AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಮಾಂಸ ಸಾಗಿಸುವಾಗ ತಡೆದು ನೈತಿಕ ಪೊಲೀಸ್​ಗಿರಿ: ಮಗಳನ್ನು ಬಿಟ್ಟು ಓಡಿಹೋದ ತಂದೆ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರೆದಿದೆ. ದ್ವಿಚಕ್ರ ವಾಹನದಲ್ಲಿ ಗೋಮಾಂಸ ಸಾಗಿಸುವಾಗ ತಡೆದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಹಾಗೂ ಅಕ್ರಮ ಗೋಮಾಂಸ ಸಾಗಾಟ ಮಾಡಿದವರ ವಿರುದ್ಧ ಬಜ್ಪೆ ಠಾಣೆಯಲ್ಲಿ ಸ್ವತಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ಗೋಮಾಂಸ ಸಾಗಿಸುವಾಗ ತಡೆದು ನೈತಿಕ ಪೊಲೀಸ್​ಗಿರಿ: ಮಗಳನ್ನು ಬಿಟ್ಟು ಓಡಿಹೋದ ತಂದೆ
ಪ್ರಾತಿನಿಧಿಕ ಚಿತ್ರ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Dec 27, 2025 | 8:16 PM

Share

ಮಂಗಳೂರು, ಡಿಸೆಂಬರ್​ 27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್​ಗಿರಿ (Moral Policing) ಮುಂದುವರೆದಿದೆ. ದ್ವಿಚಕ್ರ ವಾಹನದಲ್ಲಿ ಗೋಮಾಂಸ ಸಾಗಿಸುವಾಗ ತಡೆದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಂಗಳೂರಿನ (Mangaluru) ಮಳಲಿ-ನಾರ್ಲಪದವು ರಸ್ತೆಯಲ್ಲಿ ಘಟನೆ ನಡೆದಿದೆ. ಗೋಮಾಂಸ ಸಾಗಣೆ ಹಿನ್ನೆಲೆ ಅಬ್ದುಲ್ ಸತ್ತಾರ್ ಮುಲ್ಲಾರಪಟ್ನಾ ಎಂಬುವವರ ವಿರುದ್ಧ ಬಜ್ಪೆ ಠಾಣೆಯಲ್ಲಿ ಸ್ವತಂಪ್ರೇರಿತ ಕೇಸ್ ದಾಖಲಾಗಿದೆ.

ನಡೆದದ್ದೇನು?

ಅಬ್ದುಲ್ ಸತ್ತಾರ್ ಮುಲ್ಲಾರಪಟ್ನಾ ಎಂಬುವವರು ಗೋಮಾಂಸ ಸಾಗಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಮಂಗಳೂರಿನ ಮಳಲಿ-ನಾರ್ಲಪದವು ರಸ್ತೆಯಲ್ಲಿ ಗೋಮಾಂಸ ಸಾಗಿಸುವಾಗ ಟಾಟಾ ಸುಮೊದಲ್ಲಿ ಚೇಸ್​ ಮಾಡಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಅಬ್ದುಲ್​​ರನ್ನು ತಡೆದು ಸುಮಿತ್ ಬಂಡಾರಿ ಮತ್ತು ರಜತ್ ನಾಯ್ಕ್​ರಿಂದ ನೈತಿಕ ಪೊಲೀಸ್​ಗಿರಿ ಮೆರೆಯಲಾಗಿದೆ.

ಇದನ್ನೂ ಓದಿ: ಕೋಳಿ ಅಂಕ: ಕಾಂಗ್ರೆಸ್ ಶಾಸಕ ಆಯ್ತು ಈಗ ಬಿಜೆಪಿ ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಸೇರಿ 27 ಜನರ ವಿರುದ್ಧ ಕೇಸ್

ದ್ವಿಚಕ್ರ ವಾಹನ ಬಿದ್ದಾಗ ಸೈಲೆನ್ಸರ್ ಟಚ್ ಆಗಿದ್ದರಿಂದ ಅಬ್ದುಲ್ ಸತ್ತಾರ್ ಮುಲ್ಲಾರಪಟ್ನಾ ಮಗಳ ಕಾಲಿಗೆ ಗಾಯವಾಗಿದೆ. ದ್ವಿಚಕ್ರ ವಾಹನ ಮತ್ತು ಮಗಳನ್ನು ಬಿಟ್ಟು ಅಬ್ದುಲ್ ಸತ್ತಾರ್ ಓಡಿಹೋಗಿದ್ದಾರೆ. ಅಬ್ದುಲ್ ಸತ್ತಾರ್ ಪುತ್ರಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತಂದೆ ಮೇಲೆ ಹಲ್ಲೆ ಮಾಡಿದರು ಎಂದು ಪುತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಹಿನ್ನೆಲೆ  ಸುಮಿತ್ ಮತ್ತು ರಜತ್ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನೈತಿಕ ಪೊಲೀಸ್​ಗಿರಿ

ಇನ್ನು ಇತ್ತೀಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನೈತಿಕ ಪೊಲೀಸ್​ಗಿರಿಯೊಂದು ನಡೆದಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಮುಸ್ಲಿಂ ಯುವತಿಯೊಬ್ಬಳು ಅನ್ಯಕೋಮಿನ ಯುವಕನ ಜೊತೆ ಬೈಕ್​ನಲ್ಲಿ ಬರುತ್ತಿದ್ದ ವೇಳೆ ಮತ್ತೊಂದು ಬೈಕ್​ನಲ್ಲಿ ಬಂದ ಇಬ್ಬರು ಯುವಕರು ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದ ಬಳಿ ತಡೆದು ನೀವು ಯಾರು? ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ನಂತರ ಬೈಕ್‌ನಿಂದ ಯುವತಿಯನ್ನ ಇಳಿಸಿ ಬೆದರಿಕೆ ಕೂಡ ಹಾಕಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:36 pm, Sat, 27 December 25