AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ: ದರ ಪಟ್ಟಿ ಇಲ್ಲಿದೆ

Mysuru Palace Entry Fee Hiked: ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರವೇಶಕ್ಕೂ ಇದೀಗ ಜಿಎಸ್​ಟಿ ಕಟ್ಟಬೇಕಿದೆ. ಹೌದು.... ಜಿಎಸ್​​ಟಿ ಸೇರಿಸಿ ಮೈಸೂರು ಅರಮನೆ ಪ್ರವೇಶ ಟಿಕೆಟ್​ ದರ ಹೆಚ್ಚಳ ಮಾಡಲಾಗಿದೆ. ವಿದೇಶಿ ಪ್ರವಾಸಿಗರು, ಭಾರತೀಯ ವಯಸ್ಕರಿಗೆ, ಮಕ್ಕಳಿಗೆ( 10-18 ವರ್ಷದೊಳಗಿನ) ಮತ್ತು ಪ್ರವಾಸ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ. ಇನ್ನು ಮೈಸೂರು ಅರಮನೆ ಮಂಡಳಿ ಬಿಡುಗಡೆ ಮಾಡಿರುವ ಪರಿಷ್ಕೃತ ದರ ಪಟ್ಟಿ ಈ ಕೆಳಗಿನಂತಿದೆ.

ನಾಳೆಯಿಂದ ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ: ದರ ಪಟ್ಟಿ ಇಲ್ಲಿದೆ
ಮೈಸೂರು ಅರಮನೆ
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on: Oct 24, 2024 | 9:12 PM

Share

ಮೈಸೂರು, (ಅಕ್ಟೋಬರ್ 24): ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ ಮಾಡಲಾಗಿದೆ. ಟಿಕೆಟ್​ ದರದ ಮೇಲೆ ಜಿಎಸ್​ಟಿ ಸೇರಿಸಿ ಹೆಚ್ಚಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಬರೋಬ್ಬರಿ 900 ರೂ. ಹೆಚ್ಚಳ ಮಾಡಿದ್ದರೆ, ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂಪಾಯಿ ಏರಿಕೆ ಮಾಡಲಾಗಿದೆ. ನಾಳೆಯಿಂದಲೇ(ಅಕ್ಟೋಬರ್ 25) ಪರಿಷ್ಕೃತ ದರ ಜಾರಿಗೆ ಬರಲಿದೆ. ಇನ್ನು ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕವನ್ನ ರದ್ದುಪಡಿಸಲಾಗಿದೆ. ಈಚೆಗೆ ನಡೆದ ಅರಮನೆ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರವೇಶ ಶುಲ್ಕ ಯಾರಿಗೆ ಎಷ್ಟು?

ಈ ಹಿಂದೆ ವಿದೇಶಿಯರಿಗೆ 100 ರೂ. ಪ್ರವೇಶ ಶುಲ್ಕವಿತ್ತು. ಈಗ ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ 900 ರೂ. ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ವಿದೇಶಿ ಪ್ರವಾಸಿಗರಿಗೆ ಪ್ರವೇಶ ದರ ಒಟ್ಟು 1,000 ರೂ. ನಿಗದಿ ಮಾಡಲಾಗಿದೆ. ಇನ್ನು ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂಪಾಯಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Hasanamba Darshan: ಹಾಸನಾಂಬ ದೇಗುಲದ ಗರ್ಭಗುಡಿ ಓಪನ್, ಆನ್​ಲೈನ್​ ಟಿಕೆಟ್​ ಬುಕಿಂಗ್​ ಮತ್ತು ಇನ್ನಿತರ ಸೇವೆ ವಿವರ ಇಲ್ಲಿದೆ

10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂಪಾಯಿ ಪ್ರವೇಶ ಶುಲ್ಕ ಫಿಕ್ಸ್ ಮಾಡಿದ್ದರೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ. ನಿಗದಿಪಡಿಸಿದೆ. ಇನ್ನು ಅರಮನೆ ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕವನ್ನ ರದ್ದುಪಡಿಸಲಾಗಿದ್ದು, ಉಚಿತ ಸೇವೆ ನೀಡಲು ಅರಮನೆ ಮಂಡಳಿ ತೀರ್ಮಾನ ಕೈಗೊಂಡಿದೆ.

ಈ ಮೊದಲು ವಯಸ್ಕರಿಗೆ ಪ್ರವೇಶ ಶುಲ್ಕ 100 ರೂ., 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 50 ರೂ., ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ಮಕ್ಕಳಿಗೆ 30 ರೂ., ವಿದೇಶಿ ಪ್ರವಾಸಿಗರಿಗೆ 100 ರೂ. ಇತ್ತು. ಇದಕ್ಕೆ ಇದೀಗ ಶೇ.18ರಷ್ಟು ಜಿಎಸ್​​ಟಿ ಸೇರಿಸಲಾಗಿದೆ. ಈವರೆಗೆ ಅರಮನೆ ಆಡಳಿತ ಮಂಡಳಿ ಜಿಎಸ್​​ಟಿ ಕಟ್ಟುತ್ತಿತ್ತು. ಈಗ ಶುಲ್ಕದಲ್ಲೇ ಪಡೆಯಲು ನಿರ್ಧರಿಸಿದೆ.

ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪುನರಾರಂಭ

ನಾಡಹಬ್ಬ ದಸರಾ-2024ರ ಸಂಬಂಧ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ, ಮೈಸೂರು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಇಂದಿನಿಂದ (ಅ.24) ಪುನರಾರಂಭವಾಗಿದೆ ಎಂದು ಸಹ ಉಪ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ