AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಜೆಡಿಎಸ್​  ರಾಜ್ಯಾಧ್ಯಕ್ಷ  ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕೆಂಡಾಮಂಡಲ

ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ಥನವಿಲ್ಲ ಹಾಗಾಗಿ ಪದೇ ಪದೇ ಕೇಂದ್ರ ನಾಯಕರು ಬರುತ್ತಿದ್ದಾರೆಂಬ ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.

ಮಂಡ್ಯ: ಜೆಡಿಎಸ್​  ರಾಜ್ಯಾಧ್ಯಕ್ಷ  ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕೆಂಡಾಮಂಡಲ
ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಕೀಡಿಕಾರಿದ ಸಚಿವ ಅಶ್ವತ್ಥ್​ ನಾರಾಯಣ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 28, 2023 | 3:11 PM

Share

ಮಂಡ್ಯ: ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ಥನವಿಲ್ಲ ಹಾಗಾಗಿ ಪದೇ ಪದೇ ಕೇಂದ್ರ ನಾಯಕರು ಬರುತ್ತಿದ್ದಾರೆಂಬ ಜೆಡಿಎಸ್​  ರಾಜ್ಯಾಧ್ಯಕ್ಷ  ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ(C. N. Ashwath Narayan) ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಅಮಿತ್ ಶಾ(Amit Shah) ಕಂಡರೆ ಕರ್ನಾಟಕದವರಿಗೆ ಅಪಾರ ಅಭಿಮಾನ, ಆರ್ಟಿಕಲ್ 370 ಯನ್ನ ವಜಾ ಮಾಡಿ ಹೇಗೆ ಕೆಲಸ ಮಾಡ್ಬೇಕು ಅಂತ ತೋರಿಸಿ ಕೊಟ್ಟಿದ್ದಾರೆ. ಪಾಪ ಸಿಎಂ ಇಬ್ರಾಹಿಂ (C. M. Ibrahim) ಗೆ ಇದೆಲ್ಲ ಎಲ್ಲಿ ಅರ್ಥ ಆಗುತ್ತೆ, ಇದನ್ನೆಲ್ಲ ಇದನ್ನೆಲ್ಲ ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರ ಹೇಳಿಕೆಗಳು ಎಲ್ಲವೂ ಎಂಟರ್​ಟೈನ್ಮೆಂಟ್ ಇದ್ದ ಹಾಗೆ ಎಂದು ಮಂಡ್ಯದಲ್ಲಿ ಸಿಎಂ ಇಬ್ರಾಹಿಂ ವಿರುದ್ದ ಸಚಿವ ಅಶ್ವತ್ಥ್ ನಾರಾಯಣ ಟಾಂಗ್​ ನೀಡಿದ್ದಾರೆ.

ಇನ್ನು ಟಿಪ್ಪು ವಿರೋಧಿ ಹೇಳಿಕೆ ಕೊಟ್ಟರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ ‘ಸಿಎಂ ಇಬ್ರಾಹಿಂ ಅವರು ಅಂತ ಸ್ಟೇಟ್​ಮೆಂಟ್ ಕೊಡಲೇಬೇಕು ಅವರು ಯಾರು ಹೇಳಿ, ಜೆಡಿಎಸ್ ಪಕ್ಷವನ್ನ ಹಳ್ಳ ಹಿಡಿಸಬೇಕಿದ್ರೆ ಸಿಎಂ ಇಬ್ರಾಹಿಂ ಹೇಳಿಕೆ ಸಾಕು. ಇಂತಹ ಹೇಳಿಕೆ ಕೊಟ್ಟರೆ ಜೆಡಿಎಸ್​ನ್ನ ಅಡ್ರೆಸ್ ಇಲ್ಲದ ಹಾಗೇ ಕಳಿಸಿ ಬಿಡ್ತಾರೆ ಕರ್ನಾಟಕದ ಜನ. ಇನ್ನೊಮ್ಮೆ ಯಾರಾದ್ರು ಟಿಪ್ಪು ಸುಲ್ತಾನರ ಪರ ಹೇಳಿಕೆ ಕೊಟ್ಟರೆ, ಹೇಳಿಕೆ ಕೊಡೋ ಧೈರ್ಯ ಮಾಡಿದ್ರೆ, ಅವರು ಕೂಡ ಅಡ್ರೆಸ್​ಗೆ ಇರೋದಿಲ್ಲ. ನಿಮಗೆ ಟಿಪ್ಪು ಬೇಕಾ ಇಲ್ಲಾ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ ಜನ ಸ್ಪಷ್ಟವಾದ ತೀರ್ಪು ಕೋಡ್ತಾರೆ. ಕರ್ನಾಟಕದಲ್ಲಿ ಟಿಪ್ಪು ಯ್ಯೂನಿವರ್ಸಿಟಿ ಸಾದ್ಯವಿಲ್ಲ. ಟಿಪ್ಪು ಮಾಡಿದ ನರಹಂತಕ ಕೆಲಸಗಳು ಮತಾಂಧತೆ, ದೇವಾಸ್ಥಾನಗಳನ್ನ ಮಸೀದಿಯನ್ನಾಗಿ ಮಾಡಿರುವುದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ, ಅರ್ಥಮಾಡಿಕೊಳ್ಳಿ: ಹಾಸನದಲ್ಲಿ ಕುಮಾರಸ್ವಾಮಿ ಹೇಳಿಕೆ

ಯಡಿಯೂರಪ್ಪರನ್ನು ಬಿಜೆಪಿ ಕಡೆಗಣಿಸಿದೆ; ಡಿಕೆಶಿ ಹೇಳಿಕೆಗೆ ಸಚಿವ ಡಾ.ಸಿ.ಎನ್​.ಅಶ್ವತ್ಥ್ ನಾರಾಯಣ ಟಾಂಗ್

ಯಡಿಯೂರಪ್ಪರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಡಿ.ಕೆ ಶಿವಕುಮಾರ್​ ಹೇಳಿಕೆಗೆ ಟಾಂಗ್​ ಕೊಟ್ಟಿರುವ ಸಚಿವ ಡಾ.ಸಿ.ಎನ್​.ಅಶ್ವತ್ಥ್ ನಾರಾಯಣ ‘ಬಿ.ಎಸ್.ಯಡಿಯೂರಪ್ಪ ಭಾರತೀಯ ಜನತಾ ಪಾರ್ಟಿಯ ನಾಯಕ, ಅವರ ಪರ ಕಾಳಜಿ ಹಾಗೂ ಒಲವಿದೆ. ಬಿ.ಎಸ್​. ಯಡಿಯೂರಪ್ಪ ಅವರು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ನಿನ್ನೆ(ಫೆ.27) ಪ್ರಧಾನಿ ಮೋದಿಯವರೇ ಬಿಎಸ್​ವೈ ಹುಟ್ಟುಹಬ್ಬ ಆಚರಿಸಿದರು. ಡಿ.ಕೆ.ಶಿವಕುಮಾರ್​ಗೆ ಕಾಂಗ್ರೆಸ್​​ ಪಕ್ಷದ ಬಗ್ಗೆ ಕಾಳಜಿ ಇದ್ರೆ ಸಾಕು, ಅವರೇ ಕಷ್ಟದಲ್ಲಿ ಉಸಿರಾಡುತ್ತಿದ್ದಾರೆ. ಕಾಂಗ್ರೆಸ್​​ನವರು ಭ್ರಷ್ಟಾಚಾರಿಗಳು, ಸ್ವಾರ್ಥಿಗಳು ಎಂದು ಮಂಡ್ಯದಲ್ಲಿ ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ