AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯಸ್ಸು ಮುಗಿದರೂ ಬದಲಾಗದ ತುಂಗಭದ್ರಾ ಡ್ಯಾಂ ಕ್ರೆಸ್ಟ್​ಗೇಟ್​ಗಳು, ಮತ್ತೊಂದು ಅನಾಹುತದ ಭೀತಿ

ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿ ಅನೇಕ ತಿಂಗಳುಗಳು ಕಳೆದಿವೆ. ಸ್ಥಳೀಯರು ಮತ್ತು ತಜ್ಞರು ಬೇಸಿಗೆಯ ಮೊದಲು ಬದಲಿ ಕ್ರಸ್ಟಗೇಟ್ ಅಳವಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಮಂಡಳಿಯಿಂದ ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. 70 ವರ್ಷಗಳ ಹಳೆಯ ಕ್ರಸ್ಟಗೇಟ್‌ಗಳ ಬದಲಿ ಅವಶ್ಯಕವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನೀರಿನ ಅಭಾವ ಮತ್ತು ಕೃಷಿಗೆ ಭೀತಿ ಇದೆ.

ಆಯಸ್ಸು ಮುಗಿದರೂ ಬದಲಾಗದ ತುಂಗಭದ್ರಾ ಡ್ಯಾಂ ಕ್ರೆಸ್ಟ್​ಗೇಟ್​ಗಳು, ಮತ್ತೊಂದು ಅನಾಹುತದ ಭೀತಿ
ತುಂಗಭದ್ರ ಜಲಾಶಯ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on:Mar 28, 2025 | 7:41 AM

ಕೊಪ್ಪಳ, ಮಾರ್ಚ್​ 24: ಕೊಪ್ಪಳ (Koppal) ತಾಲೂಕಿನ ಮುನಿರಾಬಾದ ಬಳಿಯಿರುವ ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟಗೇಟ್ (Crustagate) ಕೊಚ್ಚಿಕೊಂಡು ಹೋಗಿ ಅನೇಕ ತಿಂಗಳುಗಳೇ ಕಳೆದಿದ್ದು, ತಾತ್ಕಾಲಿಕವಾಗಿ ಸ್ಟಾಪ್​ ಗೇಟ್​ ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಕ್ರೆಸ್ಟ್​ಗೇಟ್ ಅಳವಡಿಸುವುದಾಗಿ ಮಂಡಳಿ ಹೇಳಿತ್ತು. ಆದರೆ, ಇಲ್ಲಿಯವರಗೆ ಕ್ರೆಸ್ಟ್​ಗೇಟ್ ಅಳವಡಿಸುವ ಬಗ್ಗೆ ಮಂಡಳಿಯಿಂದ ಯಾವುದೇ ನಿರ್ಧಾರವಾಗಿಲ್ಲ. ಹೀಗಾಗಿ, ಮಳೆಗಾಲ ಆರಂಭಕ್ಕೂ ಮುನ್ನವೇ ಗೇಟ್ ಬದಲಾವಣೆಯಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ತುಂಗಭದ್ರಾ ಜಲಾಶಯ, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ಮತ್ತು ನೆರೆಯ ತೆಲೆಂಗಾಣ, ಆಂದ್ರಪ್ರದೇಶದ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ತುಂಗಭದ್ರಾ ನೀರೇ ಆಧಾರವಾಗಿದೆ. ಆದರೆ, 2024 ರ ಆಗಸ್ಟ್ 10 ರಂದು ರಾತ್ರಿ ಸಮಯದಲ್ಲಿ ಡ್ಯಾಂನ 19 ನೇ ಕ್ರೆಸ್ಟ್​ಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ. ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು.

ಕ್ರೆಸ್ಟ್​ಗೇಟ್ ಕೊಚ್ಚಿಕೊಂಡು ಹೋಗಲು ತುಂಗಭದ್ರಾ ಡ್ಯಾಂ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯ್ತಾ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಇದಕ್ಕೆ ಕಾರಣ, ಜಲಾಶಯದ ಕ್ರಸ್ಟಗೇಟ್​ ಮತ್ತು ಚೈನ್​ಲಿಂಕ್ ಬದಲಾಯಿಸದೆ ಇರುವುದು. ಯಾವುದೇ ಜಲಾಯಶದ ಕ್ರೆಸ್ಟ್​ಗೇಟ್ ​ಮತ್ತು ಚೈನ್​ಲಿಂಕ್​ ಅನ್ನು 50 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಆದರೆ, ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳ ಹಿಂದೆ ಕ್ರೆಸ್ಟ್​ಗೇಟ್ ಮತ್ತು ಚೈನ್​ಲಿಂಕ್ ಗಳನ್ನು ಅಳವಡಿಸಿದ್ದು, ಇಲ್ಲಿವರಗೆ ಒಮ್ಮೆಯೂ ಬದಲಾಯಿಸಿಲ್ಲ. ಬದಲಾವಣೆ ಮಾಡಬೇಕು ಅನ್ನೋ ತಜ್ಞರ ಸೂಚನೆಯನ್ನು ಕೂಡಾ ಡ್ಯಾಂ ನಿರ್ವಹಣೆ ಮಾಡೋ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂತಹದೊಂದು ಘಟನೆ ನಡೆಯಿತು ಅಂತ ಹೇಳಲಾಗುತ್ತಿದೆ. ಇದನ್ನೇ, ತಜ್ಞರು ಕೂಡಾ ಹೇಳಿದ್ದರು.

ಇದನ್ನೂ ಓದಿ
Image
ತುಂಗಭದ್ರಾ ಆಯ್ತು, ಅಪಾಯದಲ್ಲಿದೆ ರಾಜ್ಯದ ಮತ್ತೊಂದು ಪ್ರಮುಖ ಡ್ಯಾಂ
Image
ತುಂಗಭದ್ರಾ ಜಲಾಶಯ ಗೇಟ್‌‌ ದುರಸ್ತಿ ಸಂಪೂರ್ಣ ಮುಕ್ತಾಯ
Image
ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ: ಕಾರ್ಮಿಕರ ಸಾಹಸಮಯ ಕೆಲಸದ ವಿಡಿಯೋ ವೈರಲ್
Image
ತುಂಗಭದ್ರಾ ಡ್ಯಾಂನ ಹೊಸ ಗೇಟ್​ ನಿರ್ಮಾಣದ ಎಕ್ಸ್​ಕ್ಲೂಸಿವ್​ ದೃಶ್ಯ!

ಕ್ರೆಸ್ಟ್​ಗೇಟ್ ​ದುರಸ್ಥಿ ನಂತರ ರಾಜ್ಯ ಸರ್ಕಾರ ಕೂಡ ಕ್ರೆಸ್ಟ್​ಗೇಟ್ ಬದಲಾವಣೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾಗಿ ಹೇಳಿತ್ತು. ಈಗಾಗಲೇ ತಾಂತ್ರಿಕ ತಜ್ಞರ ತಂಡ ಡ್ಯಾಂಗೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಡ್ಯಾಂ ಕಾರ್ಯದರ್ಶಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಕಳೆದ ನವಂಬರ್ ಮೊದಲ ವಾರದಲ್ಲಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಬದಲಾವಣೆ ಬಗ್ಗೆ ಇನ್ನು ಯಾವುದೇ ನಿರ್ಧಾರಕ್ಕೆ ಮಂಡಳಿ ಬರುತ್ತಿಲ್ಲ.

ಇದೀಗ ಮೇಲಿಂದ ಮೇಲೆ ಜಲಾಶಯಕ್ಕೆ ಆಗಮಿಸುತ್ತಿರುವ ಟಿಬಿ ಡ್ಯಾಂ ಬೋರ್ಡ್​ನ ಅಧಿಕಾರಿಗಳು, ಜಲಾಶಯದ 33 ಕ್ರೆಸ್ಟ್​ಗೇಟ್​ಗಳನ್ನು ಯಾವಾಗ ಬದಲಾವಣೆ ಮಾಡಬೇಕು, ಕ್ರೆಸ್ಟ್​ಗೇಟ್​ಗಳನ್ನು ಎಲ್ಲಿ ಸಿದ್ದಪಡಿಸಬೇಕು, ಹೊಸ ಮಾದರಿ ಕ್ರೆಸ್ಟ್​ಗೇಟ್​ಗಳು ಯಾವ ರೀತಿ ಇರಬೇಕು ಅನ್ನೋ ಬಗ್ಗೆ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಿದ್ದಾರೆ. ಬೇಸಿಗೆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಕ್ರೆಸ್ಟ್​ಗೇಟ್​ಗಳನ್ನು ಬದಲಾವಣೆ ಮಾಡುವುದಾಗಿ ಹೇಳಿದ್ದರು. ಆದರೆ, ಇಲ್ಲಿಯವರಗೆ ಮಂಡಳಿಯವರು ಮಾತ್ರ ಗೇಟ್ ಬದಲಾವಣೆ ಬಗ್ಗೆ ಅಧಿಕೃತ ಆದೇಶ ಹೊರಡಿಸಿಲ್ಲ.

ಕ್ರೆಸ್ಟ್​ಗೇಟ್​ ಬದಲಾವಣೆ ಮಾಡಬೇಕಾದರೇ ಈಗನಿಂದಲೇ ಅವುಗಳ ತಯಾರಿಕೆಗೆ ಚಾಲನೆ ನೀಡಬೇಕಾಗುತ್ತದೆ. ಆದರೆ, ಇಲ್ಲಿವರಗೆ ಅದರ ಕಾರ್ಯ ಆರಂಭವಾಗಿಲ್ಲ. ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ 1949 ರಲ್ಲಿ ಆರಂಭವಾಗಿತ್ತು. 1954 ರಲ್ಲಿ ಡ್ಯಾಂ ಲೋಕಾರ್ಪಣೆಗೊಂಡಿದೆ. ಅಂದ್ರೆ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಬರೋಬ್ಬರಿ 70 ವರ್ಷವಾಗಿದೆ. ಅದರ ಆಯಸ್ಸುನ್ನು ನೋಡಿದಾಗ, ಡ್ಯಾಂಗೆ ಇರುವುದು ಕೇವಲ ಮೂವತ್ತು ವರ್ಷ ಮಾತ್ರ. ಇದೇ ವಿಚಾರವನ್ನು ಇಟ್ಟುಕೊಂಡು ಕನ್ನಯ್ಯನಾಯ್ಡು ಕೂಡಾ ಇನ್ನು ಮೂವತ್ತು ವರ್ಷದ ನಂತರ ಡ್ಯಾಂನ್ನು ನಿಷ್ಕ್ರೀಯಗೊಳಿಸಿ ಹೊಸದನ್ನು ನಿರ್ಮಾಣ ಮಾಡಬೇಕಾಗುತ್ತದೆ. ಈ ಬಗ್ಗೆ ಮೂರು ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಅಂತ ಹೇಳಿದ್ದರು.

ಜಲಾಶಯ ಕ್ರೆಸ್ಟ್​ಗೇಟ್​ ಬದಲಾವಣೆಗೆ ಅನೇಕ ದಿನಗಳ ಸಮಯ ಬೇಕಾಗುತ್ತದೆ. ಸದ್ಯ ಜಲಾಶಯದಲ್ಲಿ ನೀರು ಕೂಡಾ ಬಹುತೇಕ ಖಾಲಿಯಾಗಿದೆ. ಆದ್ರೆ ಕ್ರೆಸ್ಟ್​ಗೇಟ್​ ಬದಲಾವಣೆ ಬಗ್ಗೆ ಅಧಿಕೃತ ಮಾಹಿತಿ ಮಂಡಳಿಯಿಂದ ಹೊರಬಿದ್ದಿಲ್ಲ.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಜನರಿಗೆ ಗುಡ್​ನ್ಯೂಸ್: ನೀರಾವರಿ ಸಮಿತಿ ಮಹತ್ವದ ತೀರ್ಮಾನ

ಆದರೆ, ಇನ್ನಾದರು ನಿರ್ಲಕ್ಷ್ಯ ವಹಿಸದೆ, ಬೇಸಿಗೆ ಸಮಯದಲ್ಲಿ ಹೊಸ ಕ್ರೆಸ್ಟ್​ಗೇಟ್​ಗಳ ಅಳವಡಿಕೆ ಕಾರ್ಯ ಆರಂಭಿಸಲು ಬೇಕಾದ ಸಿದ್ದತೆಯನ್ನು ಈಗನಿಂದಲೇ ಆರಂಭಿಸಬೇಕಿದೆ. ಕ್ರೆಸ್ಟ್​ಗೇಟ್​ಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗಿರುವುದರಿಂದ, ಈ ನಿಟ್ಟಿನಲ್ಲಿ ತೀವ್ರಗತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:30 am, Mon, 24 March 25

ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ