ಮೈಸೂರಿನಲ್ಲಿ ಮಹಿಷ ದಸರಾ ನಡೆಸಲು ತೀರ್ಮಾನ: ಸರ್ಕಾರದ ವಿರುದ್ಧ ಪ್ರತಾಪ್​ ಸಿಂಹ ಕೆಂಡಾಮಂಡಲ

‘ನಿಮಗೆ ಮಹಿಷಾಸುರನ ಮೇಲೆ ಭಕ್ತಿ ಇದ್ದರೆ, ನಿಮ್ಮ ಮನೆಯಲ್ಲಿ ಪೋಟೋ ಇಟ್ಟುಕೊಂಡು ನಿನ್ನ ತರಾ ಮಗನನ್ನು ದಯಪಾಲಿಸು ಎಂದು ಪೂಜೆ ಮಾಡಿ. ಆದರೆ, ಚಾಮುಂಡಿ ಬೆಟ್ಟದಲ್ಲಿ ಇದು ಸರಿ ಅಲ್ಲ. ಒಂದು ವೇಳೆ ಜಿಲ್ಲಾಡಳಿತ ಅವಕಾಶ ಕೊಟ್ಟರೆ, ನಾವು ಹೋಗಿ ಅಸಹ್ಯವನ್ನು ತಡೆಯುತ್ತೇವೆ ಎಂದು ಸಂಸದ ಪ್ರತಾಪ್​ ಸಿಂಹ ಕೆಂಡಾಮಂಡಲವಾಗಿದ್ದಾರೆ.

ಮೈಸೂರಿನಲ್ಲಿ ಮಹಿಷ ದಸರಾ ನಡೆಸಲು ತೀರ್ಮಾನ: ಸರ್ಕಾರದ ವಿರುದ್ಧ ಪ್ರತಾಪ್​ ಸಿಂಹ ಕೆಂಡಾಮಂಡಲ
ಪ್ರತಾಪ್​ ಸಿಂಹ
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 08, 2023 | 2:51 PM

ಮೈಸೂರು, ಸೆ.08: ಮಹಿಷ ದಸರಾ ಆಚರಣಾ ಸಮಿತಿಯವರು ಅಕ್ಟೋಬರ್​ 13 ರಂದು ಚಾಮುಂಡಿ ಬೆಟ್ಟ(Chamundi Betta) ದಲ್ಲಿ ಮಹಿಷಾ ದಸರಾ (Mahisha Dasara) ಆಚರಣೆಗೆ ತೀರ್ಮಾನ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರತಾಪ್​ ಸಿಂಹ ಅವರು ‘ ಮಹಿಷಾ ದಸರಾ ಒಂದು ಅನಾಚಾರ ಅಸಹ್ಯ ಅಬದ್ದ. ಇದು ಸಿದ್ದರಾಮಯ್ಯ ಸಿಎಂ ಆದಾಗ ಆರಂಭವಾಗಿತ್ತು. ಬಳಿಕ ನಮ್ಮ ಸರ್ಕಾರ ಬಂದಾಗ ಇದನ್ನು ನಿಲ್ಲಿಸಿದ್ದೆವು. ಅನಾಚಾರ ಮಾಡಲು ಅವಕಾಶ ಕೊಡಬೇಡಿ ಎಂದು ಜಿಲ್ಲಾಡಳಿತ, ಸರ್ಕಾರ ಹಾಗೂ ಪೊಲೀಸರಿಗೆ ಪ್ರತಾಪ್ ಸಿಂಹ ಅವರು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನಿಮಗೆ ಮಹಿಷಾಸುರನ ಮೇಲೆ ಭಕ್ತಿ ಇದ್ದರೆ, ನಿಮ್ಮ ಮನೆಯಲ್ಲಿ ಪೋಟೋ ಇಟ್ಟುಕೊಂಡು ನಿನ್ನ ತರಾ ಮಗನನ್ನು ದಯಪಾಲಿಸು ಎಂದು ಪೂಜೆ ಮಾಡಿ. ಆದರೆ, ಚಾಮುಂಡಿ ಬೆಟ್ಟದಲ್ಲಿ ಇದು ಸರಿ ಅಲ್ಲ. ಒಂದು ವೇಳೆ ಜಿಲ್ಲಾಡಳಿತ ಅವಕಾಶ ಕೊಟ್ಟರೆ, ನಾವು ಹೋಗಿ ಅಸಹ್ಯವನ್ನು ತಡೆಯುತ್ತೇವೆ. ಕಾನೂನು ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ ನಾವು ಸಂಘರ್ಷಕ್ಕೂ ಸಿದ್ದರಾಗಿದ್ದೇವೆ ಎಂದರು.

ಇದನ್ನೂ ಓದಿ:ಪ್ರತಾಪ್ ಸಿಂಹನನ್ನು ಸೋಲಿಸಿ ಎಂದ ಸಿದ್ದರಾಮಯ್ಯ, ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಯಾರು ಅಂತ ಹೇಳಲಿ- ಸಂಸದ ಪ್ರತಾಪ್​

ಈ ಅಸಹ್ಯ ಮಾಡುವ ಮನೆಯಲ್ಲಿ ಹೆಂಡತಿಯರು ಚಾಮುಂಡಿ ಭಕ್ತರಾಗಿರುತ್ತಾರೆ. ಇವರು ರಾಜಕಾರಣದ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಮೈಸೂರಿಗರು ನಮ್ಮ ಹೋರಾಟಕ್ಕೆ‌ ಕೈ ಜೋಡಿಸಬೇಕು. ಆಷಾಢ ಮಾಸದಲ್ಲಿ ಲಕ್ಷಾಂತರ ಜನ ಬಂದು ಪೂಜೆ ಮಾಡುತ್ತಾರೆ. ನಮ್ಮ ತಾಯಿಗೆ ಅವಮಾನ ಆದರೆ ರೋಷ ಬರುತ್ತದೆ ಅಲ್ಲವಾ? ಅದೇ ರೀತಿ ಚಾಮುಂಡೇಶ್ವರಿ ನಮ್ಮ ತಾಯಿ, ಅವಳು ಬೇಕು ಬೇಡವನ್ನು ಕೊಟ್ಟಿದ್ದಾಳೆ. ಅವಳಿಗೆ ಅವಮಾನ ಆದರೆ ಯಾರು ಸಹಿಸಲ್ಲ. ಸಿದ್ದರಾಮಯ್ಯ ಬಂದ ಕೂಡಲೇ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಹೇಳಿಕೆಗೆ ಸಿಎಂ ಟ್ವೀಟ್​; ಸಂಸದ ಪ್ರತಾಪ್ ಸಿಂಹ ಕಿಡಿ

ಇನ್ನು ಇದೇ ವೇಳೆ ಪ್ರಧಾನಿ ಪ್ರಚೋದನಾಕಾರಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಟ್ವೀಟ್‌ ವಿಚಾರವಾಗಿ ‘ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಪ್ರಚೋದನಕಾರಿ ಅಲ್ವಾ? ಕಾಂಗ್ರೆಸ್ ನಾಯಕರ ಮನಸ್ಥಿತಿ ಮೊದಲಿನಿಂದಲೂ ಎಲ್ಲರಿಗೂ ಗೊತ್ತಿದೆ. ಜನರನ್ನು ಗ್ಯಾರಂಟಿ ಹೆಸರಲ್ಲಿ ಮರಳು ಮಾಡಿ ಅಧಿಕಾರಕ್ಕೆ ಬಂದವರು. ಕಾಂಗ್ರೆಸ್​ ನಾಯಕರಲ್ಲಿ ಸನಾತನ ವಿರೋಧಿ ಮನಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Fri, 8 September 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?