ಕುಡಿಯುವ ನೀರಿಗೆ ಆಗ್ರಹಿಸಿ ಧರಣಿಗೆ ಕುಳಿತ ಮೈಸೂರು ಪಾಲಿಕೆ ಸದಸ್ಯರು
ಕುಡಿಯುವ ನೀರಿಗೆ ಆಗ್ರಹಿಸಿ ಮೈಸೂರು ಪಾಲಿಕೆ ಸದಸ್ಯರು ಧರಣಿ ನಡೆಸಿದ್ದಾರೆ. ಆರ್‌ಟಿಒ ವೃತ್ತದ ಡಬಲ್ ಟ್ಯಾಂಕ್ ಬಳಿ ಧರಣಿಗೆ ಕುಳಿತಿದ್ದಾರೆ. ಕುಡಿಯುವುದಕ್ಕೆ ನೀರು ಕೊಡುವಂತೆ ಜನರು ಕೇಳುತ್ತಿದ್ದಾರೆ.
ಮೈಸೂರು: ಕುಡಿಯುವ ನೀರಿಗೆ ಆಗ್ರಹಿಸಿ ಪಾಲಿಕೆ ಸದಸ್ಯರು ಧರಣಿ ನಡೆಸಿದ್ದಾರೆ. ಆರ್‌ಟಿಒ ವೃತ್ತದ ಡಬಲ್ ಟ್ಯಾಂಕ್ ಬಳಿ ಧರಣಿಗೆ ಕುಳಿತಿದ್ದಾರೆ. ಕುಡಿಯುವುದಕ್ಕೆ ನೀರು ಕೊಡುವಂತೆ ಜನರು ಕೇಳುತ್ತಿದ್ದಾರೆ. ನೀರು ಕೊಡದಿದ್ದರೆ ವಿಷವನ್ನಾದರೂ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಹೇಳಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇಂಜಿನಿಯರ್ ಸುವರ್ಣ ಗೋಪಾಲ್ ದರ್ಪ ತೋರುತ್ತಾರೆ. ಕೂಡಲೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಪಾಲಿಕೆ ಸದಸ್ಯ ಲೋಕೇಶ್ ಆರೋಪಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ವಾರ್ಡ್ ನಂ 50ರಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಸಾರ್ವಜನಿಕರು ಕರೆ ಮಾಡಿದರೂ ಇಂಜಿನಿಯರ್ ಸುವರ್ಣ ಗೋಪಾಲ್ ಯಾವುದೇ ಉತ್ತರ ಕೊಡುತ್ತಿಲ್ಲ. ನನ್ನ ವಾರ್ಡಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಪಾಲಿಕೆಯ 194 ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಹಾನಗರ ಪಾಲಿಕೆಯ 194 ಸಿಬ್ಬಂದಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ಮೇಯರ್, ಪಾಲಿಕೆ ಸದಸ್ಯರು, ಪಾಸಿಟಿವ್ ಬಂದಿರುವ ಅಧಿಕಾರಿಗಳ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ.
ಈಗಾಗಲೇ 10ಕ್ಕೂ ಹೆಚ್ಚು ಮಂದಿಗೆ ಪಾಲಿಕೆಯಲ್ಲಿ ಕೊರೊನ ಪಾಸಿಟಿವ್ ಬಂದಿದೆ. ಪಾಲಿಕೆಯ ಎಲ್ಲ ಸಿಬ್ಬಂದಿಯೂ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಿಸಲು ಪಾಲಿಕೆ ಆಯುಕ್ತೆ ಶಿಲ್ಪನಾಗ್ ಆದೇಶ ನೀಡಿದ್ದರು. ಸದ್ಯ ಪಾಲಿಕೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಕೆಲ ಅಧಿಕಾರಿಗಳಿಗೆ ಪಾಸಿಟಿವ್ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ವರ್ಚುಲ್ ಮೀಟಿಂಗ್ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೇಮಾವತಿ ಡ್ಯಾಂನಿಂದ ಕೆರೆ, ಕೃಷಿಗೆ ನೀರು ಬಿಡುಗಡೆ ಸ್ಥಗಿತ: ಕುಡಿಯುವ ನೀರಿಗೆ ಆದ್ಯತೆ
ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ಅಪಾರ ನೀರು ಪೋಲು
(Members of Mysuru Municipal Members protest for drinking water in Mysore)