ಮೈಸೂರಿನ ಉದಯಗಿರಿ ಗಲಭೆಯ ಸೂತ್ರಧಾರಿ ಮೌಲ್ವಿಗೆ ಜಾಮೀನು!

ಮೈಸೂರಿನ ಉದಯಗಿರಿ ಪೊಲೀಸ್​ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಕರ್ನಾಟಕದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು. ಈ ಕೃತ್ಯಕ್ಕೆ ಮೌಲ್ವಿ ಮೌಲ್ವಿ ಮುಷ್ತಾಕ್​​ ಪ್ರಚೋದನಕಾರಿ ಭಾಷಣ ಕಾರಣವೆಂದು ಆರೋಪಿಸಲಾಗಿತ್ತು. ಬಳಿಕ ಆತನನ್ನು ಬಂಧಿಸಲಾಗಿದೆ. ಇದೀಗ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಮೈಸೂರಿನ ಉದಯಗಿರಿ ಗಲಭೆಯ ಸೂತ್ರಧಾರಿ ಮೌಲ್ವಿಗೆ ಜಾಮೀನು!
ಮೌಲ್ವಿ ಮುಷ್ತಾಕ್​
Edited By:

Updated on: Apr 25, 2025 | 8:13 PM

ಮೈಸೂರು, ಏಪ್ರಿಲ್ 25: ವಿವಾದಿತ ಪೋಸ್ಟ್​ನಿಂದ ಉದಯಗಿರಿ (Udayagiri) ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪಿ ಮೌಲ್ವಿ ಮುಷ್ತಾಕ್​ಗೆ (Maulvi Mufti Mustaq) ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ, ಶುಕ್ರುವಾರ ಆದೇಶ ಹೊರಡಿಸಿದೆ. ಆರೋಪಿ ಮೌಲ್ವಿ ಮುಷ್ತಾಕ್, ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಮುಸ್ಲಿಂ ಯುವಕರು ಕಲ್ಲು ತೂರಲು ಪ್ರೇರೇಪಣೆ ಮಾಡಿದ್ದ ಆರೋಪ ಹೊತ್ತಿದ್ದ. ಘಟನೆ ಬಳಿಕ ಆರೋಪಿ ನಾಪತ್ತೆಯಾಗಿದ್ದ. 11 ದಿನಗಳ ಬಳಿಕ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು.

ಮೈಸೂರಿನ ಉದಯಗಿರಿ ಗಲಾಟೆ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಠಾಣೆ, ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ ದಾಂಧಲೆ ಮಾಡಲಾಗಿತ್ತು. ಮೈಸೂರು ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಗೊಂಡ 12 ಗಂಟೆಯಲ್ಲೇ 8 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಬಂಧಿತರೆಲ್ಲರೂ ಉದಯಗಿರಿ ಅಕ್ಕಪಕ್ಕದ ಬಡವಾಣೆಗಳ ನಿವಾಸಿಗಳಾಗಿದ್ದರು.

ಇದನ್ನೂ ಓದಿ: ಮೈಸೂರು: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ, ಗಲಭೆಗೆ ಪ್ರಚೋದನೆ ನೀಡಿದ ಮೌಲ್ವಿ ಮುಫ್ತಿ ಮುಸ್ತಾಕ್ ಬಂಧನ

ಇದನ್ನೂ ಓದಿ
ಉದಯಗಿರಿ ಗಲಭೆ: ಸತೀಶ್​ನನ್ನು ಗಡಿಪಾರು ಮಾಡದಂತೆ ಕೋರ್ಟ್ ಆದೇಶ
ಉದಯಗಿರಿ ಗಲಭೆ: ಮೈಸೂರು ಚಲೋಗೆ ಅನುಮತಿ ನಿರಾಕರಣೆ, ಕೋರ್ಟ್ ಮೊರೆ ಹೋದ bjp
ಉದಯಗಿರಿ ಗಲಭೆ: ಪೊಲೀಸರ ಸಾಹಸಮಯ ಕಾರ್ಯದ ವಿಡಿಯೋ ವೈರಲ್
ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಮಾಹಿತಿ

ಗಲಭೆ ವೇಳೆ ಮೌಲ್ವಿ ಮುಷ್ತಾಕ್ ಪ್ರಚೋದನೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ವಿಡೀಯೋದಲ್ಲಿ ಧರ್ಮಕ್ಕಾಗಿ ಬದುಕಿರುವ ಮುಸ್ಲಿಂರು ಇನ್ನು ಇದ್ದಾರೆ. ಧರ್ಮ ರಕ್ಷಣೆಯ ಬದ್ದತೆ ನಿನ್ನೆನೂ ಇತ್ತು, ಇವತ್ತು ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸುರೇಶ್ ಹೆಸರಿನ ಹರಾಮಿ ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಆತನನ್ನು ನೇಣಿಗೆ ಹಾಕಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಇನ್ನು ಬಂಧಿತರ ವಿರುದ್ಧ UAPA ಕಾಯ್ದೆಯಡಿ ಕೇಸ್ ದಾಖಲಿಸಬೇಕು ಮತ್ತು ಎನ್​​ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ವತಿಯಿಂದ ಮೈಸೂರು ಚಲೋ ಜನಾಂದೋಲನ ಮಾಡಲಾಗಿತ್ತು.

ಇದನ್ನೂ ಓದಿ: ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ

ಕಲ್ಲು ತೂರಾಟ ಖಂಡಿಸಿ ಬಿಜೆಪಿ ಜಾಗೃತಿ ಜಾಥಾ ಆಯೋಜಿಸಿತ್ತು. ಆರ್​ಎಸ್ಎಸ್ ಕೂಡ ಸಾಥ್ ನೀಡಲು ಮುಂದಾಗಿತ್ತು. ಆದರೆ ಈ 2 ಸಂಘಟನೆಗಳ ಕಾರ್ಯಕ್ರಮಕ್ಕೆ ಮೈಸೂರು ಪೊಲೀಸರು ಅನುಮತಿ ನಿರಾಕರಿಸಿತ್ತು. ಅಲ್ಲದೇ ಮಧ್ಯರಾತ್ರಿಯಿಂದ ಮೈಸೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದರು. ರ್ಯಾಲಿಯಿಂದ ಕೋಮು ಸೌಹಾರ್ದತೆಗೆ ಧಕ್ಕೆ ಸಾಧ್ಯತೆ ಇದೆ ಎಂದು ಪೊಲೀಸರು ಅನುಮತಿ ನೀಡಿರಲಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.