ಕೆಜೆಪಿ ಕಟ್ಟುವಾಗಲೂ ಯಡಿಯೂರಪ್ಪನವರಿಗೆ ಬೇಡವೆಂದೇ ಹೇಳಿದ್ದೆ.. ಎಂಬುದನ್ನು ಸ್ಮರಿಸಿದ ಕೆ.ಎಸ್.ಈಶ್ವರಪ್ಪ

ಕೆಲವು ವಿಚಾರದಲ್ಲಿ ಮುಖ್ಯಮಂತ್ರಿಗಳು ನನಗೆ ದೂರ ಎನ್ನುವುದನ್ನು ಒಪ್ಪುತ್ತೇನೆ. ಅವರು ಬೇರೆ ಪಕ್ಷಕ್ಕೆ ಹೋಗಿ ಮತ್ತೆ ಬಿಜೆಪಿಗೆ ಬಂದರು. ಆದರೂ ಪಕ್ಷ, ರಾಜ್ಯದ ವಿಚಾರವಾಗಿ ಹೊಂದಿಕೊಂಡು ಹೋಗ್ತಿದ್ದೇವೆ. ಅನುದಾನದ ವಿಚಾರಕ್ಕೆ ಬಂದಾಗ ನನ್ನ ಇಲಾಖೆಯ ಅನುದಾನ ಹಂಚಿಕೆ ನನ್ನ ಅಧಿಕಾರ. ನಾನು ಇಲಾಖೆಯ ಪೋಸ್ಟ್‌ಮ್ಯಾನ್ ಅಲ್ಲ.

ಕೆಜೆಪಿ ಕಟ್ಟುವಾಗಲೂ ಯಡಿಯೂರಪ್ಪನವರಿಗೆ ಬೇಡವೆಂದೇ ಹೇಳಿದ್ದೆ.. ಎಂಬುದನ್ನು ಸ್ಮರಿಸಿದ ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ ಮತ್ತು ಬಿ ಎಸ್ ಯಡಿಯೂರಪ್ಪ
Follow us
Skanda
| Updated By: ಸಾಧು ಶ್ರೀನಾಥ್​

Updated on:Apr 02, 2021 | 2:13 PM

ಕೆಜೆಪಿ ಕಟ್ಟುವಾಗಲೂ ನಾನು ಯಡಿಯೂರಪ್ಪನವರಿಗೆ ಬೇಡವೆಂದೇ ಹೇಳಿದ್ದೆ. ಆಗಲೂ ನಾವು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆವು. ಇಂದಿಗೂ ಅವರೊಂದಿಗೆ ನನಗೆ ಯಾವುದೇ ವೈಯಕ್ತಿಕ ಮನಸ್ತಾಪವಾಗಲೀ ದ್ವೇಷವಾಗಲೀ ಇಲ್ಲ. ಆದರೆ, ನನಗೆ ಗೊತ್ತಿಲ್ಲದೆ ಅವರು ಮಂತ್ರಿಗಳಿಗೆ, ಶಾಸಕರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ನನ್ನ ಗಮನಕ್ಕೆ ಬಾರದಂತೆ ಬೆಂಗಳೂರು ನಗರ ಜಿಲ್ಲೆಗೆ ₹63 ಕೋಟಿ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಆ ಅನುದಾನವನ್ನು ರದ್ದು ಮಾಡಲಾಗಿದೆ. ಇಷ್ಟಕ್ಕೂ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡುವುದಕ್ಕೆ ನನ್ನ ತಕರಾರಿಲ್ಲ. ಆದರೆ, ಅದು ನಿಯಮಾನುಸಾರ ಆಗಬೇಕಷ್ಟೇ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಎಸ್​.ಈಶ್ವರಪ್ಪ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕೆಲವು ವಿಚಾರದಲ್ಲಿ ಮುಖ್ಯಮಂತ್ರಿಗಳು ನನಗೆ ದೂರ ಎನ್ನುವುದನ್ನು ಒಪ್ಪುತ್ತೇನೆ. ಅವರು ಬೇರೆ ಪಕ್ಷಕ್ಕೆ ಹೋಗಿ ಮತ್ತೆ ಬಿಜೆಪಿಗೆ ಬಂದರು. ಆದರೂ ಪಕ್ಷ, ರಾಜ್ಯದ ವಿಚಾರವಾಗಿ ಹೊಂದಿಕೊಂಡು ಹೋಗ್ತಿದ್ದೇವೆ. ಅನುದಾನದ ವಿಚಾರಕ್ಕೆ ಬಂದಾಗ ನನ್ನ ಇಲಾಖೆಯ ಅನುದಾನ ಹಂಚಿಕೆ ನನ್ನ ಅಧಿಕಾರ. ನಾನು ಇಲಾಖೆಯ ಪೋಸ್ಟ್‌ಮ್ಯಾನ್ ಅಲ್ಲ. ನೇರವಾಗಿ ಹಣ ಬಿಡುಗಡೆ ಮಾಡಿದ ನಂತರ ಸಚಿವರ ಗಮನಕ್ಕೆ ತನ್ನಿ ಎನ್ನುವುದು ಸರಿಯಲ್ಲ. ನಾನು ಈ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ನಾನು ಯಾರಿಗೂ ಬಗ್ಗುವ ಪ್ರಶ್ನೆಯೇ ಇಲ್ಲ! ನಾಲ್ವರು ಸಚಿವರು, ನಾಲ್ವರು ಶಾಸಕರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಕೇಳಿದ್ದಾರೆ, ಖಾತೆ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. ಇಂತಹ ಯಾವುದಕ್ಕೂ ನಾನು ಬಗ್ಗುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ. ರಾಜ್ಯದ ಹಲವು ಶಾಸಕರು, ಸಚಿವರು, ಸಂಸದರು, ಬಿಜೆಪಿ ಪದಾಧಿಕಾರಿಗಳು ನನ್ನ ಪರವಾಗಿ ಮಾತಾಡಿದ್ದಾರೆ. ಸಹಿ ಸಂಗ್ರಹಿಸುವ ಬಗ್ಗೆಯೂ ಅವರು ಕೇಳಿದ್ದಾರೆ. ಆದರೆ, ಸಹಿ ಸಂಗ್ರಹ ಮಾಡುವುದು ಬೇಡ ಎಂದು ಹೇಳಿದ್ದೆ. ಶಾಸಕರು ಸಹಿ ಸಂಗ್ರಹ ಮಾಡುವುದು ಸಹ ತಪ್ಪು. ಇದು ನನ್ನ, ಯಡಿಯೂರಪ್ಪ ನಡುವಿನ ವೈಯಕ್ತಿಕ ವಿಚಾರವಲ್ಲ, ನೀತಿ, ನಿಯಮ ಜಾರಿ ಮಾಡಬೇಕೆಂಬ ನನ್ನ ಪ್ರಯತ್ನವಷ್ಟೇ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಾನು ರೆಬೆಲ್​ ಅಲ್ಲ, ಲಾಯಲ್.. ನನ್ನ ಅಪ್ಪ-ಅಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡ್ತಿದ್ರು, ನನ್ನನ್ನು ಈ ಪಕ್ಷ ಡಿಸಿಎಂ ಮಾಡಿದೆ: ಕೆ.ಎಸ್​. ಈಶ್ವರಪ್ಪ

Published On - 1:24 pm, Fri, 2 April 21

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ