ಪಿರಿಯಾಪಟ್ಟಣದಲ್ಲಿ ಮಾ.3 ರಿಂದ ಟಿಬೆಟಿಯನ್ ನ್ಯೂ ಇಯರ್ ಸಂಭ್ರಮ; ಏನಿದು ಹಬ್ಬ? ಏನು ವಿಶೇಷತೆ?

ಪಿರಿಯಾಪಟ್ಟಣದಲ್ಲಿ ಮಾ.3 ರಿಂದ ಟಿಬೆಟಿಯನ್ ನ್ಯೂ ಇಯರ್ ಸಂಭ್ರಮ; ಏನಿದು ಹಬ್ಬ? ಏನು ವಿಶೇಷತೆ?
ಟಿಬೆಟಿಯನ್ ನ್ಯೂ ಇಯರ್ ಸಂಭ್ರಮ

ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಸಾಕಷ್ಟು ಜನ ಟಿಬೆಟಿಯನ್‌ರು ಇದ್ದಾರೆ. ಅವರೆಲ್ಲರೂ ಬಹುತೇಕ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ. ನಮ್ಮ ಕೆಲ ಸಂಸ್ಕೃತಿ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇದರ ಜೊತೆಗೆ ತಮ್ಮ ಪರಂಪರೆ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

TV9kannada Web Team

| Edited By: ganapathi bhat

Mar 02, 2022 | 4:00 PM

ಮೈಸೂರು: ವೈವಿಧ್ಯತೆಯಲ್ಲಿ ಏಕತೆಗೆ ಮತ್ತೊಂದು ಹೆಸರು ನಮ್ಮ ಭಾರತ. ಇಲ್ಲಿನ ಪರಂಪರೆ ಸಂಸ್ಕೃತಿ ಆಚರಣೆ ನಿಜಕ್ಕೂ ಭಿನ್ನ. ಬೇರೆ ಬೇರೆ ಸಮುದಾಯದ ಧರ್ಮದ ಆಚರಣೆಗಳು ಎಲ್ಲರ ಗಮನಸೆಳೆದಿವೆ. ಅದೇ ಮಾದರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಟಿಬೆಟಿಯನ್‌ರ ಸಾಂಪ್ರದಾಯಿಕ ಹಬ್ಬ ಜನ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೊಸ ವರ್ಷದ ದಿನಾಂಕ ಅವರವರ ಸಂಪ್ರದಾಯ ಆಚರಣೆಗೆ ಅನುಗುಣವಾಗಿ ಬದಲಾಗುತ್ತದೆ. ಜನವರಿ ಒಂದನ್ನು ಜಗತ್ತಿನ ಅನೇಕ ಭಾಗದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಾಗಿ ಆಚರಿಸಲಾಗುತ್ತದೆ. ಆದರೆ ಸನಾತನ ಹಿಂದೂ ಧರ್ಮದ ಪ್ರಕಾರ ಜನವರಿ 1 ಕ್ಯಾಲೆಂಡರ್ ಬದಲಾವಣೆಯ ದಿನ. ಯುಗಾದಿ ನಮಗೆ ಹೊಸ ವರ್ಷದ ಆರಂಭ. ಅದೇ ರೀತಿ ಟಿಬೆಟಿಯನ್‌ರ ಹೊಸ ವರ್ಷ ಆರಂಭವಾಗುವುದು ಮಾರ್ಚ್​ನಲ್ಲಿ ಅದುವೇ ಲೋಸರ್ ಹಬ್ಬ.

ಪಿರಿಯಾಪಟ್ಟಣದಲ್ಲಿ ಟಿಬೆಟಿಯನ್ ನ್ಯೂ ಇಯರ್

ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಸಾಕಷ್ಟು ಜನ ಟಿಬೆಟಿಯನ್‌ರು ಇದ್ದಾರೆ. ಅವರೆಲ್ಲರೂ ಬಹುತೇಕ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ. ನಮ್ಮ ಕೆಲ ಸಂಸ್ಕೃತಿ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇದರ ಜೊತೆಗೆ ತಮ್ಮ ಪರಂಪರೆ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಪಿರಿಯಾಪಟ್ಟಣದಲ್ಲಿ ಟಿಬೆಟಿಯನ್ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. 15 ದಿನಗಳ ಕಾಲ ಟಿಬೆಟಿಯನ್ ಹೊಸ ವರ್ಷದ ಸಂಭ್ರಮ ಸಡಗರ ಜೋರಾಗಿಯೇ ನಡೆಯುತ್ತದೆ. ಈ ಬಾರಿ ಮಾರ್ಚ್ 3ಕ್ಕೆ ಈ ಟಿಬೆಟಿಯನ್ ಹೊಸ ವರ್ಷ ಆರಂಭವಾಗುತ್ತಿದೆ. ಹೊಸ ವರ್ಷದ ಆಚರಣೆಗೆ ಪಿರಿಯಾಪಟ್ಟಣದಲ್ಲಿ ಸಿದ್ದತೆ ಭರ್ಜರಿಯಾಗಿ ನಡೆದಿದೆ.

Tibetian New Year

ಟಿಬೆಟಿಯನ್ ಹೊಸ ವರ್ಷಾಚರಣೆಯ ಸಂಭ್ರಮ

ಹೊಸ ವರ್ಷಕ್ಕೂ ಮುನ್ನ ಗೂತುರ್

ಟಿಬೆಟಿಯನ್‌ರು ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಗೂತೂರ್ ಹೆಸರಿನ ಆಚರಣೆಯನ್ನು ಆಚರಿಸುವ ಸಂಪ್ರದಾಯವಿದೆ. ಗೂತೂರ್ ಆಚರಣೆಯ ಮೂಲಕ ದುಷ್ಟ ಶಕ್ತಿಗಳನ್ನು ನಿಗ್ರಹಿಸಲಾಗುತ್ತದೆ. ಈ ಆಚರಣೆ ನಡೆಸಲಾಗಿದ್ದು ಇದಕ್ಕಾಗಿ ಬೌದ್ದ ಸನ್ಯಾಸಿಗಳಿಂದ ದಿನವಿಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಟಿಬೆಟಿಯನ್‌ರು ಹುಲಿ ಮುಖವಾಡ ಸೇರಿ ಹಲವು ವೇಷಗಳನ್ನು ಧರಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಈ ಆಚರಣೆಯಲ್ಲಿ ಲಡಾಕ್ ಬಿಜೆಪಿ ಎಂ.ಪಿ ಜೆ ಟಿ ನ್ಯಾಮಗಲ್ ಭಾಗಿಯಾಗಿದ್ದು ವಿಶೇಷ. ಸಾವಿರಾರು ಟಿಬೆಟಿಯನ್‌ರು ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.

ಕೊರೊನಾ ಹಿನ್ನೆಲೆ ಎರಡು ವರ್ಷ ಸ್ಥಗಿತವಾಗಿದ್ದ ಹಬ್ಬ

ಪ್ರತಿ ವರ್ಷದ ವಿಶೇಷ ಆಚರಣೆಗೆ ಕಳೆದ ಎರಡು ವರ್ಷಗಳಿಂದ ಬ್ರೇಕ್ ಬಿದ್ದಿತ್ತು. ಕೊರೊನಾ ಮಹಾಮಾರಿಯ ಭೀತಿಯಿಂದಾಗಿ ಸರ್ಕಾರ ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಬ್ರೇಕ್ ಹಾಕಿತ್ತು. ಕೆಲವು ಆಚರಣೆಗಳಿಗೆ ಮಾತ್ರ ನಿಯಮಬದ್ದವಾಗಿ ಸರಳವಾಗಿ ಆಚರಿಸಲು ಸೂಚಿಸಿತ್ತು. ಆದರೂ ಟಿಬೆಟಿಯನ್‌ರ ಕಳೆದ ಎರಡು ವರ್ಷಗಳಿಂದ ಆಚರಣೆಗೆ ಬ್ರೇಕ್ ಹಾಕಿದ್ದರು. ಸ್ವಯಂಪ್ರೇರಿತವಾಗಿ ಹೊಸ ವರ್ಷದ ಆಚರಣೆಯನ್ನು ಕೈ ಬಿಟ್ಟಿದ್ದರು. ಹೊಸ ವರ್ಷದ ಆಚರಣೆಯ ಹಣವನ್ನು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಪಿರಿಯಾಪಟ್ಟದ ಜನರಿಗೆ ಕಿಟ್ ವಿತರಿಸಲು ಬಳಸಿ ಮಾನವೀಯತೆ ಮೆರೆದಿದ್ದರು. ಇದೀಗ ಕೊರೊನಾ ಸಂಕಷ್ಟ ಕಾಲ ದೂರವಾದ ಕಾರಣ ಅದ್ದೂರಿಯಾಗಿ ಟಿಬೆಟಿಯನ್ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಈ ಸಡಗರ ಸಂಭ್ರಮ ಇದೇ ರೀತಿ ಇರಲಿ. ನಾಡಿನಲ್ಲಿ ಸುಖಃ ಸಮೃದ್ದಿ ಶಾಂತಿ ನೆಲೆಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ವರದಿ: ರಾಮ್ ಟಿವಿ9 ಮೈಸೂರು

Tibetian New Year

ಟಿಬೆಟಿಯನ್ ಹೊಸ ವರ್ಷಾಚರಣೆಯ ಸಂಭ್ರಮ

ಇದನ್ನೂ ಓದಿ: ಮೈಸೂರು: ಅರಮನೆಯ ತ್ರಿನೇಶ್ವರ ದೇವರಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ; ಇದರ ಹಿನ್ನೆಲೆ, ವಿಶೇಷತೆ ಏನು ಗೊತ್ತೇ?

ಇದನ್ನೂ ಓದಿ: ಮೈಸೂರು: ಜಿಂಕೆ ಮರಿ‌ ಬೇಟೆ ಆಡಿದ ಚಿರತೆ; ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ದೃಶ್ಯ ನೋಡಿ

Follow us on

Most Read Stories

Click on your DTH Provider to Add TV9 Kannada