ರಾಮ ಲಲ್ಲಾ ನೋಡುವ ಆಸೆಯಿದೆ, ಅಯೋಧ್ಯೆಗೆ ಹೋಗುತ್ತೇವೆ: ಅರುಣ್ ಯೋಗಿರಾಜ್ ಪತ್ನಿ, ತಾಯಿ ಹೇಳಿಕೆ
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಗಳು ಮುಗಿದ ನಂತರ ಒಂದು ದಿನ ಅಲ್ಲಿಗೆ ತೆರಳುತ್ತೇವೆ. ಖುದ್ದು ಅರುಣ್ ಯೋಗಿರಾಜ್ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಆಗ ಹೋಗಿ ರಾಮ ಲಲ್ಲಾನ ದರ್ಶನ ಪಡೆದು ಬರುತ್ತೇವೆ ಎಂದು ಅರುಣ್ ಯೋಗಿರಾಜ್ ಕುಟುಂಬದವರು ಹೇಳಿದ್ದಾರೆ.

ಮೈಸೂರು, ಜನವರಿ 19: ನಮಗೂ ರಾಮ ಲಲ್ಲಾನನ್ನು (Ram Lalla) ನೋಡುವ ಆಸೆ ಇದೆ. ಅರುಣ್ ಯೋಗಿರಾಜ್ (Arun Yogiraj) ಖುದ್ದಾಗಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಅವರ ಜೊತೆಯೇ ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳಿ ರಾಮ ಲಲ್ಲಾನನ್ನು ನೋಡುತ್ತೇವೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ವಿಜೇತ ಹಾಗೂ ತಾಯಿ ಹೇಳಿದರು. ‘ಟಿವಿ9’ ಜತೆ ಮಾತನಾಡಿದ ಅರುಣ್ ಯೋಗಿರಾಜ್ ತಾಯಿ, ಪತ್ನಿ ಹಾಗೂ ಸಹೋದರಿ ‘ನಾವು ಇದುವರೆಗೂ ರಾಮ ಲಲ್ಲಾನನ್ನು ನೋಡಿಲ್ಲ. ನಮಗೂ ನೋಡಬೇಕು ಎಂಬ ಆಸೆ ಇದೆ. ಆದರೆ ಈಗ ಅದು ಸಾಧ್ಯವಿಲ್ಲ’ ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಗಳು ಮುಗಿದ ನಂತರ ಒಂದು ದಿನ ಅಲ್ಲಿಗೆ ತೆರಳುತ್ತೇವೆ. ಖುದ್ದು ಅರುಣ್ ಯೋಗಿರಾಜ್ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಆಗ ಹೋಗಿ ರಾಮ ಲಲ್ಲಾನ ದರ್ಶನ ಪಡೆದು ಬರುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಕಠಿಣ ವ್ರತ ಆಚರಿಸಲಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ: ಸರಯೂ ನದಿತಟದಲ್ಲಿ ಭಕ್ತರ ದಂಡು, ಊರಿಗೆ ಕೊಂಡೊಯ್ಯಲು ಬಾಟಲಿಗಳಲ್ಲಿ ಪವಿತ್ರ ನೀರಿನ ಸಂಗ್ರಹ
ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅಯೋಧ್ಯೆಯ ಪವಿತ್ರ ಸರಯೂ ನದಿ ನೀರಿನಲ್ಲಿ ಸ್ನಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಸರಯೂ ನದಿಯಲ್ಲಿ ಸ್ನಾನ ಮಾಡಿದ ನಂತರ, ಕಲಶದಲ್ಲಿ ಸರಯೂವಿನ ಪವಿತ್ರ ಜಲವನ್ನು ತೆಗೆದುಕೊಂಡು ರಾಮಮಂದಿರದವರೆಗೆ ತೆರಳಲಾಗುತ್ತದೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ, ಅಂದರೆ, ಜನವರಿ 21 ರಂದೇ ಪ್ರಧಾನಿ ಅಯೋಧ್ಯೆಗೆ ತೆರಳುವ ಸಾಧ್ಯತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ