ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ; ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ ಸುರೇಶ್ ಗೌಡ

ಕಾರು ಚಾಲಕ ಮತ್ತು ಮಾಜಿ ಶಾಸಕ ತನ್ನ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ರೈತನಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ನಾಗಮಂಗಲ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ; ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ ಸುರೇಶ್ ಗೌಡ
ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ
Edited By: ಆಯೇಷಾ ಬಾನು

Updated on: Jun 26, 2022 | 8:39 PM

ಮಂಡ್ಯ: ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿದಿರುವ ಘಟಮೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೊಳಲಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡಗೆ ಸೇರಿದ ಕಾರು ಮೈಸೂರಿಂದ ತುಮಕೂರು ಕಡೆ ತೆರಳುತ್ತಿತ್ತು. ಈ ವೇಳೆ ಜಮೀನಿನಿಂದ ಜಾನುವಾರುಗಳಿಗೆ ಮೇವು ಸಾಗಿಸುತ್ತಿದ್ದ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ರೈತನಿಗೆ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ತೊಳಲಿ ಗ್ರಾಮದ ರೈತ ಸುರೇಶ್ನ ಕಾಲು ಮೂಳೆ ಮುರಿದಿದೆ.

ಸದ್ಯ ಕಾರು ಚಾಲಕ ಮತ್ತು ಮಾಜಿ ಶಾಸಕ ತನ್ನ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ರೈತನಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ನಾಗಮಂಗಲ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ…

ತೋಟನಹಳ್ಳಿ ಬಳಿ ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಸಾವು
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತೋಟನಹಳ್ಳಿ ಬಳಿಯ ಕೃಷಿ ಹೊಂಡದಲ್ಲಿ ಮುಳಗಿ ಬೆಂಗಳೂರಿನ HSR ಲೇಔಟ್ ನಿವಾಸಿ ಸುಶೀಕುಮಾರ್‌(30) ಮತ್ತು ಬೆಂಗಳೂರಿನ ರಾಘವೇಂದ್ರ ನಗರ ನಿವಾಸಿ ಹರೀಶ್‌(20) ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಮೃತ ಸುಶೀಕುಮಾರ್ ಅಜ್ಜಿ ಮನೆಗೆ ಸ್ನೇಹಿತರೆಲ್ಲ ಸೇರಿ ಐವರು ಬಂದಿದ್ದರು. ತೋಟನಹಳ್ಳಿ ಬಳಿಯ ಹೊಂಡಕ್ಕೆ ಈಜಲು ಹೋಗಿದ್ದಾಗ ಮೊದಲು ಕೃಷಿ ಹೊಂಡದಲ್ಲಿ ಸುಶೀಕುಮಾರ್‌ ನೀರುಪಾಲಾಗಿದ್ದಾನೆ. ಸುಶೀಕುಮಾರ್ ರಕ್ಷಣೆಗೆ ಹೋದ ಹರೀಶ್ ಸಹ ನೀರುಪಾಲಾಗಿದ್ದಾನೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕರ ಕಾರು ಅಪಘಾತ..!

TV9 Web

TV9 Kannada

Read More
Loading...
Unable to load recommendations.
Follow Us