ತಿರುಪತಿ ಮಾದರಿಯಂತೆ ಸಿದ್ಧವಾಗಲಿದೆ ಮಾದಪ್ಪನ ಸನ್ನಿಧಾನ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತೀ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವಿಶೇಷ ಜಾತ್ರೆಗಳ ಸಮಯದಲ್ಲಿ ಹೆಚ್ಚುವ ಭಕ್ತರ ದಟ್ಟಣೆಯನ್ನು ನಿರ್ವಹಿಸಲು, ಪ್ರಾಧಿಕಾರವು 30 ಕೋಟಿ ರೂ ವೆಚ್ಚದಲ್ಲಿ ತಿರುಪತಿ ಮಾದರಿಯ ನಾಲ್ಕು ಬೃಹತ್ ಬ್ಲಾಕ್ಗಳನ್ನು ನಿರ್ಮಿಸಿದೆ. ಇದು ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಭಕ್ತರ ದರ್ಶನವನ್ನು ಸುಗಮಗೊಳಿಸುತ್ತದೆ.
ಚಾಮರಾಜನಗರ, ಸೆಪ್ಟೆಂಬರ್ 23: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹಾದೇಶ್ವರ ಬೆಟ್ಟಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಸುಗಮ ಹಾಗೂ ಶಿಸ್ತುಬದ್ಧ ದರ್ಶನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ತಿರುಪತಿ ಮಾದರಿಯಲ್ಲಿ ನೂತನ ಕ್ಯೂ ಕಾಂಪ್ಲೆಕ್ಸ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಮಲೆ ಮಹಾದೇಶ್ವರ ಅಭಿವೃದ್ಧಿ ಪ್ರಾಧಿಕಾರ ಮತ್ತು ಸ್ಥಳೀಯ ಶಾಸಕ ಎಂ.ಆರ್. ಮಂಜುನಾಥ್ ಅವರ ಯೋಜನೆಯಂತೆ ಸುಮಾರು 30 ಕೋಟಿ ರೂ ಅಂದಾಜು ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ತಿರುಪತಿಯಲ್ಲಿರುವಂತೆ ಇಲ್ಲಿಯೂ 4 ಬೃಹತ್ ಬ್ಯಾರಕ್ಗಳನ್ನು ನಿರ್ಮಿಸಲಾಗಿದ್ದು, ಒಂದೊಂದು ಬ್ಲಾಕ್ನಲ್ಲಿ ಸುಮಾರು 1,000 ಮಂದಿಯಂತೆ ಒಟ್ಟು 4,000 ಭಕ್ತರು ಏಕಕಾಲದಲ್ಲಿ ಕುಳಿತುಕೊಳ್ಳಲು ಕುಳಿತುಕೊಳ್ಳಲು ಸ್ಥಳಾವಕಾಶವಿರಲಿದೆ. ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ಈ ಬ್ಲಾಕ್ಗಳಲ್ಲಿ ಕುಡಿಯುವ ನೀರು, ಪ್ರಸಾದ ಹಾಗೂ ಶೌಚಾಲಯದಂತಹ ಸೌಕರ್ಯಗಳನ್ನು ಒದಗಿಸಲಾಗಿದ್ದು, ಮುಖ್ಯ ದರ್ಶನದ ಸಾಲು ಖಾಲಿಯಾಗುತ್ತಿದ್ದಂತೆ ಬ್ಲಾಕ್ನಲ್ಲಿರುವವರನ್ನು ಸರದಿಯಂತೆ ದರ್ಶನಕ್ಕೆ ಬಿಡಲಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
