AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದಲ್ಲಿ ಬಿಜೆಪಿ ಸಭೆ ಬಳಿಕ ಗುಂಪು ಘರ್ಷಣೆ: ಕಾರ್ಯಕರ್ತನ ಮೇಲೆ ಹಲ್ಲೆ

ಚಿತ್ರದುರ್ಗ ನಗರದಲ್ಲಿ ಬಿಜೆಪಿ ಸಭೆ ಬಳಿಕ ಗುಂಪು ಘರ್ಷಣೆ ಉಂಟಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ ಪಾವಗಡ ಬಿಜೆಪಿ ಕಾರ್ಯಕರ್ತ ಚೈತನ್ಯ ಮೇಲೆ ಪಾವಗಡ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಮಧುನಿಂದ ಹಲ್ಲೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಪೋಸ್ಟ್ ಹಿನ್ನೆಲೆ ಗಲಾಟೆ ನಡೆದಿದೆ.

ಚಿತ್ರದುರ್ಗದಲ್ಲಿ ಬಿಜೆಪಿ ಸಭೆ ಬಳಿಕ ಗುಂಪು ಘರ್ಷಣೆ: ಕಾರ್ಯಕರ್ತನ ಮೇಲೆ ಹಲ್ಲೆ
ಗಲಾಟೆ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Mar 31, 2024 | 3:55 PM

Share

ಚಿತ್ರದುರ್ಗ, ಮಾರ್ಚ್​ 31: ನಗರದಲ್ಲಿ ಬಿಜೆಪಿ (BJP) ಸಭೆ ಬಳಿಕ ಗುಂಪು ಘರ್ಷಣೆ ಉಂಟಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ ಪಾವಗಡ ಬಿಜೆಪಿ ಕಾರ್ಯಕರ್ತ ಚೈತನ್ಯ ಮೇಲೆ ಪಾವಗಡ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಮಧುನಿಂದ ಹಲ್ಲೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಪೋಸ್ಟ್ ಹಿನ್ನೆಲೆ ಗಲಾಟೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತೆರಳಿದ ಬೆನ್ನಲ್ಲೇ ಮಾರಾಮಾರಿ ನಡೆದಿದೆ.

ಪ್ರಚಾರ ಕಾರ್ಯಕ್ರಮದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ವಾಗ್ವಾದ

ರಾಜ್ಯದೆಲ್ಲೆಡೆ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳು ಸಾಕಷ್ಟು ಗೊಂದಲದ ನಡುವೆಯೂ ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಆದರೆ ತುರುವೇಕೆರೆಯಲ್ಲಿ ಮಾತ್ರ ಎರಡೂ ಪಕ್ಷಗಳ ಗೊಂದಲ ಜಗತ್ ಜಾಹೀರಾಗಿತ್ತು. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದ್ದರು.

ಇದನ್ನೂ ಓದಿ: ಹಾಸನ ಕಾಂಗ್ರೆಸ್ ಸಭೆಯಲ್ಲಿ ಗಲಾಟೆ: ಪರಸ್ಪರ ತಳ್ಳಾಡಿಕೊಂಡ ಕಾರ್ಯಕರ್ತರು, ಸಚಿವ ರಾಜಣ್ಣಗೆ ಅವಾಜ್

ತುರುವೇಕೆರೆಯ ರಾಜಕೀಯ ಬದ್ದ ವೈರಿಗಳಾದ ಎಂಟಿ ಕೃಷ್ಣಪ್ಪ, ಮಸಾಲೆ ಜಯರಾಂ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಅಲ್ಲಿದವರಿಗೆ ವಿಶೇಷ ಅನಿಸಿದ್ದರೆ, ಕಾರ್ಯಕರ್ತರು ಪರಸ್ಪರ ವಾಗ್ವಾದ ಮಾಡಿಕೊಂಡಿದ್ದು ಮಾತ್ರ ದೋಸ್ತಿ ಮುರಿದ್ದರು.

ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ

ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ಇತ್ತೀಚೆಗೆ ತುರುವೇಕೆರೆಯಲ್ಲಿ ಪ್ರಚಾರ ಸಭೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಭ್ಯರ್ಥಿ ವಿ.ಸೋಮಣ್ಣ, ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಂ, ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಸೇರಿದಂತೆ ಅನೇಕರು ಹಾಜರಿದ್ದರು.

ತಮ್ಮ ಭಾಷಣದಲ್ಲಿ ಹಿಂದಿನ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಮಾತನಾಡಿದ ಕೃಷ್ಣಪ್ಪ, ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಹೆಸರು‌ ಪ್ರಸ್ತಾಪಿಸಿದ್ದರು. ಕಳೆದ ಬಾರಿ ನಾನು ಸೋಲೋದಕ್ಕೆ ಕೊಂಡಜ್ಜಿ ವಿಶ್ವನಾಥ್ ಕೂಡ ಕಾರಣ ಅಂತಾ ಕೃಷ್ಣಪ್ಪ ಹೇಳಿದ್ದು, ವಿಶ್ವನಾಥ್ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:35 pm, Sun, 31 March 24