ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ನಾಡಿನ ಜನತೆಗೆ ಧನ್ಯವಾದ ತಿಳಿಸಿದ ಡಿಕೆಶಿ
ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಮುಖ್ಯಮಂತ್ರಿ ಚಾಲನೆ ನೀಡಿರುವ ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಅಕ್ಟೋಬರ್ 22) ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಕೋಟೆ ಆಂಜನೇಯ ದೇಗುಲ ಬಳಿ ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನ್ನ ಮರೆಯಲಾಗದ ದಿನ ಇವತ್ತು. ತಾಯಿ ಚಾಮುಂಡಿ ಆಶೀರ್ವಾದದಿಂದ ನನಗೆ ಅವಕಾಶ ಸಿಕ್ಕಿದೆ, ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ. ಮಳೆ – ಬೆಳೆ ಚೆನ್ನಾಗಿ ಆಗಬೇಕು ಅಂತಾ ಚಾಮುಂಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಮೈಸೂರು, (ಅಕ್ಟೋಬರ್ 22): ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಮುಖ್ಯಮಂತ್ರಿ ಚಾಲನೆ ನೀಡಿರುವ ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಅಕ್ಟೋಬರ್ 22) ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಕೋಟೆ ಆಂಜನೇಯ ದೇಗುಲ ಬಳಿ ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನ್ನ ಮರೆಯಲಾಗದ ದಿನ ಇವತ್ತು. ಇಡೀ ಜನರ ಆಶೀರ್ವಾದಿಂದ ತಾಯಿ ಚಾಮುಂಡಿ ಭವ್ಯ ಮೆರಣಿಗೆಯಲ್ಲಿ ನಾಡಿನ ಪ್ರತಿನಿಧಿಯಾಗಿ ಭಾಗವಹಿಸುವ ಅವಕಾಶ ದೊರೆತಿದೆ. ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ. ಮಳೆ – ಬೆಳೆ ಚೆನ್ನಾಗಿ ಆಗಬೇಕು ಅಂತಾ ಚಾಮುಂಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಹೊಸ ಆನೆ ಮೇಲೆ ತಾಯಿ ಚಾಮುಂಡಿ ಮೆರವಣಿಗೆ ಸಾಗಲಿದೆ, ಲಕ್ಷಾಂತರ ಜನ ಈ ದಸರಾ ನೋಡಿದ್ದಾರೆ. ಈ ದಸರೆಯಿಂದ ದ್ವೇಷ ದೂರವಾಗಲಿ. ಸಾಮರಸ್ಯ ನಿರ್ಮಾಣ ಆಗಲಿ, ಅನ್ಯಾಯ ಅಳಿಯಬೇಕು. ರಾಜ್ಯದಲ್ಲಿ ಪ್ರತಿ ವ್ಯವಸ್ಥೆಯಲ್ಲಿ ಅನ್ಯಾಯವಿದೆ, ಈ ಅನ್ಯಾಯ ದೂರವಾಗಬೇಕು. ಯುವಕರ ಭವಿಷ್ಯ ಬೆಳಗಬೇಕು. ಎಲ್ಲದಕ್ಕೂ ತಾಯಿ ಕೃಪೆ ಇರಬೇಕು ಎಂದು ಪ್ರಾರ್ಥಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 21, 2026 03:18 PM
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್ಐಟಿ ಭೇಟಿ

