ಕಾರು ಗುದ್ದಿದ ರಭಸಕ್ಕೆ ಆಟೋ ನಜ್ಜುಗುಜ್ಜು, ಚಾಲಕ ಸಾವು, ಸಂಚಾರಿ ಪೊಲೀಸರ ನರಳಾಟ
ಮೈಸೂರು: ಅದೊಂದು ರಸ್ತೆ ಮೈಸೂರಿನ ವಾಹನ ಸವಾರರ ಪಾಲಿಗೆ ಯಮದಾರಿಯಾಗಿ ಪರಿಣಮಿಸಿದೆ. ಪದೇ ಪದೆ ಅಪಘಾತ ಸಂಭವಿಸುತ್ತಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋ ಆರೋಪ ಕೇಳಿಬರುತ್ತಿರುವಾಗಲೇ, ಸಂಚಾರಿ ಪೊಲೀಸರೇ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಭಸವಾಗಿ ಬಂದು ಆಟೋಗೆ ಗುದ್ದಿದ ಕಾರು: ಮೈಸೂರು ಹಾಗೂ ನರಸೀಪುರ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ. ಈ ರಸ್ತೆ ಅಂದರೆ ಸಾಕು ಮೈಸೂರಿನ ವಾಹನ ಸವಾರರು ಬೆಚ್ಚಿಬೀಳ್ತಾರೆ. ಯಾಕಂದ್ರೆ, ಇಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತವೆ. ಹೀಗೆ ಹತ್ತಾರು ಜನ ಪ್ರಾಣ […]
ಮೈಸೂರು: ಅದೊಂದು ರಸ್ತೆ ಮೈಸೂರಿನ ವಾಹನ ಸವಾರರ ಪಾಲಿಗೆ ಯಮದಾರಿಯಾಗಿ ಪರಿಣಮಿಸಿದೆ. ಪದೇ ಪದೆ ಅಪಘಾತ ಸಂಭವಿಸುತ್ತಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋ ಆರೋಪ ಕೇಳಿಬರುತ್ತಿರುವಾಗಲೇ, ಸಂಚಾರಿ ಪೊಲೀಸರೇ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಭಸವಾಗಿ ಬಂದು ಆಟೋಗೆ ಗುದ್ದಿದ ಕಾರು: ಮೈಸೂರು ಹಾಗೂ ನರಸೀಪುರ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ. ಈ ರಸ್ತೆ ಅಂದರೆ ಸಾಕು ಮೈಸೂರಿನ ವಾಹನ ಸವಾರರು ಬೆಚ್ಚಿಬೀಳ್ತಾರೆ. ಯಾಕಂದ್ರೆ, ಇಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತವೆ. ಹೀಗೆ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ ಎಂಬ ಆರೋಪಗಳ ಮಧ್ಯೆ, ನಿನ್ನೆಯೂ ಭೀಕರ ಅಪಘಾತವೊಂದು ನಡೆದುಹೋಗಿದೆ. ದೇವರಾಜ ಠಾಣೆ ಸಿಬ್ಬಂದಿಯ ಗೃಹಪ್ರವೇಶಕ್ಕೆ ಆಟೋದಲ್ಲಿ ಹೊರಟಿದ್ದ ಮೂವರು ಸಂಚಾರಿ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ರೆ, ಇದೇ ಸಮಯದಲ್ಲಿ ಆಟೋಚಾಲಕನ ಪ್ರಾಣಪಕ್ಷಿ ಹಾರಿಹೋಗಿದೆ.
ಕಾರು, ಚಾಲಕನನ್ನು ವಶಕ್ಕೆ ಪಡೆದ ಖಾಕಿ ಪಡೆ: ಇನ್ನು ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕನನ್ನ ಶಿವು ಅಂತಾ ಗುರುತಿಸಲಾಗಿದೆ. ಹಾಗೇ ಆಟೋದಲ್ಲಿದ್ದ ಎಎಸ್‌ಐ ಕೃಷ್ಣಮೂರ್ತಿ, ಎಎಸ್‌ಐ ಸುಬ್ರಮಣ್ಯ ಮತ್ತು ಮುಖ್ಯಪೇದೆ ರವಿಕುಮಾರ್ ಗಾಯಗೊಂಡಿದ್ದಾರೆ.
ಇವರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆಯಾದ್ರೂ, ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಈ ರಸ್ತೆಯಲ್ಲಿ ಪದೇ ಪದೆ ಅಪಘಾತ ಸಂಭವಿಸುತ್ತಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಒಟ್ನಲ್ಲಿ ಗೃಹಪ್ರವೇಶಕ್ಕೆ ಅಂತಾ ಸಂಭ್ರಮದಿಂದ ಹೊರಟಿದ್ದವರ ಬಾಳಲ್ಲಿ ಕತ್ತಲು ಆವರಿಸಿದೆ. ಇನ್ನೊಂದು ಕಡೆ ಆಟೋ ಚಾಲಕ ಪ್ರಾಣವನ್ನೇ ಬಿಟ್ಟಿದ್ದಾನೆ. ಇದೆಲ್ಲಾ ಸ್ಥಳೀಯರನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯಲ್ಲಿ ಪದೇ ಪದೆ ಅಪಘಾತ ಸಂಭವಿಸಲು ಕಾರಣವಾದ್ರು ಏನು ಅನ್ನೋದನ್ನ ತಿಳಿಯಬೇಕಿದೆ.
Published On - 5:00 pm, Sat, 1 February 20