ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ ಕಥೆ ಬಿಚ್ಚಿಟ್ಟ ಸಚಿವ ಕೆ ವೆಂಕಟೇಶ್
ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ನಮ್ಮ ಸಮಾಜದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿ ಯದುವೀರ್ಗೆ ಟಿಕೆಟ್ ಕೊಟ್ಟಿದ್ದಾರೆ. ಯದುವೀರ್ ಹೆಸರು ಇರಲೇ ಇಲ್ಲ. ಆದರೆ ದೇವೆಗೌಡರೆ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಯದುವೀರ್ ಅವರನ್ನ ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರು, ಮಾರ್ಚ್ 2: ನಮ್ಮ ಸಮಾಜದ ಪ್ರತಾಪ್ ಸಿಂಹ (pratap simha) ಗೆ ಬಿಜೆಪಿ ಟಿಕೆಟ್ ತಪ್ಪಿಸಿ ಯದುವೀರ್ಗೆ ಟಿಕೆಟ್ ಕೊಟ್ಟಿದ್ದಾರೆ. ಯದುವೀರ್ ಹೆಸರು ಇರಲೇ ಇಲ್ಲ. ಆದರೆ ದೇವೆಗೌಡರೆ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಯದುವೀರ್ ಅವರನ್ನ ನಿಲ್ಲಿಸಿದ್ದಾರೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯ, ಹಾಸನಕ್ಕೆ ಅನುಕೂಲವಾಗುತ್ತೆ ಅಂತ ಅವರ ಸ್ವಾರ್ಥಕ್ಕಾಗಿ ಯದುವೀರ್ ಒಡೆಯರ್ ಅವರನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ನಾನು ದೇವೇಗೌಡರ ಹತ್ತಿರ ಸಂಬಂಧಿ. ಅವರು ಸ್ವಾರ್ಥ ಎಂಬ ಕಾರಣಕ್ಕೆ ನಾನು ದೂರ ಉಳಿದೆ. ನಾನು ರಾಜಕೀಯ ಸಾಕು, ಬಿಡಬೇಕು ಅಂದ್ಕೊಂಡಿದ್ದೆ. ಸಿಎಂ ಸಿದ್ದರಾಮಯ್ಯ ರಾಜಕಾರಣದಲ್ಲಿ ಉಳಿಸಿಕೊಂಡರು ಎಂದರು.
ಮೈಸೂರು ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಜಾತಿ ಕಾರ್ಡ್ ಪ್ಲೇ ಮಾಡಿದ ಕಾಂಗ್ರೆಸ್ ನಾಯಕರು
ನಾನು ಯಾವ ಜಾತಿಗೆ ಸೇರಿದ್ದಿನೋ, ಲಕ್ಷ್ಮಣ್ ಸವದಿ ಕೂಡ ಅದೇ ಜಾತಿಯವರು. ಪ್ರತಾಪ್ ಸಿಂಹ ಇವರನ್ನ ಒಕ್ಕಲಿಗರಲ್ಲ ಅಂದರು. ಲಕ್ಷ್ಮಣ್ರವರು ತಮ್ಮ ಕುಟುಂಬ ಸದಸ್ಯರ ಬಗ್ಗೆ ಮಾಹಿತಿಯನ್ನೇ ನೀಡಿದ್ದರು. ಹಾಗಾಗಿ ನಿಮಗೆ ಯಾವುದೇ ಸಂಶಯ ಬೇಡ ಅವರು ಒಕ್ಕಲಿಗರೇ. ಪ್ರತಾಪ್ ಸಿಂಹ ಬೇರೆ ಕಡೆ ಬಂದವರು. ಲಕ್ಷ್ಮಣ್ ಇಲ್ಲಿಯವರೆ ಮೈಸೂರಿನವರೇ, ಮೈಸೂರಿನಲ್ಲೇ ನೆಲೆಸಿದ್ದಾರೆ ಎಂದು ಹೇಳಿದ್ದಾರೆ.
ಒಕ್ಕಲಿಗ ಮತಗಳನ್ನ ಕ್ರೋಡೀಕರಣಕ್ಕೆ ಮುಂದಾದ ಸಿಎಂ
ಮೈಸೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರೇ ಹೆಚ್ಚಿದ್ದಾರೆ. ಒಕ್ಕಲಿಗರಿಗೆ ತಪ್ಪಿಸಿ ಒಡೆಯರ್ ಮನೆತನಕ್ಕೆ ಕೊಟ್ಟಿದ್ದಾರೆ. ತುಳಿಸಿದಾಸಪ್ಪ ನಂತರ ಲಕ್ಷ್ಮಣ್ಗೆ ಟಿಕೆಟ್ ನೀಡಿದ್ದೇವೆ. ಎಂ.ಲಕ್ಷ್ಮಣ್ ನೂರಕ್ಕೆ ನೂರು ಒಕ್ಕಲಿಗ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿನ ಮಹಾರಾಜರು ಮಾಡಿದ ಉತ್ತಮ ಕೆಲಸಗಳಿಂದಾಗಿ ಗೌರವಾದರಗಳು ಲಭ್ಯವಾಗುತ್ತಿವೆ: ಯದುವೀರ್ ಕೃಷ್ಣದತ್ ಒಡೆಯರ್
ಎರಡು ಬಾರಿ ಮೈಸೂರು-ಕೊಡಗು ಸಂಸದನಾಗಿ ಕೆಲಸ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದೆ. ಪ್ರತಾಪ್ ಸಿಂಹ ಬದಲಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಗೆ ಟಿಕೆಟ್ ನೀಡಲಾಗಿದ್ದು, ಸದ್ಯ ಚುನಾವಣಾ ಪ್ರಚಾರವನ್ನು ಸಹ ಅವರು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಯದುವೀರ್ ನಾಮಪತ್ರ ಸಲ್ಲಿಕೆ: ಮಹಾರಾಜರಿಗೆ ಕೃಷಿ ಭೂಮಿ, ಸ್ವಂತ ಮನೆ ಇಲ್ಲ
ಈ ಬೆಳವಣಿಗೆಯಿಂದ ವಿಚಲಿತರಾಗಿದ್ದ ಪ್ರತಾಪ್ ಸಿಂಹ ಯದುವೀರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದರು. ಅರಮನೆಯಲ್ಲಿದ್ದ ಯದುವೀರರನ್ನ ರಾಜಕಾರಣಕ್ಕೆ ಕರೆತರಲು ಮುಂದಾಗಿದ್ದ ತಮ್ಮದೇ ಪಕ್ಷದವರಿಗೂ ಟಾಂಗ್ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.