ಇಂದಿನಿಂದ ಜೂನ್ 3ರವರೆಗೆ ಉತ್ತರ ಕರ್ನಾಟಕದ ಸುಪ್ರಸಿದ್ದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ

ಹುಲಿಗಿ ಗ್ರಾಮದ ಶ್ರೀ ಹುಲಗೆಮ್ಮ ದೇವಿ ದೇವಸ್ಥಾನದ ಜಾತ್ರೆ ಪ್ರಯುಕ್ತ ಜೂನ್ 02 ರಂದು ಪಾಯಸ ಅಗ್ನಿಕೊಂಡ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 9 ಕ್ಕೆ ಹಿಡಿದಕ್ಷಿಣೆ ವಿತರಣೆ, 9-30 ಕ್ಕೆ ಪಡಗದ ಪೂಜಾ ನಡೆಯಲಿದೆ. ಉತ್ಸವದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಇಂದಿನಿಂದ ಜೂನ್ 3ರವರೆಗೆ ಉತ್ತರ ಕರ್ನಾಟಕದ ಸುಪ್ರಸಿದ್ದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Ganapathi Sharma

Updated on:May 30, 2024 | 10:59 AM

ಕೊಪ್ಪಳ, ಮೇ 30: ಕೊಪ್ಪಳ (Koppal) ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿ ಗ್ರಾಮದ ಶ್ರೀ ಹುಲಗೆಮ್ಮ ದೇವಿ ದೇವಸ್ಥಾನದ (Huligemma Devi Temple) 2024ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವವು (Huligemma Devi Festival) ಮೇ 30ರಿಂದ ಜೂನ್ 3ರವರೆಗೆ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ ಸುಪ್ರಸಿದ್ಧ ದೇವಸ್ಥಾನ ವಾಗಿರುವ ಹುಲಿಗೆಮ್ಮ ದೇವಸ್ಥಾನ ಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಮಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ

ಜಾತ್ರೆಯ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯ ನಿಮಿತ್ತ ಮೇ 30 ರಂದು ಸಂಜೆ 7 ಗಂಟೆಗೆ ಉತ್ಸವ, ಮೇ 31 ರಂದು ಸಂಜೆ 5-30 ಗಂಟೆಗೆ ಅಕ್ಕಿಪಡಿ ಮಹಾರಥೋತ್ಸವ ಜರುಗಲಿದೆ. ಜೂನ್ 01 ರಂದು ಬಾಳಿದಂಡಿಗೆ, ರಾತ್ರಿ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 3-30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ) ಗಂಗಾದೇವಿ ಪೂಜಾ, ಬೆಳಗಿನ ಜಾವ 4 ಗಂಟೆಗೆ ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬೆಳಗಿನ ಜಾವ 4-30 ಕ್ಕೆ ಬಾಳಿದಂಡಿಗೆ ಆರೋಹಣ ನಡೆಯಲಿದೆ.

ಜೂನ್ 02 ರಂದು ಪಾಯಸ ಅಗ್ನಿಕೊಂಡ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 9 ಕ್ಕೆ ಹಿಡಿದಕ್ಷಿಣೆ ವಿತರಣೆ, 9-30 ಕ್ಕೆ ಪಡಗದ ಪೂಜಾ, ಬೆಳಗಿನಜಾವ 4 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ) ಗಂಗಾದೇವಿ ಪೂಜಾ, ಬೆಳಗಿನ ಜಾವ 4-30ಕ್ಕೆ ಗಂಟೆಗೆ ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬೆಳಗಿನ ಜಾವ 5-30 ಗಂಟೆಗೆ ಶ್ರೀದೇವಿಗೆ ಪಾಯಸ ಪ್ರಸಾದ ನಿವೇದನೆ ಹಾಗೂ ಜೂನ್ 03 ರಂದು ಬೆಳಿಗ್ಗೆ 6-30 ಗಂಟೆಗೆ (ದ್ವಾದಶಿ ನಸುಕಿನಲ್ಲಿ) ಅಗ್ನಿಕುಂಡ ನಡೆಯಲಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಲೋಕಾಯಕ್ತ ದಾಳಿ: ಲೇಔಟ್​ಗೆ ಪರವಾನಗಿ ನೀಡಲು ಲಂಚ ಕೇಳಿದ್ದ ಅಧಿಕಾರಿ ಬಲೆಗೆ

ಜೂನ್ 25 ರಂದು ರಾತ್ರಿ 8 ಗಂಟೆಗೆ ಶ್ರೀದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಎಂದು ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 am, Thu, 30 May 24