AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಮನೆಗಾಗಿ ಸಿದ್ದರಾಮಯ್ಯ ಆಪ್ತರ ಕಿತ್ತಾಟ: ಮಹದೇವಪ್ಪ ಅಸಮಾಧಾನಕ್ಕೆ ಭೈರತಿ ಸುರೇಶ್ ಹೇಳಿದ್ದಿಷ್ಟು

ಸರ್ಕಾರಿ ಮನೆಗಾಗಿ ಸಿದ್ದರಾಮಯ್ಯ ಆಪ್ತರ ಕಿತ್ತಾಟ: ಮಹದೇವಪ್ಪ ಅಸಮಾಧಾನಕ್ಕೆ ಭೈರತಿ ಸುರೇಶ್ ಹೇಳಿದ್ದಿಷ್ಟು

ಹರೀಶ್ ಜಿ.ಆರ್​.
| Edited By: |

Updated on: Sep 08, 2026 | 3:05 PM

Share

ಮಹದೇವಪ್ಪ, ಸಚಿವ ಭೈರತಿ ಸುರೇಶ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ತೊಂಬತ್ತು ದಿನಗಳ ಒಳಗೆ ನಿವಾಸ ಖಾಲಿ ಮಾಡಬೇಕು ಎನ್ನುವ ನಿಯಮವಿದ್ದರೂ, ಕನಿಷ್ಠ ಸೌಜನ್ಯ ತೋರದೇ ಇರುವುದು ತಪ್ಪು ಎಂದು ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭೈರತಿ, ಗಲಾಟೆ ಏನೂ ಇಲ್ಲ, ಹೇಗೆ ತಪ್ಪು ಮಾಹಿತಿ ಹೋಯ್ತು ಗೊತ್ತಿಲ್ಲ. ಸಿಎಂಗೆ ಮನೆ ಬೇಕು ಎಂದಾಗ ಕೊಡ್ತಾರೆ, ವಿವಾದ ಏನಿಲ್ಲ. ಮಹದೇವಪ್ಪ ಮನೆಗೆ ನೂರು ಸಲ ಹೋಗಿ ಊಟ ಮಾಡಿದ್ದೇನೆ. ನನ್ನ ಮೇಲೆ ಯಾಕೆ ಅಸಮಾಧಾನ ಬಂದಿದೆಯೋ ಗೊತ್ತಿಲ್ಲ. ನನಗೆ ಮನೆ ಅಲಾಟ್ ಆಗಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, (ಸೆಪ್ಟೆಂಬರ್ 08) : ಸಿದ್ದರಾಮಯ್ಯನವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಒಂದಲ್ಲಾ ಒಂದು ಕಾಂಗ್ರೆಸ್ಸಿನ ಆಂತರಿಕ ಫೈಟ್ ಹೊರಬರುತ್ತಲೇ ಇದೆ. ಅಧಿಕಾರ ಹಸ್ತಾಂತರದ ವೇಳೆ, ಹಲವು ನಾಯಕರು ಪರವಿರೋಧ ಹೇಳಿಕೆಯನ್ನು ನೀಡಿದ್ದು ಗೊತ್ತೇ ಇದೆ. ಈಗ, ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಭೈರತಿ ಸುರೇಶ್ ಹಾಗೂ ಎಚ್​​​ಸಿ ಮಹದೇವಪ್ಪ ನಡುವೆ ಸರ್ಕಾರಿ ನಿವಾಸದ ವಿಚಾರಕ್ಕೆ ಸಂಬಂಧಿಸಿದಂತೆ ತಿಕ್ಕಾಟ ನಡೆಯುತ್ತಿದೆ. ಟ್ವೀಟ್ (ಎಕ್ಸ್) ಮೂಲಕ ಮಹದೇವಪ್ಪ, ಸಚಿವ ಭೈರತಿ ಸುರೇಶ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ತೊಂಬತ್ತು ದಿನಗಳ ಒಳಗೆ ನಿವಾಸ ಖಾಲಿ ಮಾಡಬೇಕು ಎನ್ನುವ ನಿಯಮವಿದ್ದರೂ, ಕನಿಷ್ಠ ಸೌಜನ್ಯ ತೋರದೇ ಇರುವುದು ತಪ್ಪು ಎಂದು ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭೈರತಿ, ಗಲಾಟೆ ಏನೂ ಇಲ್ಲ, ಹೇಗೆ ತಪ್ಪು ಮಾಹಿತಿ ಹೋಯ್ತು ಗೊತ್ತಿಲ್ಲ. ಸಿಎಂಗೆ ಮನೆ ಬೇಕು ಎಂದಾಗ ಕೊಡ್ತಾರೆ, ವಿವಾದ ಏನಿಲ್ಲ. ಮಹದೇವಪ್ಪ ಮನೆಗೆ ನೂರು ಸಲ ಹೋಗಿ ಊಟ ಮಾಡಿದ್ದೇನೆ. ನನ್ನ ಮೇಲೆ ಯಾಕೆ ಅಸಮಾಧಾನ ಬಂದಿದೆಯೋ ಗೊತ್ತಿಲ್ಲ. ನನಗೆ ಮನೆ ಅಲಾಟ್ ಆಗಿದೆ ಎಂದು ಸ್ಪಷ್ಟಪಡಿಸಿದರು.

ಮಹದೇವಪ್ಪ ನನಗಿಂತ ದೊಡ್ಡವರು, ನಾನು ಅವರ ಮಗನ ಸಮಾನ. ಯಾವ ಗೋಡೆ ಒಡೆಸಿಲ್ಲ, ಮನೆ ಇಲಾಖೆಯವರು ಮಾಡಿರೋದು. ಮಹದೇವಪ್ಪ ನಮ್ಮ ಲೀಡರ್, ತಪ್ಪು ಗ್ರಹಿಕೆ‌ಯ ಕಾರಣದಿಂದ ಆಗಿದೆ. ಅದೇ ಮನೆಯಲ್ಲಿ ಹೆಚ್​.ಸಿ.ಮಹದೇವಪ್ಪ ಇರುತ್ತಾರೆ ಅಂದ್ರೆ ಇರಲಿ. ಸಿಎಂ ಅದೇ ಮನೆಯಲ್ಲಿ ಮಹದೇವಪ್ಪ ಇರಲಿ ಅಂದ್ರೆ ತಕರಾರು ಇಲ್ಲ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us