ಮೈಸೂರಲ್ಲಿ ಪ್ರಿಯತಮೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಲೋಕೇಶ್ ತನ್ನ ಸ್ನೇಹಿತ ನಿತಿನ್ ಎಂಬಾತನಿಗೆ ಕರೆ ಮಾಡಿದ್ದು, ತಾನು ಆ ಹುಡುಗಿಗೆ ಮೋಸ ಮಾಡಿ ಬಿಟ್ಟೆ, ಆಕೆಯನ್ನು ಕೊಲೆ ಮಾಡಿದ್ದೇನೆ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.

ಮೈಸೂರಲ್ಲಿ ಪ್ರಿಯತಮೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ
ಲೋಕೇಶ್ ಮತ್ತು ಅಮೂಲ್ಯ
preethi shettigar

| Edited By: Rajesh Duggumane

Feb 05, 2021 | 3:01 PM

ಮೈಸೂರು: ಅವರಿಬ್ಬರದ್ದು ವಯಸ್ಸಿಗೂ ಮೀರಿದ ಪ್ರೀತಿ. ಥೇಟ್ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಬರುವ ನಾಯಕ ನಾಯಕಿಯರ ವಯಸ್ಸಿನ ಅಂತರವೇ ಇಬ್ಬರದ್ದು. ಆದರೆ, ನಿನ್ನೆ ಮಾತ್ರ ಪ್ರಿಯತಮೆಯನ್ನು ಕೊಂದು ಪ್ರಿಯಕರ  ತಾನು ಕೂಡ ನೇಣಿಗೆ ಕೊರಳೊಡ್ಡಿದ್ದಾನೆ. ಸದ್ಯ ಇವರಿಬ್ಬರ ಸಾವು ನಿಗೂಢವಾಗೆ ಉಳಿದಿದೆ. ಆತ ಯಾವ ಕಾರಣಕ್ಕೆ ಹುಡುಗಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ.

ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲಾ ಹೀಗೆ ನಾನ ರೀತಿಯಲ್ಲಿ ಪ್ರೀತಿಯನ್ನ ವರ್ಣಿಸಲಾಗುತ್ತದೆ. ಮಂಡ್ಯ ಜಿಲ್ಲೆ ನಾಗಮಂಗಲದ ಈ ಇಬ್ಬರು ಪ್ರೇಮಿಗಳದ್ದು ಅದೇ ರೀತಿಯ ಕಥೆ. ಲೋಕೇಶ್ ಮತ್ತು ಅಮೂಲ್ಯ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಲೋಕೇಶ್​ಗೆ ಈಗಾಗಲೇ ಮದುವೆಯಾಗಿ ಬೆಳೆದು ನಿಂತ ಮಗಳಿದ್ದಾಳೆ. ಆದರೆ ಅಮೂಲ್ಯ ಕಾಲೇಜಿಗೆ ಹೋಗುತ್ತಿರುವ ಯುವತಿ. ಇವರಿಬ್ಬರ ನಡುವೆ ಹೇಗೋ ಪ್ರೀತಿ ಹುಟ್ಟಿದೆ. ಇವರಿಬ್ಬರು ಪ್ರೀತಿಯಲ್ಲಿರುವ ವಿಚಾರ ಲೋಕೇಶ್ ಸ್ನೇಹಿತರಿಗೂ ಗೊತ್ತಿದೆ.

ಲೋಕೇಶ್ ಬೇರೊಂದು ಹುಡುಗಿ ಸಂಪರ್ಕದಲ್ಲಿದ್ದ ಎಂಬುದು ಲೋಕೇಶ್ ಪತ್ನಿಗೂ ಗೊತ್ತಿತ್ತು.‌ ಇದೇ ವಿಚಾರಕ್ಕೆ ಇಬ್ಬರ ನಡುವೆ ಮನಸ್ಥಾಪ ಕೂಡ ಬಂದಿತ್ತು. ಅಮೂಲ್ಯ ಮೈಸೂರಿನಲ್ಲಿ ಎಂಎಸ್​ಸಿ ವ್ಯಾಸಂಗ ಮಾಡುತ್ತಿದ್ದ ಕಾರಣ, ಲೋಕೇಶ್ ಮೈಸೂರಿಗೆ ಬಂದಿದ್ದಾನೆ. ಆದರೆ ಹೀಗೆ ಬಂದಂತಹ ಇಬ್ಬರು ಮೈಸೂರಿನ ಹೆಬ್ಬಾಳದ ಖಾಸಗಿ ಹೋಟೆಲ್​ನಲ್ಲಿ ರೂಂ ಮಾಡಿಕೊಂಡಿದ್ದಾರೆ. ಈ ವೇಳೆ ಲೋಕೇಶ್ ಅಮೂಲ್ಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಾನು ಕೂಡ ನೇಣಿಗೆ ಶರಣಾಗಿದ್ದಾನೆ.

ಇದಕ್ಕೂ ಮುನ್ನ ಲೋಕೇಶ್ ತನ್ನ ಸ್ನೇಹಿತ ನಿತಿನ್ ಎಂಬಾತನಿಗೆ ಕರೆ ಮಾಡಿದ್ದು, ತಾನು ಆ ಹುಡುಗಿಗೆ ಮೋಸ ಮಾಡಿ ಬಿಟ್ಟೆ, ಆಕೆಯನ್ನು ಕೊಲೆ ಮಾಡಿದ್ದೇನೆ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ರೀತಿ ಹೇಳಿದಾಗ ಸ್ನೇಹಿತ ನಿತಿನ್ ತಾವು ಬರುತ್ತೇವೆ ಏನು ಮಾಡಿಕೊಳ್ಳಬೇಡ ಎಂದು ಹೇಳಿದ್ದಾನೆ. ಆದರೆ ಸ್ನೇಹಿತರು ಮೈಸೂರಿಗೆ ಬಂದು ಹೋಟೆಲ್​ನಲ್ಲಿ ಹುಡುಕಿದಾಗ ಇಬ್ಬರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಹುಡಿಗಿಗೆ ಮೋಸ ಮಾಡಿಬಿಟ್ಟೆ ಎಂದು ಸ್ವತಃ ಲೋಕೇಶ್ ಹೇಳಿಕೊಂಡಿದ್ದಾನೆ. ಆದರೆ ಯಾವ ರೀತಿ ಮೋಸ, ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ನಿಗೂಢವಾಗಿದೆ. ಹುಡುಗಿ ಮದುವೆಯಾಗಲು ಒತ್ತಾಯ ಮಾಡಿದ್ದಳಾ ಅಥವಾ ಬೇರೆ ಇನ್ನೇನಾದರು ಕಾರಣ ಇದೆಯಾ ಎಂಬುದು ಪೊಲೀಸರ ಮುಂದಿನ ತನಿಖೆಯಿಂದ ಬಯಲಾಗಬೇಕಿದೆ. ಇನ್ನು, ಹೋಟೆಲ್​ನಲ್ಲಿ ಸಿಕ್ಕ ಹಗ್ಗವನ್ನ ನೋಡಿದರೆ ಸಾಯಲು ಮೊದಲೆ ನಿರ್ಧರಿಸಿ ಬಂದಿದ್ದರು ಎಂಬ ಅನುಮಾನ ಸಹ ಇದೆ.

ಮದುವೆಗೆ ಒಪ್ಪದಿದ್ದಕ್ಕೆ ನಡು ರಸ್ತೆಯಲ್ಲೇ ಯುವತಿಯ ಹತ್ಯೆ, ಯುವಕ ಎಸ್ಕೇಪ್‌

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada