KSCCF Recruitment 2021: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ
KSCCF Recruitment 2021: ಮಾರ್ಚ್ 5, 2021ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಏಪ್ರಿಲ್ 5ರ ವರೆಗೂ ಈ ಅವಕಾಶ ಇರಲಿದೆ. ಅಭ್ಯರ್ಥಿಗಳ ಅರ್ಹತೆ, ವಯೋಮಾನ ಮಿತಿ, ಅನುಭವ, ಇತ್ಯಾದಿಗಳನ್ನು ತಿಳಿಯಲು ಕೆಳಗಿನ ವಿವರ ಗಮನಿಸಬಹುದು.

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ (KSCCF) ಸಂಸ್ಥೆಯು ಅಕೌಂಟೆಂಟ್, ಪ್ರಥಮ ದರ್ಜೆ ಸಹಾಯಕ, ಸೇಲ್ಸ್ ಸಹಾಯಕ, ಟೈಪಿಸ್ಟ್, ಗುಮಾಸ್ತ ಮತ್ತು ಜೂನಿಯರ್ ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೋಡ್ ಮುಖಾಂತರ ಏಪ್ರಿಲ್ 5, 2021ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸುಮಾರು 45 ಸ್ಥಾನಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. recruitapp.in/ksccf2021 ಮೂಲಕ, ಆನ್ಲೈನ್ ವಿಧಾನದಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದು.
ಮಾರ್ಚ್ 5, 2021ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಏಪ್ರಿಲ್ 5ರ ವರೆಗೂ ಈ ಅವಕಾಶ ಇರಲಿದೆ. ಅಭ್ಯರ್ಥಿಗಳ ಅರ್ಹತೆ, ವಯೋಮಾನ ಮಿತಿ, ಅನುಭವ, ಇತ್ಯಾದಿಗಳನ್ನು ತಿಳಿಯಲು ಕೆಳಗಿನ ವಿವರ ಗಮನಿಸಬಹುದು.
ಉದ್ಯೋಗಾವಕಾಶ ಸಾರಾಂಶ ನೋಟಿಫಿಕೇಷನ್ ದಿನಾಂಕ: ಮಾರ್ಚ್ 8, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 5, 2021 ಸ್ಥಳ: ಬಾಗಲಕೋಟೆ ಮಾರ್ಚ್ 5, 2021ರಿಂದ ಏಪ್ರಿಲ್ 5, 2021ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ಅವಕಾಶವಿರುವ ಹುದ್ದೆಗಳು: ಅಕೌಂಟೆಂಟ್: 5 ಹುದ್ದೆಗಳು ಪ್ರಥಮ ದರ್ಜೆ ಸಹಾಯಕ: 10 ಹುದ್ದೆಗಳು ಸೇಲ್ಸ್ ಸಹಾಯಕ: 10 ಹುದ್ದೆಗಳು ಟೈಪಿಸ್ಟ್: 8 ಹುದ್ದೆಗಳು ಗುಮಾಸ್ತ: 10 ಹುದ್ದೆಗಳು ಜೂನಿಯರ್ ಫಾರ್ಮಸಿಸ್ಟ್: 2 ಹುದ್ದೆಗಳು
ಕೆಲಸಕ್ಕೆ ಬೇಕಾಗುವ ಅರ್ಹತೆ ವಿವರಗಳು: ಎಸ್ಎಸ್ಎಲ್ಸಿ/ ಪಿಯುಸಿ/ ಪದವಿ ಅಥವಾ ಡಿಪ್ಲೊಮ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು. 18ರಿಂದ 35 ವರ್ಷದ ಒಳಗಿನ ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ನಿಗದಿತ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಾನ ಮಿತಿಯಲ್ಲಿ ವ್ಯತ್ಯಾಸ ಇರುತ್ತದೆ.
ವಿವಿಧ ಹುದ್ದೆಗಳಿಗೆ ನೀಡುವ ಸಂಬಳ ಈ ರೀತಿ ಇದೆ: KSCCF ಆಹ್ವಾನಿಸಿರುವ ಅಕೌಂಟೆಂಟ್ ಹುದ್ದೆಗೆ ಮಾಸಿಕ ₹ 19,000 ರಿಂದ ₹ 34,500 ಪ್ರಥಮ ದರ್ಜೆ ಸಹಾಯಕರಿಗೆ ₹ 13,600 ರಿಂದ ₹ 26,000 ಸೇಲ್ಸ್ ಅಸಿಸ್ಟೆಂಟ್ ಹಾಗೂ ಟೈಪಿಸ್ಟ್ ಹುದ್ದೆಗೆ ₹ 12,500 ರಿಂದ ₹ 24,000 ಗುಮಾಸ್ತ ಹುದ್ದೆಗೆ ₹ 10,400 ರಿಂದ 16,400 ಜೂನಿಯರ್ ಫಾರ್ಮಸಿಸ್ಟ್ ಹುದ್ದೆಗೆ ₹ 14,550 ರಿಂದ 26,700 ವರೆಗೆ ವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು recruitapp.in/ksccf2021 ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಕೆ ಬಳಿಕ ಅಪ್ಲಿಕೇಷನ್ನ ಪ್ರಿಂಟ್ ತೆಗೆದು ಇರಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: UPSC Recruitment 2021: ಯುಪಿಎಸ್ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
Published On - 11:12 pm, Mon, 29 March 21