ಮೂತ್ರ ವಿಸರ್ಜನೆ ವಿಚಾರಕ್ಕೆ ಕಿರಿಕ್: ಯುವಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ಸ್ಥಳೀಯ ಗ್ಯಾಂಗ್

ಲಿಂಗಸುಗೂರಿನಲ್ಲಿ ಯುವಕರ ಗುಂಪಿನ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿದೆ. ಮೂತ್ರ ವಿಸರ್ಜನೆ ವಿಚಾರದಲ್ಲಿ ಉಂಟಾದ ಜಗಳ ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ರಾಡ್, ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ನಡೆದಿದ್ದು, ಗಾಯಾಳುಗಳ ವಿರುದ್ಧವೂ ಪ್ರತಿ ದೂರು ದಾಖಲಾಗಿದೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಶುರುಮಾಡಿದ್ದಾರೆ.

ಮೂತ್ರ ವಿಸರ್ಜನೆ ವಿಚಾರಕ್ಕೆ ಕಿರಿಕ್: ಯುವಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ಸ್ಥಳೀಯ ಗ್ಯಾಂಗ್
ಮೂತ್ರ ವಿಸರ್ಜನೆ ವಿಚಾರಕ್ಕೆ ಕಿರಿಕ್: ಯುವಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ಸ್ಥಳೀಯ ಗ್ಯಾಂಗ್
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2024 | 6:19 PM

ರಾಯಚೂರು, ಡಿಸೆಂಬರ್​ 25: ಅತೀ ಕ್ಷುಲ್ಲಕ ಕಾರಣಕ್ಕೆ ದೊಡ್ಡ ಹೊಡೆದಾಟವೇ (Assault) ನಡೆದು ಹೋಗಿದೆ. ರಸ್ತೆ ಬದಿಯ ಅಂಗಡಿ ಬಳಿ ಊಟಕ್ಕೆಂದು ಹೋಗಿದ್ದ ಯುವಕರ ಗುಂಪ್ಪಿನ ಮೇಲೆ ಕೆಲ ಸ್ಥಳೀಯ ಕಿಡಿಗೇಡಿಗಳು ಅಟ್ಟಾಡಿಸಿ ಹೊಡೆದಿದ್ದಾರೆ. ರಾಡ್​, ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ. ಘಟನೆ ಸಂಬಂಧ ಗಾಯಾಳು ನೀಡಿರುವ ದೂರಿನನ್ವಯ ದಾದಾ ಪಟೇಲ್, ಫೇರೋಜ್ ಸೇರಿ ನಾಲ್ವರನ್ನ ಲಿಂಗಸುಗೂರು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.

ಮೂತ್ರ ವಿಸರ್ಜನೆ ವಿಚಾರವಾಗಿ ಹೊಡೆದಾಟ

ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಡಿಸೆಂಬರ್ 19 ರ ರಾತ್ರಿ 11 ಗಂಟೆ ಸುಮಾರಿಗೆ ಮಂಜುನಾಥ್, ಅನೀಲ್, ತಿಮ್ಮಣ್ಣ ಸೇರಿ ನಾಲ್ಕೈದು ಹುಡುಗರು ಊಟಕ್ಕೆ ಹೋಗಿದ್ದರು. ಇವರು ಲಿಂಗಸುಗೂರು ಪಟ್ಟಣದ ಪಕ್ಕದಲ್ಲಿರುವ ಕಸಬಾ ಲಿಂಗಸುಗೂರು ಗ್ರಾಮದವರು. ಯಾವುದೋ ಕೆಲಸಕ್ಕೆಂದು ಲಿಂಗಸುಗೂರಿಗೆ ಬಂದಿದ್ದರು. ಇದಾದ ಬಳಿಕ ರಾತ್ರಿ ಊಟಕ್ಕೆಂದು ಮಸ್ಕಿ ರಸ್ತೆಯ ತಳ್ಳುವ ಬಂಡಿ ಬಳಿ ಮಂಜುನಾಥ್ ಆ್ಯಂಡ್​ ಸ್ನೇಹಿತರು ಹೋಗಿದ್ದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನ: ಸಂತ್ರಸ್ತ ಬದುಕುಳಿದಿದ್ದೇ ಪವಾಡ!

ಈ ವೇಳೆ ತಿಮ್ಮಣ್ಣ ಅನ್ನೋ ಯುವಕ ತಳ್ಳುವ ಬಂಡಿಯಿದ್ದ ಸ್ವಲ್ಪ ದೂರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಆಗ ಅಲ್ಲಿದ್ದ ಕೆಲ ಸ್ಥಳೀಯರು ಅಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಅಂತ ಕೆಟ್ಟದಾಗಿ ಬೈದಿದ್ದರಂತೆ. ಆಗ ಮಾತಿಗೆ ಮಾತು ಬೆಳೆದು ದೊಡ್ಡ ಹೊಡೆದಾಟ ನಡೆದು ಹೋಗಿದೆ.

ಮನಸೋ ಇಚ್ಛೆ ಹಲ್ಲೆ

ಸ್ನೇಹಿತ ತಿಮ್ಮಣ್ಣಗೆ ಹೊಡೆಯುತ್ತಿದ್ದಂತೆ ಮಂಜುನಾಥ್, ಸುನೀಲ್ ಹಾಗೂ ಇತರರರು ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಕೆಲವರು ಬೇರೆಯವರನ್ನ ಫೋನ್ ಮಾಡಿ ಕರೆಸಿಕೊಂಡು ರಸ್ತೆಯಲ್ಲಿ ಅಟ್ಟಾಡಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ರಾಡ್, ಚಾಕು, ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಅಂತ ಗಾಯಾಳುಗಳು ಆರೋಪಿಸಿದ್ದಾರೆ.

ತಿಮ್ಮಣ್ಣ ಮೂತ್ರ ವಿಸರ್ಜನೆಯನ್ನ ತಳ್ಳುವ ಬಂಡಿ ಪಕ್ಕದಲ್ಲೇ ಮಾಡಿರಲಿಲ್ಲ. ರಾತ್ರಿ ಕತ್ತಲಾಗಿದ್ದ ಹಿನ್ನೆಲೆ ಬಂಡಿಗಳಿಂದ ದೂರದಲ್ಲೇ ಹೋಗಿದ್ದ. ಹಾಗೆ ಮಾಡ್ಬೇಡಿ ಅಂತ ಸುಮ್ಮನೇ ಹೇಳಬಹುದಿತ್ತು. ಆದರೆ ಕೆಟ್ಟದಾಗಿ ಬೈದಿದ್ದರಿಂದ ಮಾತಿಗೆ ಮಾತು ಬೆಳೆಯಿತು ಎಂದು ಗಾಯಾಳುಗಳು ಹೇಳಿದ್ದಾರೆ. ತಮ್ಮನ್ನ ಯಾಕುಬ್, ರಾಜಾಸಾಬ್ ಹಾಗೂ ಯಜೇಜ್ ಪಾಷಾ ಅನ್ನೋರ ಜೊತೆ ಹತ್ತಕ್ಕು ಹೆಚ್ಚು ಜನ ಸೇರಿಕೊಂಡು ಹೊಡೆದಿದ್ದಾರೆ ಅಂತ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯಲ್ಲಿ ಮಂಜುನಾಥ್, ಸುನೀಲ್​​, ತಿಮ್ಮಣ್ಣ ಹಾಗೂ ಅನೀಲ್​ಗೆ ಗಾಯಗಳಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿರುವ ಬೆನ್ನಲ್ಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಅಂತ ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ರಘುವೀರ್ ನಾಯಕ್​​ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್.. ಚೇಸ್ ಮಾಡಿಕೊಂಡು ಬಂದು ವ್ಯಕ್ತಿಯ ಕೈ ಕತ್ತರಿಸಿ ಪರಾರಿ..!

ಇತ್ತ ಘಟನೆ ಬೆನ್ನಲ್ಲೇ ಗಾಯಾಳು ಮಂಜುನಾಥ್ ಹಾಗೂ ಇತರರ ವಿರುದ್ಧ ಪ್ರತಿ ದೂರು ದಾಖಲಾಗಿದೆ. ಬೈಕ್​ನಲ್ಲಿ ಹೋಗುವಾಗ ಸುಖಾಸುಮ್ಮನೇ ನಮ್ಮ ಕಿಚಾಯಿಸಿದರು. ಅದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಅಂತ ಘಟನೆಗೆ ಸಾಕ್ಷಿಯಾಗಿರುವ ಕೆಲ ಸ್ಥಳೀಯರು ಲಿಂಗಸುಗೂರು ಠಾಣೆಯಲ್ಲೇ ಪ್ರತಿ ದೂರು  ದಾಖಲಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ