AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HD Kumaraswamy: ಮತ್ತೆ ಮುಖ್ಯಮಂತ್ರಿ ಆಗುವ ಅಭಿಲಾಷೆ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ, ಹೆಚ್​ ವಿಶ್ವನಾಥ್​ಗೆ ತಿರುಗೇಟು

Karnataka Chief Minister: ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. JDS ಪಕ್ಷ ಹೋರಾಟ ಮಾಡ್ತಿರುವುದು ಅಧಿಕಾರಕ್ಕೆ ಅಲ್ಲ. ನಿಮ್ಮ ಗೌರವಯುತ ಬದುಕು, ನಾಡಿನ ಸಮಸ್ಯೆ ಬಗೆಹರಿಸಲು ನಾವು ಪ್ರಾಮಾಣಿಕವಾಗಿ ಹೋರಾಡುತ್ತೇವೆ. ಅದಕ್ಕಾಗಿ 2023ರಲ್ಲಿ ಅಧಿಕಾರಕ್ಕೆ ಹೋರಾಟ ಮಾಡ್ತಿದ್ದೇವೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ H.D. ಕುಮಾರಸ್ವಾಮಿ ಹೇಳಿದ್ದಾರೆ.

HD Kumaraswamy: ಮತ್ತೆ ಮುಖ್ಯಮಂತ್ರಿ  ಆಗುವ ಅಭಿಲಾಷೆ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ, ಹೆಚ್​ ವಿಶ್ವನಾಥ್​ಗೆ ತಿರುಗೇಟು
HD Kumaraswamy: ಮತ್ತೆ ಮುಖ್ಯಮಂತ್ರಿ ಆಗುವ ಅಭಿಲಾಷೆ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 17, 2021 | 4:52 PM

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ನಾಡಿನಿಂದ ಮರೆ ಮಾಡುವುದಕ್ಕೆ ಆಗಲ್ಲಾ. 2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದೂ ಅವರು ಹೇಳಿದರು. ಕುತೂಹಲಕಾರಿ ಸಂಗತಿಯೆಂದರೆ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಅವರನ್ನು ಭೇಟಿ ಮಾಡಿ ಜೆಡಿಎಸ್​ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್​ ವಿಶ್ವನಾಥ್​​ ಹೇಳಿದ್ದರು. ​

ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. JDS ಪಕ್ಷ ಹೋರಾಟ ಮಾಡ್ತಿರುವುದು ಅಧಿಕಾರಕ್ಕೆ ಅಲ್ಲ. ನಿಮ್ಮ ಗೌರವಯುತ ಬದುಕು, ನಾಡಿನ ಸಮಸ್ಯೆ ಬಗೆಹರಿಸಲು ನಾವು ಪ್ರಾಮಾಣಿಕವಾಗಿ ಹೋರಾಡುತ್ತೇವೆ. ಅದಕ್ಕಾಗಿ 2023ರಲ್ಲಿ ಅಧಿಕಾರಕ್ಕೆ ಹೋರಾಟ ಮಾಡ್ತಿದ್ದೇವೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ H.D. ಕುಮಾರಸ್ವಾಮಿ ಹೇಳಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ಹೋರಾಟಕ್ಕೆ ತಡೆಹೊಡ್ಡಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡಬಾರದೆಂದು ಮೌನವಿದ್ದೇವೆ ಎಂದು ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿ ಹೆಚ್​ ಡಿ ಕುಮಾರಸ್ವಾಮಿ ಇದೇ ವೇಳೆ ಹೇಳಿದರು.

ವಿಶ್ವನಾಥ್‌ಗೆ ಜೆಡಿಎಸ್‌ನಲ್ಲಿ ಕುಟುಂಬ ರಾಜಕೀಯ ಇದೆ ಎನ್ನೋದು ಗೊತ್ತಿರಲಿಲ್ವಾ..!?

ಇಂದು ಬೆಳಗ್ಗೆ ಜೆಡಿಎಸ್ ಪಕ್ಚಷದಲ್ಲಿ​ ಕುಟುಂಬ ರಾಕ್ಷಸ ರಾಜಕಾರಣ ಇದೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್​ ವಿಶ್ವನಾಥ್​​ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ ಡಿ ಕುಮಾರಸ್ವಾಮಿ ಅವರು ವಿಶ್ವನಾಥ್‌ಗೆ ಜೆಡಿಎಸ್‌ನಲ್ಲಿ ಕುಟುಂಬ ರಾಜಕೀಯ ಇದೆ ಎನ್ನೋದು ಗೊತ್ತಿರಲಿಲ್ವಾ..? ನಮ್ಮ ಪಕ್ಷದ ಅಭ್ಯರ್ಥಿ ಆಗುವ ಮೊದಲು ಗೊತ್ತಿರಲಿಲ್ವಂತಾ. ಇಡೀ ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬ ಎಂದು ಮಾರುತ್ತರ ನೀಡಿದ್ದಾರೆ.

ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? ವಿಶ್ವನಾಥ್ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? ವಿಶ್ವನಾಥ್‌ಗೆ ಯಾವ ಪಕ್ಷದಲ್ಲೂ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಮತ್ತು ದುಡ್ಡು. ಅಧಿಕಾರ ದುಡ್ಡು ಸಿಗದೇ ಇರುವಾಗ ಎಲ್ಲರನ್ನು ಬೈಕೊಂಡು ಓಡಾಡುತ್ತಾರೆ. ನರಿಗೆ ದ್ರಾಕ್ಷಿ ಎಟುಕದೇ ಇರುವಾಗ ಹುಳಿ ಎನ್ನುವುದಿಲ್ಲವೇ? ವಿಶ್ವನಾಥ್ ಅಂತಹ ಜಾಯಮಾನಕ್ಕೆ ಸೇರಿದವರು. ಯಡಿಯೂರಪ್ಪ ಅವರಿಗೆ ವಯಸ್ಸು ಆಗಿದೆ ಅನ್ನೋದೂ ಅವರಿಗೆ ಗೊತ್ತಿರಲಿಲ್ವಾ ಎಂದು ಹೆಚ್​ ವಿಶ್ವನಾಥ್​ಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ​

(JDS leader H D Kumaraswamy wants to become karnataka chief minister again in 2023)

ಜೆಡಿಎಸ್​ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ: ಅರುಣ್ ಸಿಂಗ್ ಎದುರು ಗುಡುಗಿದ ಹೆಚ್​ ವಿಶ್ವನಾಥ್​ ಏನೆಲ್ಲ ಹೇಳಿದ್ರು?

Published On - 4:37 pm, Thu, 17 June 21