬಿಸಿಗಾಳಿಯಿಂದ ಶೇಕಡಾ ನಲವತ್ತರಷ್ಟು ತಮ್ಮ ಆದಾಯಕ್ಕೆ ಪೆಟ್ಟು ಬಿದ್ದಿದೆ ಅಂತಿದ್ದಾರೆ ಕುಕ್ಕುಟೋದ್ಯಮಿಗಳು.

ಇದನ್ನೂ ಓದಿ: ಹಾಡಹಗಲೇ ಗ್ರಾಮದೊಳಕ್ಕೆ ನುಸುಳಿದ 2 ಸಾವಿರ ಹಸುಗಳು! ಬೇಸ್ತುಬಿದ್ದ ಗ್ರಾಮಸ್ಥರು

ಇನ್ನು ಅನೇಕರು ಬಿಸಿಲು ಮತ್ತು ಬಿಸಿಗಾಳಿಯಿಂದ ಕೋಳಿಗಳನ್ನು ರಕ್ಷಣೆ ಮಾಡಿದರೂ, ಪ್ರಯತ್ನ ಪಟ್ಟರು ಕೂಡಾ ಆಗಿಲ್ಲ. ಸಣ್ಣ ಪ್ರಮಾಣದಲ್ಲಿ ಪೌಲ್ಟ್ರಿ ಫಾರ್ಮ್ ಇದ್ರೆ, ಕೂಲರ್ ಸೇರಿದಂತೆ ಹವಾನಿಯಂತ್ರಿತ ವ್ಯವಸ್ಥೆ ಮಾಡಬಹುದು. ಆದ್ರೆ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಪೌಲ್ಟ್ರಿ ಫಾರ್ಮ್ ಗಳು ಇರೋದರಿಂದ ಲಕ್ಷಾಂತರ ಕೋಳಿಗಳಿಗೆ ಕೂಡಾ ಬಿಸಿಗಾಳಿಯಿಂದ ರಕ್ಷಣೆ ಮಾಡಲು ಕಷ್ಟವಾಗಿದೆಯಂತೆ. ಇನ್ನು ದರ ಕೂಡಾ ಕಡಿಮೆಯಾಗಿರುವುದು ಪೌಲ್ಟ್ರಿ ಉದ್ಯಮಿಗಳಿಗೆ ಮತ್ತೊಂದು ಹೊಡೆತ ನೀಡಿದೆ ಎಂದು ಡಾ. ಎಂ. ಪಿ ಮಲ್ಲಯ್ಯ, ಉಪನಿರ್ದೇಶಕ, ಪಶುಪಾಲನೆ ಇಲಾಖೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಅತಿ ಹೆಚ್ಚು ಪೌಲ್ಟ್ರಿ ಫಾರ್ಮ್ ಇರೋದು ಕೊಪ್ಪಳ ಜಿಲ್ಲೆಯಲ್ಲಿ. ಸಾವಿರಾರು ಜನರಿಗೆ ಈ ಉದ್ಯಮ ಕೆಲಸ ನೀಡಿದೆ. ಆದ್ರೆ ಬಿಸಿಲು ಮತ್ತು ಬಿಸಿಗಾಳಿಯಿಂದಾಗಿ ಕೋಳಿ ಉದ್ಯಮವನ್ನು ನಂಬಿದವರು ಪರದಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಾಲ ವಾತಾವರಣದಲ್ಲಿ ಸುಧಾರಣೆಯಾಗದಿದ್ರೆ ತಮ್ಮ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಅಂತಿದ್ದಾರೆ ಕುಕ್ಕುಟೋದ್ಯಮಿಗಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ