ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?

ಈ ಬ್ಯುಸಿ ಜೀವನದಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಸೌಂದರ್ಯವನ್ನು ಸವಿಯಲು ನೀವು ಮುಳ್ಳಯ್ಯನಗಿರಿ(Mullayanagiri)ಗೆ ಒಮ್ಮೆಯಾದರೂ ಹೋಗಲೇಬೇಕು. ಬೇಸಿಗೆಯ ಧಗೆಯಲ್ಲೂ ತಂಪು ನೀಡುತ್ತೆ ಈ ಕಾಫಿನಾಡಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯ್ಯನಗಿರಿ. ಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ಪಟ್ ಅಂತಾ ನವಾರಣೆಯಾಗುತ್ತದೆ. ಮುಳ್ಳಯ್ಯನಗಿರಿ ಬೆಟ್ಟ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು […]

ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?
ಮುಳ್ಳಯ್ಯನಗಿರಿ

Updated on: Apr 23, 2024 | 3:21 PM

ಈ ಬ್ಯುಸಿ ಜೀವನದಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಸೌಂದರ್ಯವನ್ನು ಸವಿಯಲು ನೀವು ಮುಳ್ಳಯ್ಯನಗಿರಿ(Mullayanagiri)ಗೆ ಒಮ್ಮೆಯಾದರೂ ಹೋಗಲೇಬೇಕು. ಬೇಸಿಗೆಯ ಧಗೆಯಲ್ಲೂ ತಂಪು ನೀಡುತ್ತೆ ಈ ಕಾಫಿನಾಡಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯ್ಯನಗಿರಿ. ಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ಪಟ್ ಅಂತಾ ನವಾರಣೆಯಾಗುತ್ತದೆ. ಮುಳ್ಳಯ್ಯನಗಿರಿ ಬೆಟ್ಟ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು ಮತ್ತು ದಕ್ಷಿಣ ಕರ್ನಾಟಕದ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಮುಳ್ಳಯ್ಯನಗಿರಿಯ ಆಕರ್ಷಣೆಗಳು
ಹೆಚ್ಚುಚಾರಣದ ಅಗತ್ಯವಿಲ್ಲದೆ ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ಮುಳ್ಳಯ್ಯನಗಿರಿ ಶಿಖರವನ್ನು ತಲುಪಲು ವಾಹನ ನಿಲುಗಡೆ ಸ್ಥಳದಿಂದ 500 ಮೆಟ್ಟಿಲುಗಳನ್ನು ಒಳಗೊಂಡ ಸಣ್ಣ ಚಾರಣವಷ್ಟೇ ಸಾಕಾಗಿದೆ.
ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ನಯನ ಮನೋಹರ ನೋಟವನ್ನು ನೀಡುತ್ತದೆ. ತಂಪಾದ ಗಾಳಿ, ಮೈ ನವಿರೇಳಿಸುವ ಸೂರ್ಯಾಸ್ತ ಇತರ ಆಕರ್ಷಣೆಗಳಾಗಿವೆ.

ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಆವರಿಸುತ್ತದೆ. ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೇನೋ ಎಂಬ ಅನುಭವ ಎದುರಾಗುತ್ತದೆ. ನಮ್ಮ ಪಕ್ಕದಲ್ಲಿರುವ ವ್ಯಕ್ತಿ/ವಸ್ತುಗಳೇ ಕಾಣದಷ್ಟು ಮಂಜು ಆವರಿಸುವ ಮೂಲಕ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಎಲ್ಲಾ ಋತುವಿನಲ್ಲೂ ಭೇಟಿ ನೀಡಬಹುದು  : ಮುಳ್ಳಯ್ಯನಗಿರಿ ಶಿಖರವನ್ನು ವರ್ಷಪೂರ್ತಿ ಭೇಟಿ ಮಾಡಬಹುದು.
ದೇವಾಲಯ: ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವಿದೆ.ಮುಳ್ಳಯ್ಯನಗಿರಿಗೆ ಹೋಗುವ ದಾರಿಯಲ್ಲಿ ಸೀತಾಳಯ್ಯನಗಿರಿ ಬೆಟ್ಟ, ದೇವಸ್ಥಾನವಿದೆ. ಬಾಬಾಬುಡನಗಿರಿ ಮತ್ತು ಮಾಣಿಕ್ಯಾಧರ ಜಲಪಾತಗಳು (ಮುಳ್ಳಯ್ಯನಗಿರಿ ಯಿಂದ 26 ಕಿ.ಮೀ) ಹತ್ತಿರದ ನೋಡಲೇಬೇಕಾದ ತಾಣಗಳಾಗಿವೆ.

ತಲುಪುವುದು ಹೇಗೆ?
ಮಂಗಳೂರಿನಿಂದ ಸುಮಾರು 172 ಕಿ.ಮೀ ದೂರದಲ್ಲಿದ್ದು, ಉಡುಪಿಯಿಂದ 187 ಕಿ.ಮೀ, ಬೆಂಗಳೂರಿನಿಂದ 264 ಕಿ.ಮೀ, ಉಜಿರೆಯಿಂದ 106 ಕಿ.ಮೀ. ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಮಂಗಳೂರು-ಉಜಿರೆ-ಚಾರ್ಮಾಡಿ ಮಾರ್ಗವಾಗಿ ಹೋಗಬಹುದು. ಇದಲ್ಲದೆ ಮಂಗಳೂರು-ಕಾರ್ಕಳ-ಕಳಸ-ಬಾಳೆಹೊನ್ನೂರು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‍ಗಳ ಸೇವೆ ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯೂ ಇದೆ. ಸ್ವಂತ ವಾಹನಗಳು ಇಲ್ಲದ ಮಂದಿ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಈ ಸ್ಥಳವನ್ನು ತಲುಪಬಹುದು.

ಕಡೂರ್ ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (ಮುಳ್ಳಯ್ಯನಗಿರಿಯಿಂದ 60 ಕಿ.ಮೀ) ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (180 ಕಿ.ಮೀ). ಚಿಕ್ಕಮಗಳೂರು (ಮುಳ್ಳಯ್ಯನಗಿರಿ ಯಿಂದ 22 ಕಿ.ಮೀ) ವರೆಗೆ ಬಸ್ಸುಗಳು ಲಭ್ಯವಿದೆ. ಚಿಕ್ಕಮಗಳೂರು ಅಥವಾ ಕಡೂರಿನಿಂದ ಟ್ಯಾಕ್ಸಿ ಪಡೆದು ಮುಳ್ಳಯ್ಯನಗಿರಿ ಯನ್ನು ತಲುಪಬಹುದು. ಕೊನೆಯ ಕೆಲವು ಕಿ.ಮೀ.ಗಳು ಕಿರಿದಾದ ರಸ್ತೆಯಾಗಿದ್ದು, ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ.

ವಸತಿ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಕೈಗೆಟುಕುವ ಹೋಂ ಸ್ಟೇಗಳು ಲಭ್ಯವಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಬಜೆಟ್ ಹೋಟೆಲ್‌ಗಳು ಲಭ್ಯವಿದೆ.

 

ರಾಜ್ಯದ ಇತರೆ ಸುದ್ದುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:31 pm, Sun, 21 April 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us