AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಕ್ಕೆಯಲ್ಲಿ ಚಂಪಾ ಷಷ್ಠಿ ಬಳಿಕ ನಡೆಯುವ ಕುಮಾರಧಾರ ವೈಭವದ ಬಗ್ಗೆ ನಿಮಗೆಷ್ಟು ಗೊತ್ತು?

ಚಂಪಾಷಷ್ಠಿ ಉತ್ಸವದ ನಂತರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತೊಂದು ವಿಶೇಷ ಸಂಪ್ರದಾಯ ನಡೆಸಲಾಗುತ್ತೆ. ವರ್ಷಕ್ಕೊಮ್ಮೆ ನಡೆಯುವ ಆ ಅಪರೂಪದ ಘಟನೆ ಭಕ್ತರಿಗೆ ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ನಡೆಯುವ ಚಾರಣದಲ್ಲಿ ಅರ್ಚಕರು ಮತ್ತು ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ. ಹಾಗಾದ್ರೆ ಆ ವಿಶೇಷ ಸಂಪ್ರದಾಯ ಯಾವುದೆಂದು ತಿಳಿಯಿರಿ.

ಕುಕ್ಕೆಯಲ್ಲಿ ಚಂಪಾ ಷಷ್ಠಿ ಬಳಿಕ ನಡೆಯುವ ಕುಮಾರಧಾರ ವೈಭವದ ಬಗ್ಗೆ ನಿಮಗೆಷ್ಟು ಗೊತ್ತು?
ಕುಕ್ಕೆಯಲ್ಲಿ ಚಂಪಾ ಷಷ್ಠಿ ಬಳಿಕ ನಡೆಯುವ ಕುಮಾರಧಾರ ವೈಭವದ ಬಗ್ಗೆ ನಿಮಗೆಷ್ಟು ಗೊತ್ತು?
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 22, 2024 | 9:11 PM

Share

ಮಂಗಳೂರು, ಡಿಸೆಂಬರ್​ 22: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subramanya). ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ. ಕುಕ್ಕೆಪರದೊಡೆಯ ಪ್ರಾಕೃತಿಕ ಸೌಂದರ್ಯದ ನೆಲೆವೀಡು. ಪುರಾಣ ಪ್ರಸಿದ್ದ ಹಿನ್ನೆಲೆಯ ಸ್ವಯಂ ವ್ಯಕ್ತ ಪುಣ್ಯ ಭೂಮಿ. ನಾಗದೋಷ ಪರಿಹಾರಕ್ಕೆ ಜಾಗತಿಕವಾಗಿ ಮನ್ನಣೆ ಗಳಿಸಿದ ರಾಜ್ಯದ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ. ಇಂತಹ ಪಾವನ ಪುಣ್ಯ ಕ್ಷೇತ್ರದಲ್ಲಿಂದು ಅತ್ಯಂತ ಶ್ರದ್ಧಾ ಭಕ್ತಿಯ ಚಂಪಾಷಷ್ಠಿ ಉತ್ಸವ ಬಳಿಕ ಚಾರಣ ಮಾಡಿ ಕಾಡಿನಲ್ಲಿ ಒಂದು ಪೂಜೆ ಆಗುತ್ತೆ ಅನ್ನೊದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ.

ಏನಿದು ಕುಮಾರ ಪರ್ವತಾರೋಹಣ?

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಮಣ್ಣಿನಲ್ಲಿ ನಡೆಯುವ ಚಂಪಾ ಷಷ್ಠಿ ಉತ್ಸವಕ್ಕೆ ಹೆಚ್ಚಿನ ವಿಶೇಷತೆಯಿದೆ. ಕಳೆದ ವಾರವಷ್ಟೆ ಚಂಪಾ ಷಷ್ಠಿ ಸಂಪನ್ನವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಆಗಿ ಕಿರು ಷಷ್ಠಿ ಆಗುವ ಮೊದಲು ಒಂದು ಸಂಪ್ರದಾಯ ನಡೆಸಲಾಗುತ್ತೆ. ಅದೇ ಕುಮಾರ ಪರ್ವತಾರೋಹಣ.

ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ದೈವಾರಾಧನೆ ವಿವಾದ: ಕೋರ್ಟ್​ ಮೆಟ್ಟಿಲೇರಿದ ಮೊಗೇರ ಸಮುದಾಯ

ಪಶ್ಚಿಮಘಟ್ಟ ಸಾಲಿನಲ್ಲಿ ಬರುವ ಕುಮಾರಪರ್ವತ ಬೆಟ್ಟಕ್ಕೆ ಅರಣ್ಯ ಇಲಾಖೆ ವತಿಯಿಂದ ಜನರು ಟ್ರಿಕ್ಕಿಂಗ್ ಹೋಗಬಹುದು. ಟ್ರೆಕ್ಕಿಂಗ್ ಹೋಗುವುದು ಮಾಮೂಲಿ. ಆದರೆ ದೇವಸ್ಥಾನದ ವತಿಯಿಂದ ವರ್ಷಕ್ಕೆ ಒಂದು ಭಾರೀ ಪರ್ವತರೋಹಣ ಮಾಡಲಾಗುತ್ತೆ. ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳ ತಂಡ ಟ್ರೆಕ್ಕಿಂಗ್ ಮಾಡುವುದು ಅಡ್ವೆಂಚರ್​ಗಾಗಿ ಅಲ್ಲ. ಕುಕ್ಕೆ ಒಡೆಯ ಕುಮಾರಸ್ವಾಮಿಯ ಪಾದ ಪೂಜೆಗೆ. ಹೌದು ಕುಕ್ಕೆ ಸುಬ್ರಹ್ಮಣ್ಯದಿಂದ 15 ಕಿ.ಮೀ ಕಾಡಿನ ದುರ್ಗಮ ಹಾದಿಯಲ್ಲಿ ಸಾಗಿದರೆ ಸಿಗುತ್ತೆ ಕುಮಾರಪರ್ವತ ಬೆಟ್ಟ. ಇದೇ ಬೆಟ್ಟಕ್ಕೆ ಕುಮಾರಸ್ವಾಮಿ ದೇವಲೋಕದಿಂದ ಇಳಿದ್ದಿದ್ದು ಅನ್ನೊ ಪ್ರತೀತಿ ಇದೆ. ಅದರ ಕುರುಹು ಆಗಿ ಬೆಟ್ಟದ ತುದಿಯಲ್ಲಿ ಕುಮಾರಸ್ವಾಮಿಯ ಪಾದದ ಗುರುತು ಇದೆ. ಅದರ ಪಕ್ಕದಲ್ಲಿ ವಾಸುಕಿಯ ಗುರುತು ಇದೆ.

ಕುಮಾರಸ್ವಾಮಿಗೆ ವಿಶೇಷ ಪೂಜೆ

ಹಿಂದಿನ ದಿನ ಅರ್ಚಕರ ತಂಡ ಬೆಟ್ಟಕ್ಕೆ ಏರಿ ಅಲ್ಲಿ ಭಟ್ಟರ ಮನೆ ಎಂಬ ಕಾಡಿನಲ್ಲಿರುವ ಏಕೈಕ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಮಾರನೇ ದಿನ ಕುಮಾರಸ್ವಾಮಿಯ ಪಾದಕ್ಕೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡುತ್ತಾರೆ. ಅಲ್ಲಿಗೆ ಬಂದ ಭಕ್ತರಿಗೆ ಪ್ರಸಾದವನ್ನು ಕೂಡ ನೀಡುತ್ತಾರೆ. ಇನ್ನು ಕುಮಾರಸ್ವಾಮಿ ಇಲ್ಲಿಗೆ ಇಳಿದ ಬಳಿಕ ಇಲ್ಲೇ ತಾರಕಾಸುರನ ವಧೆ ಹಾಗೂ ಕುಮಾರಸ್ವಾಮಿಯ ವಿವಾಹ ಇದೇ ಜಾಗದಲ್ಲಿ ನಡೆಯುತ್ತೆ ಅನ್ನೊ ಐತಿಹ್ಯ ಇದೆ. ಬಳಿಕ ಇಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನೆಲೆಸುತ್ತಾರೆ ಅನ್ನೊ ಪುರಾಣ ಇದೆ.

ಇನ್ನು ತಲಾತಲಾಂತರಗಳಿಂದ ಇಲ್ಲಿಗೆ ಪೂಜೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಅಂದರೆ 2003 ರವರೆಗೂ ಪೂಜೆ ನಡೆಸುತ್ತಿರಲಿಲ್ಲ. ಆಗ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದಂತೆ ಮತ್ತೆ ಇಲ್ಲಿ ವರ್ಷಕ್ಕೆ ಒಂದು ಭಾರೀ ಪೂಜೆಯನ್ನು ಮಾಡಲಾಗುತ್ತೆ ಎಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪ್ರಧಾನ ಅರ್ಚಕರಾದ ಸೀತಾರಾಮ ಎಡಪಡಿತ್ತಾಯ ಹೇಳಿದ್ದಾರೆ.

ದುರ್ಗಮ ಕಾಡಿನ ಹಾದಿಯಲ್ಲಿ ಚಾರಣ

ಇನ್ನು ದೇವಸ್ಥಾನದ ವತಿಯಿಂದ ಅರ್ಚಕವೃಂದ, ಸಿಬ್ಬಂದಿಗಳು ಮತ್ತು ಸ್ಥಳೀಯರು ಹಾಗೂ ಭಕ್ತರನ್ನು ಒಳಪಡಿಸಿ 150 ಜನರಿಗೆ ಅರಣ್ಯ ಇಲಾಖೆ ಚಾರಣ ಮಾಡಲು ಅನುಮತಿ ನೀಡಿತ್ತು. ಇದನ್ನು ಹೊರತುಪಡಿಸಿ ದಿನಕ್ಕೆ 350 ಜನರಿಗೆ ಆನ್​ಲೈನ್​ನಿಂದ ಬುಕ್ ಮಾಡಿಕೊಂಡು ಟ್ರಕ್ಕಿಂಗ್ ಮಾಡಲು ನೀಡವು ಅವಕಾಶದಿಂದ 350 ಜನ ಚಾರಣಿಗರು ಭಾಗಿಯಾಗಿದ್ದರು. ಆದಿ ಸುಬ್ರಹ್ಮಣ್ಯ ಬಳಿಯಿಂದ 16 ಕಿ.ಮೀ ನಡೆದು ಕೆಲವರು ಬಂದರೆ ಕೊಡುಗು ಜಿಲ್ಲೆಯ ಪುಷ್ಪಗಿರಿ ಟ್ರೆಕ್ಕಿಂಗ್ ಪಾಯಿಂಟ್​ನಿಂದ 7 ಕಿ.ಮೀ ಕ್ರಮಿಸಿ ಕೆಲವರು ಆಗಮಿಸಿದ್ದರು. ದುರ್ಗಮವಾದ ಕಾಡಿನ ಹಾದಿಯಲ್ಲಿ ಸಾಗಿ ಕುಮಾರಪರ್ವತ ಏರಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಅಯ್ಯಪ್ಪಸ್ವಾಮಿ ಪವಾಡ: ಮಾಲೆ ಹಾಕಿದ ಬಳಿಕ ಬಾಲಕನಿಗೆ ಬಂತು ಮಾತು

ಇನ್ನು ಕುಮಾರಸ್ವಾಮಿ ಕಾಲಿಟ್ಟ ಜಾಗದಿಂದಲೇ ಕುಮಾರಧಾರ ಮತ್ತು ದರ್ಪಣ ತೀರ್ಥ ನದಿಗಳು ಉಗಮವಾಗುತ್ತೆ. ಇನ್ನು ಈ ಪೀಕ್​ಗೆ ಚಾರಣದ ಮೂಲಕ ತಲುಪುವುದೇ ಒಂದು ಅಡ್ವೆಂಚರ್. ಇನ್ನು ಇಲ್ಲಿನ ವಾತಾವಣಕ್ಕೆ ಜನರು ಫುಲ್ ಫಿದಾ ಆಗುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಈ ಪೂಜೆಯನ್ನು ಈ ಭಾರೀ ಸಾಕಷ್ಟು ಜನ ಭಕ್ತರು ಕಣ್ತುಂಬಿಕೊಂಡು ಕೃತಾರ್ಥರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.