ಬೆಂಗಳೂರಿನಲ್ಲಿ ಲವ್​, ಸೆಕ್ಸ್​ ದೋಖಾ: ಇಬ್ಬರು ಯುವತಿಯರಿಗೆ ಮೋಸ, ಮತ್ತೊಬ್ಬಳೊಂದಿಗೆ ಯುವಕ ಪರಾರಿ

ಮನೆ ಮುಂದೆ ಹೋಗುವ ಚಂದದ ಯುವತಿ ಹಾಗೂ ಮಹಿಳೆಯರೇ ಆತನ ಟಾರ್ಗೆಟ್. ಲಿವಿಂಗ್ ಟುಗೆದರ್​ನಲ್ಲಿ ಇರಿಸಿಕೊಂಡು ಲವ್​, ಸೆಕ್ಸ್​, ದೋಖಾ ಮಾಡಿ ಬಳಿಕ ಮತ್ತೊಂದು ಯುವತಿಯೊಂದು ಯುವಕ ಪರಾರಿಯಾದಂತಹ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಇಬ್ಬರೂ ಯುವತಿಯರಿಗೆ ಯಾಮಾರಿಸಿ ಪರಾರಿಯಾದ ಬಿಹಾರಿ ಮೂಲದ ಯುವಕನಿಗಾಗಿ ಪೊಲೀಸ್​ ಶೋಧ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಲವ್​, ಸೆಕ್ಸ್​ ದೋಖಾ: ಇಬ್ಬರು ಯುವತಿಯರಿಗೆ ಮೋಸ, ಮತ್ತೊಬ್ಬಳೊಂದಿಗೆ ಯುವಕ ಪರಾರಿ
ಬೆಂಗಳೂರಿನಲ್ಲಿ ಲವ್​, ಸೆಕ್ಸ್​ ದೋಖಾ: ಇಬ್ಬರು ಯುವತಿಯರಿಗೆ ಮೋಸ, ಮತ್ತೊಬ್ಬಳೊಂದಿಗೆ ಯುವಕ ಪರಾರಿ
Edited By:

Updated on: Jul 14, 2024 | 4:25 PM

ನೆಲಮಂಗಲ, ಜುಲೈ 14: ಓರ್ವ ಆಸಾಮಿ ಬಾಳು ಕೊಡುವುದಾಗಿ ವಂಚಿಸಿ ಇಬ್ಬರು ಯುವತಿಯರಿಗೆ (girls) ವಂಚನೆ ಮಾಡಿ ಮೂರನೇ ಯುವತಿಯೊಂದಿಗೆ ಪರಾರಿಯಾಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಹಾರಿ (bihar) ಮೂಲದ ಸೋನುಕುಮಾರ್​ ತನ್ನ ಮನೆ ಮುಂದೆ ಹೋಗುವ ಚಂದದ ಯುವತಿ ಹಾಗೂ ಮಹಿಳೆಯರನ್ನು ಟಾರ್ಗೆಟ್​ ಮಾಡುತ್ತಿದ್ದ. ಬೇರೆ ಬೇರೆ ಊರುಗಳಿಂದ ಬಂದವರನ್ನು ಪರಿಚಯ ಮಾಡಿಕೊಂಡು ಬಳಿಕ ಲವ್ ಮಾಡುವುದಾಗಿ ನಂಬಿಸಿ ಲಿವಿಂಗ್​​​ ಟುಗೆದರ್​​ ಇರಿಸಿಕೊಳ್ಳುತ್ತಿದ್ದ. ತನ್ನ ಆಸೆ ಈಡೇರಿದ ಬಳಿಕ ಮತ್ತೊಬ್ಬ ಯುವತಿಯೊಂದಿಗೆ ಎಸ್ಕೇಪ್​ ಆಗುವ ಖಯಾಲಿ ಹೊಂದಿದ್ದ.

ಬಿಹಾರಿ ಮೂಲದ ಸೋನುಕುಮಾರ್​ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ವಾಸವಿದ್ದ. ವಿಚ್ಛೇದನ ಪಡೆದ ಮಹಿಳೆ ಸೇರಿದಂತೆ ಓರ್ವ ಯುವತಿಗೆ ಲವ್​, ಸೆಕ್ಸ್​, ದೋಖಾ ಮಾಡಿ ಇದೀಗ ಇಬ್ಬರನ್ನೂ ಬಿಟ್ಟು ಪೀಣ್ಯಾದ ಕುಸುಮ ಎಂಬ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಶವ ಪತ್ತೆ: ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ?

ಸೋನುಕುಮಾರ್ ಹಾಗೂ ಕುಸುಮ ಮದುವೆಯಾಗಿದೆ ಎನ್ನುವ ಫೋಟೋಗಳು ಕೂಡ ವೈರಲ್​ ಆಗಿವೆ. ಕುಸುಮ ಮನೆಯವರು ಕೂಡ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ. ಪರ್ವೀನ್ ತಾಜ್ ಎಂಬ ಮಹಿಳೆಯ ಜೊತೆ ಲಿವಿಂಗ್​​​ ಟುಗೆದರ್​ನಲ್ಲಿ ಇದ್ದಾಗಲೇ ಮನೆಯಲ್ಲಿ 3 ಲಕ್ಷದ 60 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಹೀಗಾಗಿ ಆರೋಪಿ ಸೋನುಕುಮಾರ್ ಪತ್ತೆಗಾಗಿ ಪೀಣ್ಯಾ ಪೊಲೀಸರು ಶೋಧ ನಡೆಸಿದ್ದಾರೆ.

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಪಂಚಾಯತ್ ಸದಸ್ಯನಿಂದಲೇ ಅತ್ಯಾಚಾರ

ಉಡುಪಿ: ದಲಿತ ಸಮುದಾಯದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಪಂಚಾಯತ್ ಸದಸ್ಯನೇ ಅತ್ಯಾಚಾರವೆಸಗಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದಿತ್ತು. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮ ಪಂಚಾಯತಿ ಸದಸ್ಯ ಸಂತೋಷ್ ಪುತ್ರನ್ (46) ಎಂಬಾತನೇ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ದೌರ್ಜನ್ಯ ನಡೆಸಿ ಬೆದರಿಕೆ ಹಾಕಿದ ಆರೋಪದಲ್ಲಿ ಆತನ ವಿರುದ್ಧ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮದ್ವೆಯಾಗಿದ್ದರೂ ಬಾಡದ ಹಳೇ ಪ್ರೀತಿ.. ಆಷಾಢ ಮಾಸಕ್ಕೆಂದು ತವರಿಗೆ ಬಂದು ಪ್ರಿಯಕರನ ಜೊತೆ ಸಾವಿಗ ಶರಣು

ವಿವಾಹಿತನಾಗಿರುವ ಸಂತೋಷ್ ಪುತ್ರನ್ ಬಾಲಕಿಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈತನ ವಿರುದ್ಧ ಪೋಷಕರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಂತೋಷ್ ಪುತ್ರನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us