ಮೈಸೂರು ದಸರಾ 2023: ಸೆ.5 ರಂದು ಅಭಿಜಿತ್ ಲಗ್ನದಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ
ಮಂಗಳವಾರ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12.01ರಿಂದ 12.51ರ ಅಭಿಜಿತ್ ಲಗ್ನದಲ್ಲಿ ಆನೆಗಳಿಗೆ ಪೂಜೆ ಮಾಡುವ ಮೂಲಕ ಗಜಪಡೆಯನ್ನು ಸ್ವಾಗತ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ಗಜಪಡೆಯನ್ನು ಬರಮಾಡಿಕೊಳ್ಳುತ್ತಾರೆ. ಗಜಪಡೆ ನಾಳೆಯಿಂದ ಅರಮನೆಯಲ್ಲಿ ಬೀಡು ಬಿಡಲಿವೆ.
ಮೈಸೂರು ಸೆ.02 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 (Mysore Dasara 2023) ಅರಮನೆ ನಗರಿ ಸಜ್ಜಾಗುತ್ತಿದೆ. ಅಂಬಾರಿಯನ್ನು ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ ಪ್ರತಿ ಬಾರಿಯಂತೆ ಈ ಬಾರಿಯೂ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ. ಈ ಆನೆಗಳ ಸ್ವಾಗತ ಕಾರ್ಯಕ್ರಮ ಕಾರಣಾಂತರಗಳಿಂದ ನಾಳೆ (ಸೆ.05)ಕ್ಕೆ ಮುಂದೂಡಲಾಗಿದೆ. ಮಂಗಳವಾರ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12.01ರಿಂದ 12.51ರ ಅಭಿಜಿತ್ ಲಗ್ನದಲ್ಲಿ ಆನೆಗಳಿಗೆ ಪೂಜೆ ಮಾಡುವ ಮೂಲಕ ಗಜಪಡೆಯನ್ನು ಸ್ವಾಗತ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ಗಜಪಡೆಯನ್ನು ಬರಮಾಡಿಕೊಳ್ಳುತ್ತಾರೆ. ಗಜಪಡೆ ನಾಳೆಯಿಂದ ಅರಮನೆಯಲ್ಲಿ ಬೀಡು ಬಿಡಲಿವೆ.
ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳ ವಿವರ
- ಕ್ಯಾಪ್ಟನ್ ಅಭಿಮನ್ಯು 57ವರ್ಷ, ಮತ್ತಿಗೋಡು ಆನೆ ಶಿಬಿರ, 274ಮೀ ಎತ್ತರ, 4700ರಿಂದ 5000 ಕೆ.ಜಿ.
- ವಿಜಯ 63 ವರ್ಷ, ದುಬಾರೆ ಆನೆ ಶಿಬಿರ, 244ಮೀ ಎತ್ತರ, 3250 ರಿಂದ 3500 ಕೆ.ಜಿ.
- ವರಲಕ್ಷ್ಮಿ 67 ವರ್ಷ, ಭೀಮನಕಟ್ಟೆ ಆನೆ ಶಿಬಿರ, 236ಮೀ ಎತ್ತರ, 3300ರಿಂದ 3500 ಕೆ.ಜಿ.
- ಅರ್ಜುನ 65 ವರ್ಷ, ಬಳ್ಳೆ ಆನೆ ಶಿಬಿರ, 288ಮೀ ಎತ್ತರ, 5800 ರಿಂದ 6000 ಕೆ.ಜಿ.
- ಧನಂಜಯ 43 ವರ್ಷ, ದುಬಾರೆ ಆನೆ ಶಿಬಿರ, 280ಮೀ ಎತ್ತರ, 4000 ರಿಂದ 4200 ಕೆ.ಜಿ.
- ಮಹೇಂದ್ರ 40 ವರ್ಷ, ಮತ್ತಿಗೋಡು ಆನೆ ಶಿಬಿರ, 275ಮೀ ಎತ್ತರ, 3800ರಿಂದ 4000 ಕೆ.ಜಿ.
- ಭೀಮ 23ವರ್ಷ, ಮತ್ತಿಗೋಡು ಆನೆ ಶಿಬಿರ, 285ಮೀ ಎತ್ತರ, 3800 ರಿಂದ 4000 ಕೆ.ಜಿ
- ಗೋಪಿ 41ವರ್ಷ, ದುಬಾರೆ ಆನೆ ಶಿಬಿರ 286ಮೀ ಎತ್ತರ, 3700 ರಿಂದ 3800 ಕೆ.ಜಿ.
- ಪ್ರಶಾಂತ್ 50 ವರ್ಷ, ದುಬಾರೆ ಆನೆ ಶಿಬಿರ 300 ಮೀ ಎತ್ತರ, 4000 ರಿಂದ 4200 ಕೆ.ಜಿ.
- ಸುಗ್ರೀವ 41 ವರ್ಷ, ದುಬಾರೆ ಆನೆ ಶಿಬಿರ, 277ಮೀ ಎತ್ತರ, 4000 ರಿಂದ 4100 ಕೆ.ಜಿ.
- ಕಂಜನ್ 24 ವರ್ಷ, ದುಬಾರೆ ಆನೆ ಶಿಬಿರ, 262ಮೀ ಎತ್ತರ, 3700 ರಿಂದ 3900 ಕೆ.ಜಿ.
- ರೋಹಿತ್ 21 ವರ್ಷ, ರಾಮಾಪುರ ಆನೆ ಶಿಬಿರ, 270ಮೀ ಎತ್ತರ, 2900 ರಿಂದ 3000 ಕೆ.ಜಿ.
- ಲಕ್ಷ್ಮಿ 52ವರ್ಷ, ದೊಡ್ಡಹರವೆ ಆನೆ ಶಿಬಿರ, 252ಮೀ ಎತ್ತರ, 3000 ರಿಂದ 3200 ಕೆ.ಜಿ.
- ಹಿರಣ್ಯ 46 ವರ್ಷ, ರಾಮಾಪುರ ಆನೆ ಶಿಬಿರ, 250ಮೀ ಎತ್ತರ, 3000 ರಿಂದ 3200 ಕೆ.ಜಿ
ಇದನ್ನೂ ಓದಿ: Dasara Gajapayan 2023: ಮೈಸೂರು ದಸರಾ ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣಕ್ಕೆ ಸಿದ್ಧತೆ ಜೋರಾಗಿದೆ ನೋಡಿ
ಅರ್ಜುನ ಆನೆ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ್ಯ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. ಕಂಜನ್, ಲಕ್ಷ್ಮಿ, ಹಿರಣ್ಯ ಆನೆಗಳಿಗೂ ಇದು ಮೊದಲ ದಸರಾ ಮಹೋತ್ಸವವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Mon, 4 September 23