ಕೊಪ್ಪಳ: ಕಾಲು ಜಾರಿ ಬಾವಿಯಲ್ಲಿ ಬಿದ್ದು ಬಾಲಕಿಯರ ದುರ್ಮರಣ
ಕೊಪ್ಪಳ (Koppal) ತಾಲ್ಲೂಕಿನ ಜಿನ್ನಾಪುರ ತಾಂಡಾದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿದ್ದ ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ನಡೆದಿದೆ. ಸೌಂದರ್ಯ ರತ್ನಪ್ಪ ಪೂಜಾರ (11) ಹಾಗೂ ಲಕ್ಷ್ಮಿ ಶರಣಪ್ಪ ಪೂಜಾರ (10) ಮೃತ ರ್ದುದೈವಿಗಳು. ಅಗ್ನಿಶಾಮಕ ದಳ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹ ತೆಗೆದಿದ್ದಾರೆ.
ಕೊಪ್ಪಳ, ಮೇ.30: ಈ ಬಾರಿ ಬೇಸಿಗೆ ರಜೆಯಲ್ಲಿ ಅನೇಕ ದುರ್ಘಟನೆಗಳು ನಡೆದಿದ್ದು, ಅದರಲ್ಲಿ ಮಕ್ಕಳ ಸಾವಿನ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಅದರಂತೆ ಇಂದು(ಮೇ.30) ಮಧ್ಯಾಹ್ನ 3.30ರ ಸುಮಾರಿಗೆ ಕೊಪ್ಪಳ (Koppal) ತಾಲ್ಲೂಕಿನ ಜಿನ್ನಾಪುರ ತಾಂಡಾದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿದ್ದ ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ನಡೆದಿದೆ.
ತಾಂಡಾದ ಹೊರವಲಯದ ಹೊಲದಲ್ಲಿಯೇ ಇವರ ಕುಟುಂಬದವರು ಮನೆ ಹೊಂದಿದ್ದರು. ತಮ್ಮದೇ ತೋಟದ ಮನೆ ಬಳಿಯಿದ್ದ ಬಾವಿ ಬಳಿ ಆಡವಾಡಲು ಹೋಗಿದ್ದಾಗ ಇಬ್ಬರು ಬಾಲಕಿಯರು ಕಾಲು ಜಾರಿ ಬಾವಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಸೌಂದರ್ಯ ರತ್ನಪ್ಪ ಪೂಜಾರ (11) ಹಾಗೂ ಲಕ್ಷ್ಮಿ ಶರಣಪ್ಪ ಪೂಜಾರ (10) ಮೃತ ರ್ದುದೈವಿಗಳು. ಈಜು ಬಾರದ ಮಕ್ಕಳು ನೀರಿನಲ್ಲಿ ಬಿದ್ದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹ ತೆಗೆದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರತ್ಯೇಕ ಘಟನೆ: ಲವರ್ಸ್ ಬೈಕ್ಗೆ ಲಾರಿ ಡಿಕ್ಕಿಯಾಗಿ ಪ್ರಿಯಕರ ಸಾವು, ಬಸ್ ಡಿಕ್ಕಿಯಾಗಿ ರೈತರಿಬ್ಬರ ದುರ್ಮರಣ
ಬುಲೆಟ್ ಬೈಕ್‌ನಲ್ಲಿ ಬಂದು ಇಬ್ಬರು ಬಾಲಕಿಯರ ಕಿಡ್ನ್ಯಾಪ್‌ಗೆ ಯತ್ನ
ಬೆಂಗಳೂರು: ಉತ್ತರ ತಾಲೂಕಿನ ಅಂಚೆಪಾಳ್ಯದಲ್ಲಿ ಬುಲೆಟ್ ಬೈಕ್‌ನಲ್ಲಿ ಬಂದು ಇಬ್ಬರು, ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಚಾಕೋಲೇಟ್ ಆಸೆ ತೋರಿಸಿ 7 ವರ್ಷದ ಬಾಲಕಿಯರ ಕಿಡ್ನ್ಯಾಪ್‌ಗೆ ಯತ್ನಿಸಿದ್ದು, ಎಚ್ಚೆತ್ತ ಬಾಲಕಿಯರು ಚಾಕೋಲೇಟ್ ತೆಗೆದುಕೊಳ್ಳದೆ ಮನೆಗೆ ಓಡಿ ಹೋಗಿದ್ದಾರೆ. ಘಟನೆ ಬಳಿಕ ಅಂಚೆಪಾಳ್ಯ ಹಾಗೂ ಪ್ರಕೃತಿ ಲೇಔಟ್ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಅಂಚೆಪಾಳ್ಯ ನಿವಾಸಿಗಳು ದೂರು ಸಲ್ಲಿಸಿದ್ದಾರೆ. ಇದೀಗ ಬುಲೆಟ್ ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 pm, Thu, 30 May 24