ರಾಜ್ಯದಲ್ಲಿ ಸರ್ಕಾರಿ ರೆಡ್​ ಬಸ್ ಸಂಚಾರಕ್ಕೆ ಸಿಕ್ತು ಹಸಿರು ನಿಶಾನೆ! BMTCಗೆ​?

ಬೆಂಗಳೂರು: ಕಾತುರದಿಂದ ಕಾಯುತ್ತಿದ್ದ ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಿಂದಾಗಿ ರಸ್ತೆಗಿಳಿಯದೇ ಸ್ತಗಿತಗೊಂಡಿದ್ದ ಕೆಂಪು ಬಸ್​ಗಳು ನಾಳೆಯಿಂದ ರಸ್ತೆಗಿಳಿಯಲಿವೆ. ನಾಳೆಯಿಂದ ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಒಂದು ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ರಾಜ್ಯದೊಳಗೆ ಮಾತ್ರ KSRTC ಬಸ್‌ಗಳ ಸಂಚಾರ ನಡೆಸಲಿವೆ. ಬಿಎಂಟಿಸಿ ಬಸ್ ಸಂಚಾರ ಬೇಡ:ಸವದಿ ಮೇ ಅಂತ್ಯದವರೆಗೆ ಬಿಎಂಟಿಸಿ ಬಸ್ ಸಂಚಾರ ಬೇಡ ಎಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ […]

ರಾಜ್ಯದಲ್ಲಿ ಸರ್ಕಾರಿ ರೆಡ್​ ಬಸ್ ಸಂಚಾರಕ್ಕೆ ಸಿಕ್ತು ಹಸಿರು ನಿಶಾನೆ! BMTCಗೆ​?
ಕೆಎಸ್​ಆರ್​ಟಿಸಿ ಬಸ್​
Follow us
ಸಾಧು ಶ್ರೀನಾಥ್​
|

Updated on:May 18, 2020 | 1:06 PM

ಬೆಂಗಳೂರು: ಕಾತುರದಿಂದ ಕಾಯುತ್ತಿದ್ದ ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಿಂದಾಗಿ ರಸ್ತೆಗಿಳಿಯದೇ ಸ್ತಗಿತಗೊಂಡಿದ್ದ ಕೆಂಪು ಬಸ್​ಗಳು ನಾಳೆಯಿಂದ ರಸ್ತೆಗಿಳಿಯಲಿವೆ. ನಾಳೆಯಿಂದ ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಒಂದು ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ರಾಜ್ಯದೊಳಗೆ ಮಾತ್ರ KSRTC ಬಸ್‌ಗಳ ಸಂಚಾರ ನಡೆಸಲಿವೆ.

ಬಿಎಂಟಿಸಿ ಬಸ್ ಸಂಚಾರ ಬೇಡ:ಸವದಿ ಮೇ ಅಂತ್ಯದವರೆಗೆ ಬಿಎಂಟಿಸಿ ಬಸ್ ಸಂಚಾರ ಬೇಡ ಎಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಸಲಹೆ ನೀಡಿದ್ದಾರೆ.

ಕೆಎಸ್ಆರ್​ಟಿಸಿ ಬಸ್ ಸಂಚಾರಕ್ಕೆ ಪಾಲಿಸಬೇಕಿರುವ ನಿಯಮಗಳು: -ಪ್ರತಿ KSRTC ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ -ಎಸಿ ಬಸ್​ಗಳ ಸಂಚಾರಕ್ಕೆ ಅನುಮತಿ ಇಲ್ಲ -ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸೋದು ಕಡ್ಡಾಯ -ಡಬಲ್​ ಸೀಟ್​ನಲ್ಲಿ ಒಬ್ಬರಿಗೆ, ಮೂರು ಆಸನದ ಸೀಟ್​ನಲ್ಲಿ ಇಬ್ಬರಿಗೆ ಮಾತ್ರ ಕೂರಲು ಅವಕಾಶ -ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು -ಬಸ್ ಹತ್ತುವ ಮುನ್ನ ಥರ್ಮಲ್ ಸ್ಕ್ಯಾನ್, ಕೈಗೆ ಸ್ಯಾನಿಟೈಸರ್ ಹಾಕುವುದು ಕಡ್ಡಾಯ -ಬಸ್​ನಲ್ಲಿ ನಿಂತು ಕೊಂಡು ಪ್ರಯಾಣಿಸಲು ಅವಕಾಶ ಇಲ್ಲ -ಕಂಟೇನ್ಮೆಂಟ್ ಝೋನ್‌ಗಳಲ್ಲಿ ಬಸ್ ನಿಲ್ಲಿಸಲ್ಲ -ಮಾರ್ಗ ಮಧ್ಯದಲ್ಲಿ ತಿಂಡಿ ಊಟಕ್ಕೆ ನಿಲ್ಲಿಸದಿರಲು ಪ್ಲಾನ್‌ -ಪ್ರಯಾಣಿಕರು ತಮ್ಮ ವಿಳಾಸ, ಮೊಬೈಲ್, ಹೆಸರು ಕಡ್ಡಾಯವಾಗಿ ನೀಡಬೇಕು -ಪ್ರತಿ ಬಸ್ ನಿಲ್ದಾಣದಲ್ಲಿ ಹೆಲ್ತ್ ಚೆಕ್ ಮಾಡುವುದು ಕಡ್ಡಾಯ -ಬಸ್ ಒಳಗೆ ಒಬ್ಬ ಪ್ರಯಾಣಿಕನಿಂದ ಮತ್ತೊಮ್ಮೆ ಪ್ರಯಾಣಿಕ ನೀರು ಕೇಳಿ ಕುಡಿಯುವಂತಿಲ್ಲ. -ಬಳಕೆ ಮಾಡಿದ ಬಾಟಲ್ ಬೇರೆಯವರು ಬಳಸುವಂತಿಲ್ಲ -ಲಗೇಜ್​ಗಳನ್ನ ತಂದರೆ ಸ್ಯಾನಿಟೈಸರ್ ಸ್ಪ್ರೇ ಕಡ್ಡಾಯ ಹಾಗೂ 70 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಮಕ್ಕಳಿಗೆ ಬಸ್ ಪ್ರಯಾಣಕ್ಕೆ ಅವಕಾಶ ನೀಡಬೇಕ ಎಂಬುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.

Published On - 12:49 pm, Mon, 18 May 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ