AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕೆ ಪಡೆಯಲು ಬಂದ ಮಹಿಳೆಯ ಮಗು ಆಡಿಸಿದ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ; ಜನರ ಶ್ಲಾಘನೆ

ಜತೆಗೆ ಲಸಿಕೆ ಹಾಕಿಸದ ಮನೆಗಳ ಭೇಟಿ ಮಾಡಿ ಮನವೊಲಿಸಿ ಲಸಿಕೆ ಹಾಕಿಸಿದರು.

ಲಸಿಕೆ ಪಡೆಯಲು ಬಂದ ಮಹಿಳೆಯ ಮಗು ಆಡಿಸಿದ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ; ಜನರ ಶ್ಲಾಘನೆ
ಮಗುವನ್ನು ಆಡಿಸಿದ ಜಿಪಂ ಸಿಇಒ
TV9 Web
| Edited By: |

Updated on: Sep 18, 2021 | 6:37 PM

Share

ಕೊಪ್ಪಳ: ಎಲ್ಲರಿಗೂ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತದೆ. ಕೊವಿಡ್​ನಂತಹ ದುರಿತ ಕಾಲದಲ್ಲಿ ಸಹಾಯ ಮಾಡುವುದಿರಲಿ, ಒಬ್ಬರನ್ನೊಬ್ಬರು ಮುಟ್ಟಲು ಕೂಡ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಾರೂ ಕೂಡ ಸುಖಾಸುಮ್ಮನೆ ಸಮಸ್ಯೆಗಳನ್ನು ತಂದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ ಇನ್ನೊಬ್ಬರ ಮಕ್ಕಳು ಅಳುತ್ತಿದ್ದರೂ ಸಂತೈಸುವ ಗೊಡವೆಗೆ ಹೋಗದಿರುವ ಜನರೇ ಹೆಚ್ಚು. ಆದರೆ, ಯಾವ ಯೋಚನೆಯೂ ಮಾಡದೆ ಅಳುವ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿಗೆ ಕೊರೊನಾ ಲಸಿಕೆ ಪಡೆಯಲು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಮಾನ್ಯ ಫೌಜೀಯಾ ತರನ್ನುಮ್ ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ . 

ಹೌದು, ಇದು ನಡೆದಿದ್ದು, ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದಲ್ಲಿ. ಕೊವಿಡ್ ಲಸಿಕೆ ಹಾಕಿಕೊಳ್ಳಲು ಹಿಂಜರಿಯುತ್ತಿದ್ದ ಜನರಿಗೆ ಲಸಿಕೆ ಹಾಕಿಸುವ ವೇಳೆ ಪುಟ್ಟ ಮಗು ಅಳುವುದನ್ನು ನೋಡಿ ಜಿಪಂ ಸಿಇಓ ಮಗುವನ್ನು ಎತ್ತಿಕೊಂಡು ಆಡಿಸಿದರು. ಶುಕ್ರವಾರ ಸಂಜೆ ಲಸಿಕಾ ಮೇಳ ಪರಿಶೀಲನೆ ಆಗಮಿಸಿದ ಸಂದರ್ಭದಲ್ಲಿ ಅವರು ಈ ಘಟನೆಗೆ ಸಾಕ್ಷಿಯಾದರು. ಜತೆಗೆ ಲಸಿಕೆ ಹಾಕಿಸದ ಮನೆಗಳ ಭೇಟಿ ಮಾಡಿ ಮನವೊಲಿಸಿ ಲಸಿಕೆ ಹಾಕಿಸಿದರು.

ಇದೇ ವೇಳೆ ತಾಯಿಯೊಬ್ಬರೂ ಅಳುತ್ತಿದ್ದ ಮಗು ಎತ್ತಿಕೊಂಡು ಲಸಿಕೆ ಪಡೆಯಲು ಆಗಮಿಸುವುದನ್ನು ನೋಡಿದ ಜಿಲ್ಲಾ ಪಂಚಾಯತ್ ಸಿಇಓ ಫೌಜೀಯಾ ತರನ್ನುಮ್ ಅವರು ಪುಟ್ಟ ಮಗು ಎತ್ತಿಕೊಂಡು ತಾಯಿ ಲಸಿಕೆ ಹಾಕಿಸುವವರೆಗೆ ಆಡಿಸಿದರು. ಅದನ್ನು ಕಂಡ ನೆರೆದಿದ್ದ ಜನರು ಅವರ ಸರಳತೆಯನ್ನು ಶ್ಲಾಘಿಸಿದರು. ತಾಪಂ ಇಓ ಕಾವ್ಯರಾಣಿ ಕೆ.ವಿ., ತಾಪಂ ಯೋಜನಾಧಿಕಾರಿಗಳಾದ ರಾಜಶೇಖರ, ಗ್ರಾಪಂ ಪಿಡಿಓ ನಾಗೇಶ ಸೇರಿ ಇತರರು ಇದ್ದರು.

ಇದನ್ನೂ ಓದಿ: 

ಕೊಪ್ಪಳ: ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಟ

ಹಾಸನ: ಶಾಲಾ ಕೊಠಡಿಯ ಮೇಲೆ ರೈಲು ಬೋಗಿಯ ಚಿತ್ತಾರ; ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ

(Koppal Zilla Panchayat CEO who played with child of a woman who came to get the vaccine)

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ