ಮುಡಾ ಪ್ರಕರಣ: ಸಿಎಂ‌ ಪತ್ನಿ ಕೇಳಿದ್ದು 13 ಸೈಟ್, ಕೊಟ್ಟಿ‌ದ್ದು 14 ಸೈಟ್! ಅರ್ಜಿಗೆ ಪಾರ್ವತಿ ಬದಲಿಗೆ ಆಪ್ತ ಸಹಾಯಕನ ಸಹಿ

ಮೈಸೂರು ಅಭಿವೃದ್ಧಿ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ನಿತ್ಯ ಒಂದೊಂದೇ ಅಕ್ರಮ ಹೊರಗೆ ಬರುತ್ತಿದೆ. ಇದೀಗ ನಿವೇಶನ ಖಾತೆ ಮಾಡಿಸಿಕೊಡುವುದಾಗಿ ಬರೆದ ಪತ್ರ ಬಹಿರಂಗಗೊಂಡಿದೆ. ಪತ್ರದಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ಬದಲಾಗಿ ಬೇರಯವರದ್ದೇ ಸಹಿ ಇದೆ.

ಮುಡಾ ಪ್ರಕರಣ: ಸಿಎಂ‌ ಪತ್ನಿ ಕೇಳಿದ್ದು 13 ಸೈಟ್, ಕೊಟ್ಟಿ‌ದ್ದು 14 ಸೈಟ್! ಅರ್ಜಿಗೆ ಪಾರ್ವತಿ ಬದಲಿಗೆ ಆಪ್ತ ಸಹಾಯಕನ ಸಹಿ
ಮುಡಾ
Follow us
ದಿಲೀಪ್​, ಚೌಡಹಳ್ಳಿ
| Updated By: ವಿವೇಕ ಬಿರಾದಾರ

Updated on:Sep 13, 2024 | 9:54 AM

ಮೈಸೂರು, ಸೆಪ್ಟೆಂಬರ್​ 13: ಮೈಸೂರು ಅಭಿವೃದ್ಧಿ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎನ್ನಲಾಗಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕೈವಾಡವಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಒಟ್ಟು 14 ನಿವೇಶನಗಳಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಮುಡಾದಿಂದ ಮಂಜೂರಾದ ವಿಜಯನಗರ 3ನೇ ಹಂತ ಸಿ, ಡಿ, ಇ ಮತ್ತು ಜಿ ಬ್ಲಾಕ್​ನಲ್ಲಿ ನಿವೇಶನ ಸಂಖ್ಯೆ 25, 331,332,213, 214, 215, 05 ಮತ್ತು ವಿಜಯನಗರ 4ನೇ ಹಂತ 2ನೇ ಫೇಸ್ ನಿವೇಶನ ಸಂಖ್ಯೆ 5108, 5085, 11189, 10855, 12065 ಮತ್ತು 12068 ಸಂಖ್ಯೆಯ ಒಟ್ಟು 13 ನಿವೇಶನಗಳ ಖಾತೆ ನೋಂದಣಿ ಕೋರಿ ಪಾರ್ವತಿ ಅವರು 2022 ಜನವರಿ 1 ರಂದು ಪತ್ರ ಬರೆದಿದ್ದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಇಂದು ನಿರ್ಣಾಯಕ ದಿನ: ಹೈಕೋರ್ಟ್‌ನಲ್ಲಿ ಮುಡಾ ಕೇಸ್‌ ವಿಚಾರಣೆ, ಅಂತಿಮ ವಾದ

ಈ ಪತ್ರಕ್ಕೆ ಪಾರ್ವತಿ ಅವರ ಬದಲಿಗೆ ಮುಖ್ಯಮಂತ್ರಿಗಳು ಖಾಸಗಿ ಆಪ್ತ ಸಹಾಯಕ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಸಹಿ ಹಾಕಿದ್ದಾರೆ. ಅರ್ಜಿದಾರ ಹೊರತುಪಡಿಸಿ ಉಳಿದವರಿಗೆ ಸಹಿ ಮಾಡಲು ಅವಕಾಶವಿಲ್ಲ. ಇದು ಗೊತ್ತಿದ್ದೂ ಅಧಿಕಾರಿಗಳು ನಿವೇಶನ ಖಾತೆ ಮಾಡಿದ್ದಾರೆ. ಕೇಳಿದ್ದು ಮಂಜೂರಾಗಿದ್ದ 13 ನಿವೇಶನ, ಆದರೆ 14 ನಿವೇಶನ ಖಾತೆ ಮಾಡಿಕೊಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Fri, 13 September 24

ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್