ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಕುಸಿತ, ಓರ್ವ ಸಾವು

ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡದ ಅವಶೇಷಗಳಡಿ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಪುನರ್ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಮೈಸೂರಿನ ಹಳೆಯ ಕಟ್ಟಡಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಪ್ರಕರಣ ದಾಖಲಿಸಲಾಗಿದೆ. ಈ ದುರ್ಘಟನೆಯಿಂದಾಗಿ ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ.

ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಕುಸಿತ, ಓರ್ವ ಸಾವು
ಮಹರಾಣಿ ಕಾಲೇಜು
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 29, 2025 | 8:04 AM

ಮೈಸೂರು, ಜನವರಿ 29: ಮೈಸೂರಿನ ಮಹಾರಾಣಿ ಕಾಲೇಜು (Mysore Maharani College) ಕಟ್ಟಡ ಕುಸಿತ (Building Collapse) ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿ ಸಿಲುಕಿದ್ದ ಓರ್ವ ಯುವಕ ಮೃತಪಟ್ಟಿದ್ದಾನೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಯುವಕ. ಅಗ್ನಿಶಾಮಕದಳ ಸಿಬ್ಬಂದಿ‌ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರೆದಿದೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ

ಮೈಸೂರಿನ ಹೃದಯ ಭಾಗ, ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಕಟ್ಟಡಕ್ಕೆ ನೂರು ವರ್ಷದ ಇತಿಹಾಸವಿದೆ. ಮೂರು ವರ್ಷಗಳ ಹಿಂದೆ ಇದೆ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿರಲಿಲ್ಲ. ನಂತರ ಜಾಗವನ್ನು ಖಾಲಿ ಮಾಡಲಾಗಿತ್ತು. ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರಲಿಲ್ಲ. ಇತ್ತೀಚಿಗೆ ಸರ್ಕಾರ ಆ ಕಟ್ಟಡ ಪುನರ್ ನಿರ್ಮಾಣಕ್ಕೆ ಅನುದಾನ ಸಹ ನೀಡಿತ್ತು. ಕಿಟಕಿ ಸರಳು ಸೇರಿದಂತೆ ಹಲವು ವಸ್ತುಗಳನ್ನು ಅಲ್ಲಿಂದ ತೆರವುಗೊಳಿಸಲು ಗುತ್ತಿಗೆ ನೀಡಲಾಗಿತ್ತು. ಅದರಂತೆ ಸದ್ದಾಂ ಸರಿ 14 ಜನ ಕಟ್ಟಡದಲ್ಲಿದ್ದ ಕಿಟಕಿ ಸೇರಿದಂತೆ ವಿವಿಧ ಉಪಕರಣಗಳನ್ನು ತೆಗೆಯುವ ಕೆಲಸ ಮಾಡುತ್ತಿದ್ದರು. ಈ ವೇಳ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಪಿರಿಯಾಪಟ್ಟಣ ಬಳಿ ಹೃದಯಾಘಾತದಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಸಾವು

ಗೋಡೆ ಕುಸಿಯುತ್ತಿದ್ದಂತೆ ಅಲ್ಲಿದ್ದ 13 ಜನರು ಸಹ ಆಚೆ ಬಂದಿದ್ದಾರೆ. ಆದರೆ ಸದ್ದಾಂ ಮಾತ್ರ ಹೊರಗೆ ಬರಲು ಸಾಧ್ಯವಾಗಿಲ್ಲ. ಆತ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದನು. ಸದ್ದಾಂ ಕಟ್ಟಡದ ಅವಶೇಷಗಳ ಕೆಳಗೆ ಸಿಲುಕಿರುವುದನ್ನು ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕಗಳ ಸಿಬ್ಬಂದಿ ಪೊಲೀಸರು ಕಾರ್ಯಾಚರಣೆ ಆರಂಭಿಸಿ ನಡೆಸಿದರು. ಬುಧವಾರ ಮುಂಜಾನೆ ಸದ್ದಾಂ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರಯ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮ ಲಟ್ಕರ್ ಸೇರಿದಂತೆ ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.

ಇಂತಹ ಹಲವು ಕಟ್ಟಡಗಳು ಸಾಂಸ್ಕೃತಿಕ ಮೈಸೂರಿನಲ್ಲಿದ್ದು ಅಪಾಯಕ್ಕೆ ಸ್ವಾಗತ ನೀಡುತ್ತಿವೆ. ಇವೆಲ್ಲವನ್ನೂ ಜಿಲ್ಲಾಡಳಿತ ಗುರುತಿಸಿ ಆದಷ್ಟು ಬೇಗ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಸೂಕ್ತ ಎಂಬುವುದು ಜನರ ಅಭಿಪ್ರಾಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಖಾಸುಮ್ಮನೆ ಮನೇಲಿ ಕೂರುವ ಸಂಸದರು ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ!
ಸುಖಾಸುಮ್ಮನೆ ಮನೇಲಿ ಕೂರುವ ಸಂಸದರು ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ!
ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತಿಯಲ್ಲಿ ನಡೆದ ಅಯ್ಕೆ
ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತಿಯಲ್ಲಿ ನಡೆದ ಅಯ್ಕೆ
HTT 40 ಟ್ರೈನಿ ಏರ್ ಕ್ರಾಫ್ಟ್​ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
HTT 40 ಟ್ರೈನಿ ಏರ್ ಕ್ರಾಫ್ಟ್​ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ
ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿದ ಬೆಂಕಿ ಪಕ್ಕದ ಕಟ್ಟಡಕ್ಕೆ ಪಸರಿಸಿದೆ
ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿದ ಬೆಂಕಿ ಪಕ್ಕದ ಕಟ್ಟಡಕ್ಕೆ ಪಸರಿಸಿದೆ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ