Maha Shivratri 2024: ಮಹಾ ಶಿವರಾತ್ರಿ: ಕೆಎಸ್ಆರ್​ಟಿಸಿಯಿಂದ 1500 ಹೆಚ್ಚುವರಿ ವಿಶೇಷ ಬಸ್, ಇಲ್ಲಿದೆ ವಿವರ

KSRTC Special Bus for Maha Shivaratri: ಮಹಾಶಿವರಾತ್ರಿ ಹಬ್ಬದ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಶಿವರಾತ್ರಿ ಮತ್ತು ದೀರ್ಘ ವಾರಾಂತ್ಯದ ಕಾರಣ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ ಮತ್ತು ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ. ಟಿಕೆಟ್ ಬುಕಿಂಗ್, ಎಲ್ಲಿಗೆ ಎಲ್ಲ ವಿಶೇಷ ಬಸ್ ಇವೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

Maha Shivratri 2024: ಮಹಾ ಶಿವರಾತ್ರಿ: ಕೆಎಸ್ಆರ್​ಟಿಸಿಯಿಂದ 1500 ಹೆಚ್ಚುವರಿ ವಿಶೇಷ ಬಸ್, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
| Updated By: Digi Tech Desk

Updated on:Mar 05, 2024 | 11:22 AM

ಬೆಂಗಳೂರು, ಮಾರ್ಚ್​ 5: ಮಹಾ ಶಿವರಾತ್ರಿ (Maha Shivratri 2024) ಮತ್ತು ವಾರಾಂತ್ಯದ (Weekend) ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಯನ್ನು ಪೂರೈಸಲು ಮಾರ್ಚ್ 7 ಮತ್ತು 10 ರ ನಡುವೆ ಬೆಂಗಳೂರಿನಿಂದ ವಿವಿಧ ನಗರಗಳಿಗೆ 1,500 ಹೆಚ್ಚುವರಿ ಬಸ್ ಸೇವೆ ಒದಗಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸೋಮವಾರ ತಿಳಿಸಿದೆ. ಅದೇ ರೀತಿ ಮಾರ್ಚ್​ 10 ಮತ್ತು 11ರಂದು ವಾಪಸ್ ಬರುವವರಿಗಾಗಿ ವಿವಿಧ ನಗರಗಳಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದಲೂ ವಿಶೇಷ ಬಸ್​​ಗಳು ಕಾರ್ಯಾಚರಿಸಲಿವೆ.

ಎಲ್ಲಿಗೆಲ್ಲ ಹೆಚ್ಚುವರಿ ಬಸ್​ಗಳು?

ಈ ಹೆಚ್ಚುವರಿ ವಿಶೇಷ ಬಸ್ಸುಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮತ್ತಿತರ ಕಡೆಗಳಿಗೆ ಸಂಚರಿಸಲಿವೆ.

ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಕಡೆಗೆ ವಿಶೇಷ ಬಸ್‌ಗಳು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ.

ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿರಾಪಳ್ಳಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಝಿಕ್ಕೋಡ್, ತಮಿಳುನಾಡು ಮತ್ತು ಕೇರಳದ ಇತರ ಸ್ಥಳಗಳಿಗೆ ಎಲ್ಲಾ ಪ್ರೀಮಿಯಂ ವಿಶೇಷ ಬಸ್‌ಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿವೆ ಎಂದು ಕೆಎಸ್​ಆರ್​​​ಟಿಸಿ ತಿಳಿಸಿದೆ.

ನಂತರ, ಮಾರ್ಚ್ 10 ಮತ್ತು 11 ರಂದು ಕರ್ನಾಟಕದ ವಿವಿಧ ನಗರಗಳಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ವಿಶೇಷ ಬಸ್‌ಗಳ ಸೇವೆ ಒದಗಿಸಲಾಗುವುದು ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ. ಇದರಿಂದ ಹಬ್ಬ ಮುಗಿಸಿ ಊರುಗಳಿಂದ ಬೆಂಗಳೂರಿಗೆ ವಾಪಸಾಗುವವರಿಗೆ ಮತ್ತು ರಜೆಗೆಂದು ಬೆಂಗಳೂರಿಗೆ ಬಂದವರಿಗೆ ಊರುಗಳಿಗೆ ತೆರಳಲು ಅನುಕೂಲವಾಗಲಿದೆ.

ಇದನ್ನೂ ಓದಿ: Mahashivratri 2024: ಮಹಾಶಿವರಾತ್ರಿಯಂದು ಶಿವನಿಗೆ ಈ ವಸ್ತುಗಳನ್ನು ಅರ್ಪಿಸಿ

ಸಾಮಾನ್ಯವಾಗಿ ಧೀರ್ಘ ರಜೆ, ವಾರಾಂತ್ಯ ಹಾಗೂ ಹಬ್ಬಗಳ ಸಂದರ್ಭಗಳಲ್ಲಿ ಕೆಎಸ್​ಆರ್​ಟಿಸಿ ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸುತ್ತದೆ. ಈ ಹಿಂದೆಯೂ ಅನೇಕ ಬಾರಿ ಸಂಸ್ಥೆಯು ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸಿದೆ.

ಶಿವರಾತ್ರಿ ಯಾವಾಗ?

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿ ಈ ಬಾರಿ ಮಾರ್ಚ್​ 8ರಂದು ಆಚರಿಸಲ್ಪಡಲಿದೆ. ಈ ದಿನ, ಶಿವ ದೇವರನ್ನು ಮೆಚ್ಚಿಸಲು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ವಿಶೇಷ ಪೂಜೆಯನ್ನು ಮಾಡುತ್ತಾರೆ. ಶಿವರಾತ್ರಿಯ ದಿನ ಪ್ರದೋಷ ಕಾಲ, ಅಂದರೆ ಸೂರ್ಯಾಸ್ತದ ನಂತರ ರಾತ್ರಿ ಮತ್ತು ಹಗಲಿನ ನಡುವಿನ ಸಮಯವನ್ನು ಪೂಜೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 am, Tue, 5 March 24