AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಕ್ಕೆ ಮತ್ತೊಂದು ಟೆನ್ಷನ್: ವಿದೇಶದಿಂದ ಹಾರಿ ಬರಲಿದ್ದಾರೆ 10 ಸಾವಿರ ಮಂದಿ!

ಬೆಂಗಳೂರು: ಕೊರೊನಾಘಾತಕ್ಕೆ ನಲುಗಿರುವ ರಾಜ್ಯಕ್ಕೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಶೀಘ್ರವೇ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ 10 ಸಾವಿರ ಭಾರತೀಯ ಮೂಲದ ಪ್ರಯಾಣಿಕರು ವಿದೇಶಗಳಿಂದ ವಾಪಸಾಗಲಿದ್ದಾರೆ. ವಿದೇಶದಿಂದ ವಾಪಸಾಗುವ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಪಿ.ಎನ್.ರವೀಂದ್ರ ಹೇಳಿದ್ದಾರೆ. ವಿದೇಶದಿಂದ ಆಗಮಿಸಲಿರುವ ಪ್ರಯಾಣಿಕರ ಕ್ವಾರಂಟೈನ್​ಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಭಾಗಗಳಲ್ಲಿ ರೆಸಾರ್ಟ್, ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್, ಪಿಜಿಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಬಂದ ಪ್ರಯಾಣಿಕರನ್ನ ಸ್ಕ್ರೀನಿಂಗ್ ಮಾಡಿ 14 […]

ರಾಜ್ಯಕ್ಕೆ ಮತ್ತೊಂದು ಟೆನ್ಷನ್: ವಿದೇಶದಿಂದ ಹಾರಿ ಬರಲಿದ್ದಾರೆ 10 ಸಾವಿರ ಮಂದಿ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 05, 2020 | 3:47 PM

Share

ಬೆಂಗಳೂರು: ಕೊರೊನಾಘಾತಕ್ಕೆ ನಲುಗಿರುವ ರಾಜ್ಯಕ್ಕೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಶೀಘ್ರವೇ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ 10 ಸಾವಿರ ಭಾರತೀಯ ಮೂಲದ ಪ್ರಯಾಣಿಕರು ವಿದೇಶಗಳಿಂದ ವಾಪಸಾಗಲಿದ್ದಾರೆ. ವಿದೇಶದಿಂದ ವಾಪಸಾಗುವ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಪಿ.ಎನ್.ರವೀಂದ್ರ ಹೇಳಿದ್ದಾರೆ.

ವಿದೇಶದಿಂದ ಆಗಮಿಸಲಿರುವ ಪ್ರಯಾಣಿಕರ ಕ್ವಾರಂಟೈನ್​ಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಭಾಗಗಳಲ್ಲಿ ರೆಸಾರ್ಟ್, ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್, ಪಿಜಿಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಬಂದ ಪ್ರಯಾಣಿಕರನ್ನ ಸ್ಕ್ರೀನಿಂಗ್ ಮಾಡಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತೆ.

ಸ್ಕ್ರೀನಿಂಗ್ ವೇಳೆ 3 ವಿಭಾಗಗಳಾಗಿ ವಿಂಗಡನೆ: ಪ್ರಯಾಣಿಕರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತೆ. ಈ ವೇಳೆ ಎ, ಬಿ ಮತ್ತು ಸಿ ವಿಭಾಗಗಳಾಗಿ ವಿಂಗಡಿಸಲಾಗುತ್ತೆ. ಎ ಗ್ರೇಡ್ ಬಂದವರಿಗೆ ಬೆಂಗಳೂರಿನಲ್ಲಿ, ಬಿ ಮತ್ತು ಸಿ ಗ್ರೇಡ್ ಬಂದವರಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತೆ.

ಈ ನಿಟ್ಟಿನಲ್ಲಿ ಈಗಾಗಲೇ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 356 ಹೋಟೆಲ್, ರೆಸಾರ್ಟ್ ಮತ್ತು ಕಲ್ಯಾಣ ಮಂಟಪಗಳನ್ನ ಬುಕ್ಕಿಂಗ್ ಮಾಡಲಾಗಿದೆ ಎಂದು ಟಿವಿ9ಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದ್ದಾರೆ.

Published On - 3:42 pm, Tue, 5 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು