ಮೈಸೂರು: ನಗರಸಭೆ ಕಚೇರಿಯಲ್ಲಿ ವಿದ್ಯುತ್ ಕಡಿತ; ಜನರ ಕೆಲಸ ಕಾರ್ಯಗಳು ಸ್ಥಗಿತ

ಮೈಸೂರು: ನಗರಸಭೆ ಕಚೇರಿಯಲ್ಲಿ ವಿದ್ಯುತ್ ಕಡಿತ; ಜನರ ಕೆಲಸ ಕಾರ್ಯಗಳು ಸ್ಥಗಿತ
ನಗರಸಭೆ ಕಚೇರಿ

ಒಟ್ಟು 31 ವಾರ್ಡ್‌ಗಳನ್ನು ಒಳಗೊಂಡ ನಗರಸಭೆಯಲ್ಲಿ ತಮ್ಮ ತಮ್ಮ ಕೆಲಸಕ್ಕಾಗಿ ಸಾರ್ವಜನಿಕರು ಕಾದು ನಿಂತಿದ್ದಾರೆ. ರಾಜ್ಯ, ಕೇಂದ್ರದಿಂದ ಸಾಕಷ್ಟು ಅನುದಾನ ಬಂದರೂ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: preethi shettigar

Nov 16, 2021 | 12:20 PM

ಮೈಸೂರು: ನಗರಸಭೆ ಕಚೇರಿಯಲ್ಲಿ ವಿದ್ಯುತ್ ಕಡಿತವಾಗಿದ್ದು, ಪರಿಣಾಮ ಕಚೇರಿಯಲ್ಲಿ ಕತ್ತಲು ಆವರಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ನಗರಸಭೆ ಕಚೇರಿಯಲ್ಲಿ ವಿದ್ಯುತ್ (Electricity) ಕೈಕೊಟ್ಟಿದ್ದರಿಂದ ಜನರ ಕೆಲಸಗಳು ಸ್ಥಗಿತವಾಗಿದೆ. ನಗರಸಭೆಯಲ್ಲಿ ಪ್ರತಿ ದಿನ ಇದೇ ರೀತಿಯ ಸಮಸ್ಯೆ ಇದ್ದು, ಯುಪಿಎಸ್ (UPS) ಕೆಟ್ಟು ವರ್ಷಗಳಾಗಿದೆ. ಆದರೂ ಕೂಡ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಒಟ್ಟು 31 ವಾರ್ಡ್‌ಗಳನ್ನು ಒಳಗೊಂಡ ನಗರಸಭೆಯಲ್ಲಿ ತಮ್ಮ ತಮ್ಮ ಕೆಲಸಕ್ಕಾಗಿ ಸಾರ್ವಜನಿಕರು ಕಾದು ನಿಂತಿದ್ದಾರೆ. ರಾಜ್ಯ, ಕೇಂದ್ರದಿಂದ ಸಾಕಷ್ಟು ಅನುದಾನ ಬಂದರೂ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಇಂದು ಈ ಕೆಲವು ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ! ನಗರದಾದ್ಯಂತ ಯೋಜನಾ ಕಾಮಗಾರಿಗಳ ವಿಳಂಬದಿಂದಾಗಿ ನವೆಂಬರ್ 15 ರಿಂದ 17 ರವರೆಗೆ (ಸೋಮವಾರದಿಂದ ಬುಧವಾರ) ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ವಿದ್ಯತ್ ಕಡಿತ ಉಂಟಾಗಲಿದೆ. ಬೆಂಗಳೂರು ಎಲೆಕ್ಟ್ರಿಕ್ ಸಪ್ಲೈ ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್​ಮಿಷನ್​ ಕಾರ್ಪೊರೇಷನ್ ಲಿಮಿಟೆಡ್  ಕೈಗೊಂಡಿರುವ ಕೇಬಲ್ ಪರಿವರ್ತನೆಯ ಕೆಲಸದಿಂದ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಎದುರಾಗಲಿದೆ.

ಬೆಂಗಳೂರಿನಲ್ಲಿ ಇಂದು ಮಂಗಳವಾರ (ನವೆಂಬರ್ 16) ಎಚ್ಎಸ್ಆರ್ ಲೇಔಟ್, ವೀವರ್ಸ್ ಕಾಲೋನಿ, ಕೃಷ್ಣಪ್ಪ ಲೇಔಟ್, ಬಿಡಿಎ ಅಂಜನಾಪುರ, ಆವಲಹಳ್ಳಿ ಸೇರಿದಂತೆ ಮೀನಾಕ್ಷಿ ಲೇಔಟ್​ನಲ್ಲಿ ಪವರ್ ಕಟ್ ಉಂಟಾಗಲಿದೆ. ನಾಳೆ ಬುಧವಾರ (ನವೆಂಬರ್ 17)ರಂದು ಬೆಂಗಳೂರಿನ 4ನೇ ಮೇನ್ ಎಚ್ಎಸ್ಆರ್ ಲೇಔಟ್ 17 ಕ್ರಾಸ್, ಅಂಜನಾಪುರ ಮೂರನೇ ಬ್ಲಾಕ್, ಜಯರಾಮ ರೆಡ್ಡಿ ಲೇಔಟ್, ರಾಘವನ್ ಪಾಳ್ಯ, ಸಹಾರ ಬೇಕರಿ ರಸ್ತೆ, ಆವಲಹಳ್ಳಿ ಸೇರಿದಂತೆ ಜಿಬಿ ಪಾಳ್ಯ ರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ.

ನಿನ್ನೆ ಸೋಮವಾರ (ನವೆಂಬರ್ 15)ರಂದು ಬೆಂಗಳೂರಿನ ಎಸ್​ಬಿಐ ಲೇಔಟ್, ಆವಲಹಳ್ಳಿ, ಮೀನಾಕ್ಷಿ ಲೇಔಟ್, ವೆಂಕಟಪುರ, ಟೀಚರ್ಸ್ ಕಾಲೋನಿ, ಎಚ್ಎಸ್ಆರ್ ಸೆಕ್ಟರ್ 5 ಮತ್ತು ಜಕ್ಕಸಂದ್ರದಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು.

ಕಲ್ಲಿದ್ದಲು ಕೊರತೆ, ಕರ್ನಾಟಕದಲ್ಲಿ ವಿದ್ಯುತ್ ಕಡಿತದ ಭೀತಿಯಿದ್ದರೆ, ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ನಡೆಯತ್ತಿರುವ ಕಾಮಗಾರಿಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ. ಕೊವಿಡ್ 19 ಎರಡನೇ ಅಲೆಯಿಂದ ಮತ್ತು ಗುತ್ತಿಗೆದಾರರ ಕೆಲಸದ ವಿಳಂಬದಿಂದಾಗಿ ಹೆಚ್ಚಿನ ಯೋಜನೆಗಳ ಕೆಲಸ ಸಾಗಲು ಸಮಯ ತೆಗೆದುಕೊಂಡಿದೆ. ಕೈಗೊಂಡ ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ: ಬಿಲ್​ ಪಾವತಿಸದ ಕಾರಣ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ಸಂಪರ್ಕ ಕಡಿತ

ಉರಿ ಜಲವಿದ್ಯುತ್​ ಸ್ಥಾವರಗಳ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆ ಹೊಸದೊಂದು ಉಗ್ರ ಸಂಘಟನೆ; ಸ್ಥಳದಲ್ಲಿ ಬಿಗಿ ಭದ್ರತೆ

Follow us on

Related Stories

Most Read Stories

Click on your DTH Provider to Add TV9 Kannada