ಮೈಸೂರಿನಲ್ಲಿ ತಿಮಿಂಗಿಲ ವಾಂತಿ ಮಾರಲು ಯತ್ನ; ಇಬ್ಬರು ಬಂಧನ
ಏಪ್ರಿಲ್ 26ರಂದು ಕೋಟ್ಯಾಂತರ ಬೆಲೆಬಾಳುವ ಹಾಗೂ ಅತ್ಯಂತ ವಿರಳವಾಗಿ ಸಿಗುವ ತಿಮಿಂಗಿಲದ ವಾಂತಿ ಸುಮಾರು ಒಂದು ಕೆ.ಜಿ ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿತ್ತು.
ಮೈಸೂರು: ತಿಮಿಂಗಿಲ ವಾಂತಿಯನ್ನು (Amber Gris)ಮಾರಲು ಯತ್ನಿಸಿದ ಇಬ್ಬರನ್ನು ಮೈಸೂರಿನ (Mysuru) ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಮಿವುಲ್ಲಾ, ರಾಘವೇಂದ್ರ ಬಂಧಿತ ಆರೋಪಿಗಳು. ನಾಲ್ವರಿಂದ 2 ಕೆ.ಜಿ 200 ಗ್ರಾಂ ತಿಮಿಂಗಿಲದ ಅಂಬರ್ ಗ್ರೀಸ್ನ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಟೀ ಅಂಗಡಿ ಬಳಿ ಕುಳಿತು ಮಾರಾಟಕ್ಕೆ ಯತ್ನಿಸುತ್ತಿದ್ದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಇಬ್ಬರು ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುರುಡೇಶ್ವರ ಕಡಲತೀರದಲ್ಲಿ ತಿಮಿಂಗಿಲದ ಅಂಬರ್ ಗ್ರಿಸ್ ಪತ್ತೆ ಏಪ್ರಿಲ್ 26ರಂದು ಕೋಟ್ಯಾಂತರ ಬೆಲೆಬಾಳುವ ಹಾಗೂ ಅತ್ಯಂತ ವಿರಳವಾಗಿ ಸಿಗುವ ತಿಮಿಂಗಿಲದ ವಾಂತಿ ಸುಮಾರು ಒಂದು ಕೆ.ಜಿ ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿತ್ತು. ಸದ್ಯ ದೇಶದಲ್ಲಿ ತಿಮಿಂಗಿಲ ವಾಂತಿ ಮಾರಾಟಕ್ಕೆ ಅವಕಾಶ ಇಲ್ಲದ ಕಾರಣ ಸಿಕ್ಕ ವಸ್ತುವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ತಿಮಿಂಗಿಲ ವಾಂತಿ ಆಳ ಸಮುದ್ರದಲ್ಲಿ ಸಿಗುವ ಬೆಲೆ ಬಾಳುವ ವಸ್ತು. ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಬಳಕೆಯಾಗುವ ಈ ವಸ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಎನ್ನುವವರಿಗೆ ಸಿಕ್ಕಿತ್ತು.
ಎಲ್ಲಾ ಮೀನುಗಳ ವಾಂತಿ ಬೆಲೆಬಾಳದು ಅಂಬರ್ ಗ್ರಿಸ್ ಎಂದು ಇಂಗ್ಲೀಷ್ನಲ್ಲಿ ಹೇಳುವ ಹಾಗೂ ಕನ್ನಡದಲ್ಲಿ ಇದನ್ನು ತಿಮಿಂಗಿಲ ವಾಂತಿ ಎನ್ನುತ್ತಾರೆ. ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬರ್ ಗ್ರಿಸ್ ಅಥವಾ ತಿಮಿಂಗಿಲ ವಾಂತಿ ಎಂದು ಹೇಳುತ್ತಾರೆ. ಎಲ್ಲಾ ತಿಮಿಂಗಿಲಗಳ ವಾಂತಿ ಹೆಚ್ಚು ಬೆಲೆಬಾಳದು. ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬರ್ ಗ್ರಿಸ್ ಹೊರ ಬರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ. ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೆ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ.
ಇದನ್ನೂ ಓದಿ
Dangerous Food: ಒಂದೇ ಬಾರಿ ಎರಡು ಪದಾರ್ಥಗಳನ್ನು ಸೇವಿಸುವ ಮುನ್ನ ನಿಮ್ಮ ಗಮನ ಆರೋಗ್ಯದ ಹಿತದೃಷ್ಟಿ ಮೇಲೆ ಇರಲಿ
ಮುರುಡೇಶ್ವರ ಕಡಲತೀರದಲ್ಲಿ ಕೋಟ್ಯಾಂತರ ಬೆಲೆ ಬಾಳುವ ತಿಮಿಂಗಿಲದ ಅಂಬರ್ ಗ್ರಿಸ್ ಪತ್ತೆ
(Police have arrested two men for trying to sell whale Amber Gris in Mysuru)