
ಬೆಂಗಳೂರು, (ಸೆಪ್ಟೆಂಬರ್ 20): ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಅಕ್ರಮದ ದುಡ್ಡಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ ಕುಮಾರ್ ಮೋಜು-ಮಸ್ತಿ ಬಯಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ, ಜ್ಞಾನೇಂದ್ ಕುಮಾರ್ ಮೆಚ್ಚಿಸಲು ಖರ್ಚುಗಳಿಗೆ ಸುಮಾರು 11 ಲಕ್ಷ ವೆಚ್ಚ ಭರಿಸಿದ್ದಾನೆ. ಈ ವರ್ಷ ಜ್ಞಾನೇಂದ್ ಕುಮಾರ್ಮ ತ್ತು ಗೆಳತಿ ಸುತ್ತಾಡಲು ಬಸವರಾಜ್ ಕನ್ನಾಳೆ 23 ಏರ್ ಟಿಕೆಟ್ ಕೊಡಿಸಿದ್ದು, ಜ್ಞಾನೇಂದ್ ಕುಮಾರ್ ಗೆಳತಿ ಜೊತೆಗೆ ಉತ್ತರ ಪ್ರದೇಶ ಹಾಗೂ ವಿವಿಧ ಕಡೆ ಸುತ್ತಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ.
ಭೀಮಾ ಜ್ಯೂವೆಲ್ಲರಿ ಗೆ ಹಣ ವರ್ಗಾಯಿಸಲು ಬಸವರಾಜ್ ಕನ್ನಾಳೆ ಸ್ನೇಹಿತರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನ ತೆರೆರುವುದು ಗೊತ್ತಾಗಿದೆ. ಎಲ್ಲಾ ಮಾಹಿತಿಯನ್ನು ಎಸ್ಪಿಪಿ ಕೋರ್ಟ್ ಗೆ ನೀಡಿದೆ. ಕನ್ನಾಳೆ ಭಗವತಿ ಎಂಟರ್ ಪ್ರೈಸಸ್ ಮಾಲೀಕನಾಗಿದ್ದು, ತನ್ನ ಬೀದರ್ ನಲ್ಲಿರುವ ಭಗವತಿ ಎಂಟರ್ ಪ್ರೈಸಸ್ ಮೂಲ ಟಿಕೆಟ್ ಖರೀದಿಸಿದ್ದ. ಇನ್ನೊಂದೆಡೆ ಜ್ಞಾನೇಂದ್ ಕುಮಾರ್, ಮಾರ್ಚ್ ಮತ್ತು ಜೂನ್ ನಲ್ಲಿ ಗೆಳತಿಗಾಗಿ 52 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಡೈಮಂಡ್ ಖರೀದಿ ಮಾಡಿದ್ದಾರೆ. 1.90 ಲಕ್ಷ ನಗದು ಹಾಗೂ ಸ್ನೇಹಿತೆಯ ಕ್ರೆಡಿಟ್ ಕಾರ್ಡ್ ಮೂಲಕ 1 ಲಕ್ಷ ಸೇರಿದಂತೆ ಒಟ್ಟು 2.90 ಲಕ್ಷ ಪಾವತಿಸಲಾಗಿದೆ. ಉಳಿದ ಹಣವನ್ನ ಬೀದರ್ ನ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಕೋ ಆಪರೇಟಿವ್ ಬ್ಯಾಂಕ್ ಮೂಲಕ ಪಾವತಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಯಲ್ಲಿ ತಿಳಿಸಲಾಗಿದೆ. ಚಿನ್ನ ಖರೀದಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ವಾಮಾ ಮಾರ್ಗದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು
ಇದಕ್ಕಾಗಿ ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮೂಲಕ ಹಣ ವರ್ಗಾಯಿಸುವಂತೆ ಕನ್ನಾಳೆ ಸೂಚಿಸಿದ್ದ. ಕನ್ನಾಳೆ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ 11 ಮಂದಿ ಆಕಾಂಕ್ಷಿ ಅಭ್ಯರ್ಥಿಗಳಿಂದ ಹಣ ಪಾವತಿ ಸುಮಾರು 60 ರಿಂದ 70 ಲಕ್ಷ ರೂ.ಗಳನ್ನು ಪಾವತಿಸಿರುವ ವಿಷಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕನ್ನಾಳೆಯ ತವರು ಜಿಲ್ಲೆ ಬೀದರ್‌ನಲ್ಲಿ 2019ರಲ್ಲಿ ಜ್ಞಾನೇಂದ್ರ ಸಿಇಓ ಆಗಿದ್ದಾಗ ಪರಿಚಯವಾಗಿದ್ದು, ಐಎಎಸ್ ಅಧಿಕಾರಿ ಪರಿಚಯ ಬಳಿಕ ವಾಣಿಜ್ಯ ಹಿತಾಸಕ್ತಿಗಳನ್ನು ಬೆಳೆಸಿಕೊಂಡಿದ್ದ. ಬಳಿಕ ಜ್ಞಾನೇಂದ್ರ 2024ರ ಮಾರ್ಚ್ ನಿಂದ 2026ರ ಮಾರ್ಚ್ ವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ವೇಳೆ ಕನ್ನಾಳೆ ಜೊತೆಗೆ ಅವ್ಯವಹಾರಗಳು ಮತ್ತಷ್ಟು ಹೆಚ್ಚಾಗಿತ್ತು.
Published On - 10:34 am, Sun, 20 September 26