BJP candidates Fifth list: ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಕಣಕ್ಕೆ

ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್​ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ.

BJP candidates Fifth list: ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಕಣಕ್ಕೆ
ಬಿಜೆಪಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 24, 2024 | 9:47 PM

ಬೆಂಗಳೂರು, ಮಾರ್ಚ್​​ 24: ಲೋಕಸಭಾ ಚುನಾವಣೆಗೆ (Lok Sabha Elections) ಬಿಜೆಪಿ ಅಭ್ಯರ್ಥಿಳ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್​ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ.

ಯಾರಿಗೆಲ್ಲ ಟಿಕೆಟ್​

  • ರಾಯಚೂರು ಲೋಕಸಭಾ ಕ್ಷೇತ್ರ-ರಾಜಾ ಅಮರೇಶ್ವರ ನಾಯಕ
  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ-ಡಾ.ಕೆ.ಸುಧಾಕರ್​​​
  • ಉತ್ತರ ಕನ್ನಡ ಲೋಕಸಭಾ ಕ್ಷೇತ್ರ-ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೈತಪ್ಪಿದ ಟಿಕೆಟ್)
  • ಬೆಳಗಾವಿ ಲೋಕಸಭಾ ಕ್ಷೇತ್ರ-ಜಗದೀಶ್ ಶೆಟ್ಟರ್​
  • ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ಪೆಂಡಿಂಗ್

ಚಿತ್ರದುರ್ಗ ಬಿಜೆಪಿ ಟಿಕೆಟ್ ಪೆಂಡಿಂಗ್

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಹೈಕಮಾಂಡ್ ಇದ್ದಂತೆ ಕಾಣುತ್ತಿದೆ. ರಘುಚಂದನ್ ಹಾಗೂ ಗೋವಿಂದ ಕಾರಜೋಳ ನಡುವೆ ಟಿಕೆಟ್​ಗಾಗಿ ಫೈಟ್ ನಡೆಯುತ್ತಿದೆ. ಆದರೆ, ಕಾರಜೋಳ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ರಾಜ್ಯ ನಾಯಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸಲು ಹೈಕಮಾಂಡ್ ನಿರ್ಧರಿಸಿದೆ.

ಇದನ್ನೂ ಓದಿ: Congress 4th candidate list: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ; ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ

ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಡಾ.ಕೆ.ಸುಧಾಕರ್ ಪಾಲಾಗಿದೆ. ಕ್ಷೇತ್ರದ ಟಿಕೆಟ್ ತನ್ನ ಪುತ್ರ ಅಲೋಕ್​ಗೆ ಕೊಡಿಸಲು ಭಾರೀ ಪ್ರಯತ್ನ ಮಾಡಿದ್ದ ಯಲಹಂಕ ಶಾಸಕ ಎಸ್​ಆರ್ ವಿಶ್ವಾನಥ್​ ಅವರು ಸುಧಾಕರ್​ಗೆ ಟಿಕೆಟ್ ನೀಡದಂತೆ ವಿರೋಧಿ ಅಲೆ ಸೃಷ್ಟಿಸಿದ್ದರು. ಅಲ್ಲದೆ, ಸುಧಾಕರ್ ಮತ್ತು ವಿಶ್ವನಾಥ್ ನಡುವೆ ವಾಗ್ವಾದವೂ ನಡೆದಿತ್ತು. ಕೊನೆಯಲ್ಲಿ ಕ್ಷೇತ್ರದ ಟಿಕೆಟ್ ಸುಧಾಕರ್​ಗೆ ನೀಡಲಾಗಿದೆ.

ಸಮಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಮಿಸ್

ಆರು ಬಾರಿ ಗೆದ್ದಿದ್ದ ಉತ್ತರ ಕನ್ನಡದ ಸಮಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಮಿಸ್ ಆಗಿದ್ದು, ವಿಧಾನಸಭೆ ಮಾಜಿ ಸ್ಪೀಕರ್ ವಿಶ್ಚೇಶ್ವರ ಹೆಗಡೆ ಕಾಗೇರಿ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಲಾಗಿದೆ. ಟಿಕೆಟ್ ಕೈತಪ್ಪುವ ಸುಳಿವು ಪಡೆದಿದ್ದ ಅನಂತಕುಮಾರ್ ಹೆಗಡೆ ಅವರು ಕಳೆದ ಒಂದು ವಾರದಿಂದ ಪ್ರಚಾರ ನಿಲ್ಲಿಸಿದ್ದರು. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದ ಇವರಿಗೆ ಈ ಬಾರಿ ಟಿಕೆಟ್​ ಕೈತಪ್ಪಲು ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯೇ ಕಾರಣವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಇತರೆ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳು

  • ಕೇರಳದ ವಯನಾಡು ಲೋಕಸಭಾ ಕ್ಷೇತ್ರ-ಕೆ.ಸುರೇಂದ್ರನ್​
  • ಕೇರಳದ ಆಲತ್ತೂರ ಲೋಕಸಭಾ ಕ್ಷೇತ್ರ-ಟಿ.ಎನ್.ಸರಾಸು
  • ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರ-ಕೆ.ಎಸ್.ರಾಧಾಕೃಷ್ಣನ್​
  • ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರ-ಜಿ.ಕೃಷ್ಣಕುಮಾರ್​
  • ಮಹಾರಾಷ್ಟ್ರದ ಭಂಡಾರ-ಗೊಂದಿಯಾ ಲೋಕಸಭಾ ಕ್ಷೇತ್ರ-ಸುನೀಲ್ ಬಾಬುರಾವ್ ಮೇಂಢೆ
  • ಮಹಾರಾಷ್ಟ್ರದ ಗಡ್​ಚಿರೋಲಿ-ಚಿಮೂರ ಲೋಕಸಭಾ ಕ್ಷೇತ್ರ-ಅಶೋಕ್ ಮಹದೇವರಾವ್ ನೆತೆ
  • ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರ-ರಾಮ್​ ಸಾತ್​ಪುತೆ
  • ಮಹಾರಾಷ್ಟ್ರದ ಔರಂಗಬಾದ್ ಲೋಕಸಭಾ ಕ್ಷೇತ್ರ-ಸುಶೀಲ್ ಕುಮಾರ್ ಸಿಂಗ್​​
  • ಮಹಾರಾಷ್ಟ್ರದ ನವಾಡ ಲೋಕಸಭಾ ಕ್ಷೇತ್ರ-ವಿವೇಕ್ ಠಾಕೂರ್​
  • ಮಿಜೋರಾಂ ಲೋಕಸಭಾ ಕ್ಷೇತ್ರ-ವನ್ಲಾಲ್ಹ್​ಮುಕ
  • ಒಡಿಶಾ ಬಾರ್​ಗಢ ಲೋಕಸಭಾ ಕ್ಷೇತ್ರ-ಪ್ರದೀಪ್ ಪುರೋಹಿತ್​​
  • ಒಡಿಶಾ ಸುಂದರ್​ಗಢ ಲೋಕಸಭಾ ಕ್ಷೇತ್ರ-ಜ್ಯುಯೆಲ್ ಓರಾಮ್​​
  • ಒಡಿಶಾ ಸಂಬಲ್​ಪುರ ಲೋಕಸಭಾ ಕ್ಷೇತ್ರ-ಧರ್ಮೇಂದ್ರ ಪ್ರಧಾನ್​​
  • ಒಡಿಶಾದ ಪುರಿ ಲೋಕಸಭಾ ಕ್ಷೇತ್ರ-ಸಂಬಿತ್ ಪಾತ್ರಾ
  • ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರ-ಪಲ್ಲವಿ ಶ್ರೀನಿವಾಸ ಡೆಂಪೋ
  • ಗುಜರಾತ್​ನ ಮೆಹ್​ಸಾನಾ ಲೋಕಸಭಾ ಕ್ಷೇತ್ರ-ಹರಿಭಾಯ್ ಪಟೇಲ್​
  • ಗುಜರಾತ್​ನ ಸಾಬರಕಾಂಠಾ ಲೋಕಸಭಾ ಕ್ಷೇತ್ರ-ಶೋಭನಾಬೆನ್​ ಮಹೇಂದ್ರಸಿಂಗ್ ಬರೈಯಾ
  • ಗುಜರಾತ್​ನ ಸುರೇಂದ್ರನಗರ ಲೋಕಸಭಾ ಕ್ಷೇತ್ರ-ಚಂದುಭಾಯ್ ಛಗನ್​ಭಾಯ್ ಶಿಹೋರಾ
  • ಗುಜರಾತ್​ನ ಜುನಾಗಢ್ ಲೋಕಸಭಾ ಕ್ಷೇತ್ರ-ರಾಜೇಶಭಾಯ್ ಚುಡಾಸಮಾ
  • ಗುಜರಾತ್​ನ ಅಮ್ರೇಲಿ ಲೋಕಸಭಾ ಕ್ಷೇತ್ರ-ಭರತ್​ಭಾಯ್ ಮನುಭಾಯ್ ಸುತಾರಿಯಾ
  • ಗುಜರಾತ್​ನ ವಡೋದರ ಲೋಕಸಭಾ ಕ್ಷೇತ್ರ-ಹೆಮಂಗ್ ಯೋಗೇಶ್ಚಂದ್ರ ಜೋಶಿ
  • ಹರಿಯಾಣ ಕುರುಕ್ಷೇತ್ರ ಲೋಕಸಭಾ ಕ್ಷೇತ್ರ-ನವೀನ್ ಜಿಂದಾಲ್​​​
  • ಬಿಹಾರದ ಪಶ್ಚಿಮ ಚಂಪಾರಣ್ ಲೋಕಸಭಾ ಕ್ಷೇತ್ರ-ಸಂಜಯ್ ಜೈಸ್ವಾಲ್​
  • ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರ-ಕಂಗನಾ ರಣಾವತ್​
  • ಉತ್ತರ ಪ್ರದೇಶದ ಸುಲ್ತಾನ್​ಪುರ ಲೋಕಸಭಾ ಕ್ಷೇತ್ರ-ಮನೇಕಾ ಗಾಂಧಿ

ಮತ್ತಷ್ಟು ಚುನಾವಣಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:17 pm, Sun, 24 March 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ