Mysuru News: ತನ್ನ ಲವರ್​ಗೆ ಮೆಸೇಜ್ ಮಾಡಿದ ರೂಮ್ ಮೇಟ್​ಗೆ ಚಾಕುವಿನಿಂದ ಇರಿದ ಸ್ನೇಹಿತ

ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರೂ ಜನತಾನಗರದಲ್ಲಿ ಒಂದೇ ರೂಮಿನಲ್ಲಿ ಬಾಡಿಗೆಗೆ ಇದ್ದರು. ಇಬ್ಬರಲ್ಲೂ ಒಳ್ಳೆಯ ಸ್ನೇಹವಿತ್ತು. ಆದ್ರೆ ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡಿದ್ದ.

Mysuru News: ತನ್ನ ಲವರ್​ಗೆ ಮೆಸೇಜ್ ಮಾಡಿದ ರೂಮ್ ಮೇಟ್​ಗೆ ಚಾಕುವಿನಿಂದ ಇರಿದ ಸ್ನೇಹಿತ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Jun 01, 2023 | 7:37 AM

ಮೈಸೂರು: ತಾನು ಪ್ರೀತಿಸಿದ(Lover) ಯುವತಿಗೆ ತನ್ನ ರೂಮ್ ಮೇಟ್ ಯುವಕ ಮೆಸೇಜ್(Message) ಮಾಡಿದನೆಂದು ಚಾಕು ಇರಿದ(Stab) ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಕುಮಾರ್‌ ಎಂಬ ಯುವಕನಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ನೇಹಿತ ಶ್ರೇಯಸ್, ಚಾಕು ಇರಿದ ಆರೋಪಿ.

ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರೂ ಜನತಾನಗರದಲ್ಲಿ ಒಂದೇ ರೂಮಿನಲ್ಲಿ ಬಾಡಿಗೆಗೆ ಇದ್ದರು. ಇಬ್ಬರಲ್ಲೂ ಒಳ್ಳೆಯ ಸ್ನೇಹವಿತ್ತು. ಆದ್ರೆ ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡಿದ್ದ. ತನ್ನ ಸ್ನೇಹಿತನ ಪ್ರೇಮಿಯ ಜೊತೆಯೇ ಶಿವಕುಮಾರ್ ಸಂಪರ್ಕ ಬೆಳೆಸಿದ್ದ. ಆಕೆಯ ಜೊತೆ ಚಾಟ್ ಮಾಡುತ್ತಿದ್ದ. ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ಜಗಳವಾಗಿದೆ. ತನ್ನ ಲವರ್‌ಗೆ ಮೆಸೇಜ್ ಮಾಡದಂತೆ ಶ್ರೇಯಸ್ ಎಚ್ಚರಿಕೆ ನೀಡಿದ್ದ. ಆದರೂ ಶಿವಕುಮಾರ್ ಆಗಾಗ ಯುವತಿಗೆ ಮೆಸೇಜ್ ಮಾಡುತ್ತಿದ್ದ. ಈ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಶಿವಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಾತಿನಿಂದನೆ ಪ್ರಕರಣ: ಬಿಜೆಪಿ ಶಾಸಕ ಬಿಪಿ ಹರೀಶ್​ಗೆ ನಿರೀಕ್ಷಣಾ ಜಾಮೀನು ಮಂಜೂರು

ಮೈಸೂರಿನಲ್ಲಿ ಅಪಘಾತ

ಬೈಕ್‌ ಮತ್ತು ಟಾಟಾ ಏಸ್ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಗಾಯಗಳಾಗಿವೆ. ಹುಣಸೂರು ಕೆ.ಆರ್.ನಗರ ರಸ್ತೆಯ ತಾಲೂಕಿನ ಬಿಳಿಗೆರೆ ಬಳಿ ಅಪಘಾತ ಸಂಭವಿಸಿದೆ. ರಹಮತ್ ಮೊಹಲ್ಲಾ ನಿವಾಸಿ ಸುಹೇಬ್ (24) ಅಪಘಾತದಲ್ಲಿ ಮೃತಪಟ್ಟ ಯುವಕ. ಹಿಂಬದಿ ಸವಾರ ಜುನೇದ್‌ಗೆ ಗಾಯಗಳಾಗಿದ್ದು ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ