AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಕರೆನಾಡಲ್ಲಿ ಕಳ್ಳತನ ಮಾಡ್ತಿದ್ದ ಹೈಟೆಕ್ ಕಳ್ಳರ ಬಂಧನ; ಕಳ್ಳತನದಲ್ಲಿ ಮಾಜಿ ಗ್ರಾಪಂ ಉಪಾಧ್ಯಕ್ಷ ಭಾಗಿ

ಅದೊಂದು ಖತರ್ನಾಕ್ ಗ್ಯಾಂಗ್. ಕಳೆದ ಹಲವು ವರ್ಷಗಳಿಂದ ಕಳ್ಳತನ ಮಾಡುವುದೇ ಅವರ ಕಾಯಕ. ಹೊರನೋಟಕ್ಕೆ ಹಗಲು ವೇಳೆ ಜನಪ್ರತಿನಿಧಿಗಳ ರೀತಿ ಗ್ರಾಮದಲ್ಲಿ ನಾಟಕವಾಡುತ್ತಿದ್ರು. ಆದರೆ, ರಾತ್ರಿ ವೇಳೆ ಸಿಕ್ಕಸಿಕ್ಕ ಕಡೆ ದೋಚುವುದೇ ಅವರ ಟಾರ್ಗೆಟ್. ಅದೇ ರೀತಿ ಮಂಡ್ಯ ಜಿಲ್ಲೆಯಾದ್ಯಂತ ಜನರ ನಿದ್ರೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್​ನ್ನು ಪೊಲೀಸರು ಖೆಡ್ಡಕ್ಕೆ ಖೆಡವಿದ್ದಾರೆ.

ಸಕ್ಕರೆನಾಡಲ್ಲಿ ಕಳ್ಳತನ ಮಾಡ್ತಿದ್ದ ಹೈಟೆಕ್ ಕಳ್ಳರ ಬಂಧನ; ಕಳ್ಳತನದಲ್ಲಿ ಮಾಜಿ ಗ್ರಾಪಂ ಉಪಾಧ್ಯಕ್ಷ ಭಾಗಿ
ಮಂಡ್ಯದಲ್ಲಿ ಕಳ್ಳರ ಬಂಧನ
ಪ್ರಶಾಂತ್​ ಬಿ.
| Edited By: |

Updated on:Sep 14, 2023 | 2:30 PM

Share

ಮಂಡ್ಯ, ಸೆ.14: ಜಿಲ್ಲೆಯ ಕೆ.ಆರ್. ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಕ್ಕರೆ ನಗರಿ ಮಂಡ್ಯದಲ್ಲಿ ಹೈಟೆಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚಾಕೇನಹಳ್ಳಿಯ ರವಿಕುಮಾರ್ (42), ಮಂಡ್ಯದ ಸೂನಗಹಳ್ಳಿಯ ಮಂಜುನಾಥ್(36), ವಿಷ್ಣು (31), ಹೇಮಂತ್ ಕುಮಾರ್ (30) ಬಂಧಿತ ಆರೋಪಿಗಳು. ಇವರಿಂದ 35 ಲಕ್ಷ ರೂ ಮೌಲ್ಯದ 150 ಗ್ರಾಂ ತೂಕದ ಚಿನ್ನ, 20 ಕೆಜಿಯಷ್ಟು ಬೆಳ್ಳಿ ಸಾಮಾನು,1 ಟಾಟಾ ಎಸಿ ವಾಹನ, 1 ಎರಿಟಿಕಾ ಕಾರು, 1 ಬೈಕ್, ಲ್ಯಾಪ್ ಟ್ಯಾಪ್, 8 ಹಸುಗಳು, 1 ಸಿಲೆಂಡಿರ್, ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಹಾಗೂ 40 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

ಈ ಬಂಧಿತ ಆರೋಪಿಗಳು ಆಗಸ್ಟ್ 17ರಂದು ಕೆಆರ್ ಪೇಟೆಯ ಜ್ಯುವೆಲರಿ ಶಾಪ್​ನಲ್ಲಿ ಕಳ್ಳತನ ಮಾಡಿದ್ದರು. ಶಾಪ್​ನ ಹಿಂಬಾಗಿಲ ಗೋಡೆ ಕೊರೆದು ಬೆಳ್ಳಿಯ ವಸ್ತುಗಳನ್ನು ದೋಚಿದ್ದರು. ಅಲ್ಲದೆ, ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ ಹಸುಗಳನ್ನು ಕಳ್ಳತನ ಮಾಡಿ, ಆರೋಪಿ ರವಿಕುಮಾರ್ ತನ್ನದೇ ಫಾರ್ಂ ನಲ್ಲಿ ಹಸುಗಳನ್ನು ಸಾಕುತ್ತಿದ್ದ. ವಿಶೇಷವೆಂದರೇ ಕದ್ದ ಹಸುಗಳ ಮೇವಿಗಾಗಿ, ಪಶುವಿನ ಆಹಾರವನ್ನು ಸಹಾ ಕಳ್ಳತನ ಮಾಡುತ್ತಿದ್ದರು. ಹೀಗೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:Buffalo Theft: ಕಳ್ಳತನ ಮಾಡಿದಾಗ ಈತನ ವಯಸ್ಸು ಕೇವಲ 20 ವರ್ಷ, ಈಗ 80ನೇ ವಯಸ್ಸಿನಲ್ಲಿ ಬೀದರ್ ಪೊಲೀಸರಿಗೆ ಸಿಕ್ಕಿಬಿದ್ದ!

ಪ್ರಕರಣದಲ್ಲಿ ಮಾಜಿ ಪಂಚಾಯತಿ ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿಯು ಭಾಗಿ

ಹೌದು, ಪ್ರಕರಣದ ಪ್ರಮುಖ ಆರೋಪಿ ಚಾಕೇನಹಳ್ಳಿ ರವಿಕುಮಾರ್, ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸ್ವರ್ಧೆ ಮಾಡಿ ಸೋತಿದ್ದ ಇತ ಕಳೆದ ಮೂರು ವರ್ಷಗಳಿಂದ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಇದುವರೆಗೂ 18 ಪ್ರಕರಣಗಳಲ್ಲಿ ರವಿಕುಮಾರ್ ಭಾಗಿಯಾಗಿದ್ದ. ಇನ್ನು ರವಿಕುಮಾರ್​ಗೆ ಪ್ರಕರಣದ ಎ2 ಆರೋಪಿಯಾದ ಸೂನಗನಹಳ್ಳಿ ಮಂಜುನಾಥ್ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೂಡ. ಇವರಿಬ್ಬರಿಗೆ ವಿಷ್ಣು, ಹೇಮಂತ್ ಕುಮಾರ್ ಸಹಾಯ ಮಾಡುತ್ತಿದ್ದರು.

ಇದುವರೆಗೂ ಕೆ.ಆರ್.ಪೇಟೆ ಠಾಣಾ ವ್ಯಾಪ್ತಿಯಲ್ಲಿ 4, ಮಂಡ್ಯ ಠಾಣಾ ವ್ಯಾಪ್ತಿಯಲ್ಲಿ 2, ಚನ್ನರಾಯಪಟ್ಟಣ, ಮೈಸೂರಿನ ಉದಯಗಿರಿ, ಬನ್ನೂರು, ಚನ್ನಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲ ಒಂದೊಂದು ಪ್ರಕರಣ ಸೇರಿ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ಮೈಸೂರಿನಲ್ಲಿಯೇ ಅಶೋಕ್ ಲೈಲೆಂಡ್ ಲಾರಿಯನ್ನು ಕೂಡ ಅಬೇಸ್ ಮಾಡಿದ್ರು. ಆರೋಪಿಗಳ ಬಂಧನದಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟಾರೆ ಹಲವು ಜಿಲ್ಲೆಗಳಲ್ಲಿ ಜನರ ನಿದ್ರೆಗೆಡಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Thu, 14 September 23

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?