ರೈತರ ಮಾತನ್ನ ಗೌರವದಿಂದ ಕೇಳುವ ಸರ್ಕಾರ ಇದು: ಮೈಸೂರಿನ ರೈತ ಸಮಾವೇಶದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ
ಸರ್ಕಾರ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೆ. ರೈತರ ಧ್ವನಿಗೆ ಬಲ ಕೊಡಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಹಾಯ ಸಹಕಾರ ಸದಾ ಇರಲಿ ಎಂದು ರೈತ ಸಮಾವೇಶದಲ್ಲಿ ಸಿಎಂ ಬಸವಾರಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ಮೈಸೂರು: ಕರ್ನಾಟಕ ರಾಜ್ಯದಲ್ಲಿ ಕೃಷಿಗೆ ಹೊಸ ನಿರ್ದೇಶನಾಲಯ ಮಾಡುವ ಚಿಂತನೆ ಇದೆ ಎಂದು ಮೈಸೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರೈತರ ಮಕ್ಕಳ ಯೋಜನೆ ಪ್ರಸ್ತಾಪ ಮಾಡಿದ ಬೊಮ್ಮಾಯಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ವಿಸ್ತರಣೆ ಮಾಡ್ತೇವೆ ಎಂದು ಪ್ರೌಢಶಾಲೆ ಹೆಣ್ಣು ಮಕ್ಕಳಿಗೆ ವಿಸ್ತರಣೆ ಮಾಡುವ ಭರವಸೆ ನೀಡಿದ್ದಾರೆ.
ರೈತರ ಮಾತನ್ನ ಗೌರವದಿಂದ ಕೇಳುವ ಸರ್ಕಾರ ಇದಾಗಿದೆ. ರೈತರಿಗೆ 2 ಪಟ್ಟು ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಒಂದು ತಿಂಗಳಲ್ಲಿ ರೈತರ ಖಾತೆಗೆ ನೇರವಾಗಿ ನೀಡಲಾಗುತ್ತಿದೆ. ಸರ್ಕಾರ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೆ. ರೈತರ ಧ್ವನಿಗೆ ಬಲ ಕೊಡಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಹಾಯ ಸಹಕಾರ ಸದಾ ಇರಲಿ ಎಂದು ರೈತ ಸಮಾವೇಶದಲ್ಲಿ ಸಿಎಂ ಬಸವಾರಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ರಾಜಕೀಯ ಪಕ್ಷಗಳು ಒಂದು ಕಟು ಸತ್ಯ ತಿಳಿದುಕೊಳ್ಳಬೇಕು. ಎಲ್ಲ ಪಕ್ಷಗಳು ರೈತರ ಪರವಾಗಿವೆ ಅನ್ನೋದನ್ನ ಅರಿಯಬೇಕು. ಆಹಾರ ಉತ್ಪಾದನೆ ಮಾಡಿದ ರೈತನ ಬಗ್ಗೆ ಗಮನವೇ ಇಲ್ಲ. ಆಹಾರ ಉತ್ಪಾದನೆ ಮಾಡಿದವನ ಜೇಬು ಖಾಲಿಯಾಗಿದೆ. ರೈತನದ್ದು ಒಂದು ಕಡೆ ಅನಿಶ್ಚಿತತೆಯ ಬದುಕು. ರೈತನಿಗೆ ಮಳೆ ಬೆಳೆ ಬೆಲೆ ಬಗ್ಗೆ ಯೋಚಿಸುವ ಬದುಕು ಇದೆ. ಇದರ ನಡುವೆ ಸ್ಥಿರತೆ ಕೊಡುವ ಕೆಲಸ ಆಗಬೇಕು. ನಮ್ಮ ಯೋಜನೆ, ಯೋಚನೆ ರೈತನ ಕಡೆಗೇ ಇರಬೇಕು. ರೈತನ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಕೆಲಸವಾಗಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಗಬೇಕಿದೆ. ಬೆಳೆ ನಷ್ಟವಾದಾಗ ನೇರವಾಗಿ ಪರಿಹಾರ ತಲುಪಿಸಬೇಕು. ಸರ್ಕಾರ ರೈತರಿಗೆ ಪರಿಹಾರ ನೇರವಾಗಿ ತಲುಪಿಸಬೇಕು ಎಂದು ಮೈಸೂರಿನ ರೈತ ಸಮಾವೇಶದಲ್ಲಿ ಸುತ್ತೂರುಶ್ರೀ ಆಗ್ರಹ ಮಾಡಿದ್ದಾರೆ. ಸಮಸ್ಯೆ ಮನುಷ್ಯರಿಗೆ ಬರುತ್ತದೆ ಅದಕ್ಕೆಲ್ಲಾ ಪರಿಹಾರ ಇದೆ. ರೈತರು ಎದೆಗುಂದಬಾರದು, ಕೆಟ್ಟ ಯೋಚನೆ ಮಾಡಬಾರದು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಕೊವಿಡ್ ಲಸಿಕೆ ಪಡೆದ್ರೆ ಮಾತ್ರ ಮಹಾಮಾರಿ ತಡೆಗಟ್ಟಬಹುದು: ಕೆ ಸುಧಾಕರ್ ಮೈಸೂರಿನ JSS ಆಸ್ಪತ್ರೆ ಆವರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ಸಿಜನ್ ಜನರೇಟರ್ ಪ್ಲಾಂಟ್ ಉದ್ಘಾಟಿಸಿದ್ದಾರೆ. ಸಚಿವ ಡಾ.ಸುಧಾಕರ್, ಶಾಸಕರಾದ ಜಿಟಿಡಿ, ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.
ಸಂಭವನೀಯ 3ನೇ ಅಲೆ ಒಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ಒಮಿಕ್ರಾನ್ ತೀವ್ರತೆ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಕೊವಿಡ್ ಲಸಿಕೆ ಪಡೆದ್ರೆ ಮಾತ್ರ ಮಹಾಮಾರಿ ತಡೆಗಟ್ಟಬಹುದು ಎಂದು ಮೈಸೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಕೊವಿಡ್ ವೇಳೆಯಲ್ಲಿ ಸರ್ಕಾರಕ್ಕೆ ಸಂಘ, ಸಂಸ್ಥೆಗಳ ಸಹಕಾರ ಇದೆ. ಸಂಘ ಸಂಸ್ಥೆ, ಆಸ್ಪತ್ರೆಗಳು ಸರ್ಕಾರಕ್ಕೆ ಸಹಕಾರವನ್ನ ನೀಡಿವೆ. 3,000 ಆಕ್ಸಿಜನ್ ಬೆಡ್ಗಳನ್ನು ಸಿದ್ಧಪಡಿಸಲಾಗಿದೆ. ದಾಖಲೆ ಮಟ್ಟದಲ್ಲಿ ಕೊರೊನಾ ಲಸಿಕೆಯನ್ನು ಹಾಕಿದ್ದೇವೆ ಶೇ.100ರಷ್ಟು ಫಸ್ಟ್ ಡೋಸ್, ಶೇ.90ರಷ್ಟು 2ನೇ ಡೋಸ್ ನೀಡಿಕೆ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ನೀವು ಕೇಂದ್ರ ಸಚಿವರಾಗಿ ಏನು ಪ್ರಯೋಜನ: ಭಗವಂತ ಖೂಬಾಗೆ ರೈತನ ಪ್ರಶ್ನೆ
ಇದನ್ನೂ ಓದಿ: ಮಕ್ಕಳಿಗೂ ಶೀಘ್ರ ಕೊರೊನಾ ಲಸಿಕೆ: ಕೊವ್ಯಾಕ್ಸಿನ್ ನೀಡಲು ಡಿಸಿಜಿಐ ಅನುಮತಿ