R Dhruvanarayan: ಆರ್​​ ಧ್ರುವನಾರಾಯಣ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅಗಲಿಕೆಗೆ ಪಕ್ಷಾತೀತವಾಗಿ ರಾಜಕೀಯ ನಾಯಕರುಗಳು ಸಂತಾಪ ಸೂಚಿಸಿದ್ದಾರೆ.

R Dhruvanarayan: ಆರ್​​ ಧ್ರುವನಾರಾಯಣ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
ಆರ್​​ ಧ್ರುವನಾರಾಯಣ Image Credit source: starofmysore.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 11, 2023 | 11:15 PM

ಮೈಸೂರು: ಕಾಂಗ್ರೆಸ್ ಉಪಾಧ್ಯಕ್ಷ ಮಾಜಿ ಸಂಸದರಾಗಿದ್ದ ಆರ್. ಧ್ರುವನಾರಾಯಣ (61)(R Dhruvanarayan) ಮಾರ್ಚ್ 11ನೇ ತಾರೀಕಿನ ಶನಿವಾರ ಹೃದಯ ಸ್ತಂಭನದಿಂದ (Cardiac Arrest) ನಿಧನರಾಗಿದ್ದಾರೆ. ಧ್ರುವನಾರಾಯಣ ಕಾಂಗ್ರೆಸ್​ ಪಾಳಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಅಜಾತ ಶತ್ರು. 1983ರಿಂದ ಕೈ ಹಿಡಿದಿದ್ದ ಧ್ರುವನಾರಾಯಣ ಚಾಮರಾಜನಗರದಲ್ಲಿ ಎರಡು ಬಾರಿ ಸಂಸದರಾಗಿದ್ದರು. ಎರಡು ಬಾರಿ ಶಾಸಕರಾಗಿಯೂ ಕೂಡ ಆಯ್ಕೆ ಆಗಿದ್ದರು. ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಧ್ರುವನಾರಾಯಣ, ರಾಜಕೀಯ ಜೀವನದಲ್ಲಿ ಅಜಾತ ಶತ್ರುವಿನಂತೆ ಇದ್ದರು. ಹಾಗೇಯೇ ನಡೆದುಕೊಂಡು ಬಂದಿದ್ದರು. ರಾಜಕೀಯದಲ್ಲಿ ಮತ್ತಷ್ಟು ಭವಿಷ್ಯ ವೃದ್ಧಿಸಿಕೊಳ್ಳೋದಕ್ಕಾಗಿ, ನಂಜನಗೂಡು ವಿಧಾನಸಭೆ ಕ್ಷೇತ್ರದಿಂದ ಅಗ್ನಿಪರೀಕ್ಷೆಗೆ ಇಳಿಯಬೇಕು ಅಂತ ಕನಸಿನ ಕೋಟೆಯನ್ನ ಕಟ್ಟಿಕೊಂಡಿದ್ದರು. ಆದರೆ ವಿಧಿಯಾಟ ಧ್ರುವತಾರೆಯಂತೆ ಮಿನುಗಬೇಕಾದ ಮನೆಯನ್ನೇ ಕತ್ತಲಿಗೆ ತಳ್ಳಿದ್ದಾನೆ.

ಕಾಂಗ್ರೆಸ್​ ಪಕ್ಷದಲ್ಲಿ ಇತ್ತಿಚೇಗೆ ಫುಲ್​ ಆ್ಯಕ್ಟೀವ್ ಆಗಿದ್ದ ಧ್ರುವನಾರಾಯಣ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ನಿನ್ನೆಯಷ್ಟೇ ನಂಜನಗೂಡಿನಲ್ಲಿ ಸಭೆ ನಡೆಸಿದ್ದರು. ಹುಲ್ಲಹಳ್ಳಿ ಹೋಬಳಿಯಲ್ಲಿ ಪ್ರಚಾರ ಮಾಡಿದ್ದರು. ಬಳಿಕ ಪ್ರಚಾರ ಮುಗಿಸಿ ಮೈಸೂರಿನ ಮನೆಗೆ ಬಂದು ರೆಸ್ಟ್​ ಮಾಡಿದ್ದಾರೆ. ಆದರೆ ಮುಂಜಾನೆ ಧ್ರುವನಾರಾಯಣಗೆ ಹೊಟ್ಟೆಯಲ್ಲಿ ರಕ್ತಸ್ರಾವವಾಗಿ ವಾಂತಿ ಆಗಿದೆ. ಆ ವೇಳೆ ಉಸಿರಾಡುವಾಗ ಬ್ಲಡ್​ ಲಂಗ್ಸ್​ ಒಳಗೂ ಹೋಗಿದ್ದರಿಂದಲೂ, ಹೃದಯಾಘಾತ ಆಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದರೂ ಯಾವ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: R Dhruvanarayana: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ತೀವ್ರ ರಕ್ತಸ್ರಾವದಿಂದ ನಿಧನ

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅಗಲಿಕೆಗೆ ಪಕ್ಷಾತೀತವಾಗಿ ರಾಜಕೀಯ ನಾಯಕರುಗಳು ಸಂತಾಪ ಸೂಚಿಸಿದ್ದಾರೆ. ರಾಹುಲ್ ಗಾಂಧಿ, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್​ ಯಡಿಯೂರಪ್ಪ, ಹೆಚ್​.ಡಿ. ದೇವೇಗೌಡ, ಹೆಚ್​.ಡಿ ಕುಮಾರಸ್ವಾಮಿ ಸೇರಿ ಹಲವು ನಾಯಕರು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಸ್ನೇಹಿತನನ್ನ ಕಳೆದುಕೊಂಡು ಸಿದ್ದರಾಮಯ್ಯ ಭಾವುಕ

ದಾವಣಗೆರೆಯಲ್ಲಿ ಪ್ರಜಾ ಧ್ವನಿ ಸಮಾವೇಶದಲ್ಲಿ ಭಾಗಿಯಾಗೋಕೆ ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ವಿಷಯ ತಿಳಿದು ಪ್ರಜಾಧ್ವನಿ ರದ್ದು ಮಾಡಿ ಅಲ್ಲಿಂದಲೇ ನೇರವಾಗಿ ಮೈಸೂರಿಗೆ ಆಗಮಿಸಿದ್ದಾರೆ. ಧ್ರುವನಾರಾಯಣ ಪಾರ್ಥಿವ ಶರೀರ ಬಳಿ ಬರ್ತಿದ್ದಂತೆ ಸಿದ್ಧರಾಮಯ್ಯ ಒಂದು ಕ್ಷಣ ಮೌನಕ್ಕೆ ಜಾರಿದರು. ಅಂತಿಮ ನಮನ ಸಲ್ಲಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: Sonia and Rahul Gandhi speak to family: ಧ್ರುವನಾರಾಯಣ ಕುಟುಂಬಕ್ಕೆ ಸೋನಿಯಾ ಗಾಂಧಿ ಕಳಿಸಿದ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದರು

ಸಂಸದ ಪ್ರತಾಪ್ ಸಿಂಹ ಕಣ್ಣೀರು

ಕಣ್ಣೀರಿಡುತ್ತಾ ಮಾತಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ತಮ್ಮಿಬ್ಬರ ನಡುವೆಯಿದ್ದ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರತಾಪ್ ಸಿಂಹರ ಮಾತನ್ನು ಆಲಿಸಿ. ಅವರು ಅಗಲಿದ ನಾಯಕನ ಹೆಸರು ಹೇಳುವಾಗೆಲ್ಲ ಧ್ರುವನಾರಾಯಣ ಸಾಹೇಬ್ರು ಅನ್ನುತ್ತಾರೆ. ರಾಜಕೀಯ ಬದುಕಿನಲ್ಲಿ ಅವರಿಬ್ಬರು ಬೇರೆ ಬೇರೆ ಪಕ್ಷದವರಾದರೂ ಎಲ್ಲ ಹಂತಗಳಲ್ಲಿ ಮಾರ್ಗದರ್ಶನ ನೀಡಿದ್ದನ್ನು ಪ್ರತಾಪ್ ಸಿಂಹ ಗದ್ಗರಿತರಾದರು. ಲೋಕಸಭಾ ಸದಸ್ಯರಾಗಿ ಚಾಮರಾಜನಗರದಲ್ಲಿ ಧ್ರುವನಾರಾಯಣ ಮಾಡಿದ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಾಪ್ ಸಿಂಹ ಅಭಿಮಾನದಿಂದ ಹೇಳುತ್ತಾರೆ ಎಂದರು.

ಕಾಂಗ್ರೆಸ್ ಅಭಿಮಾನಿಗಳು ಮೌನ ಮೆರವಣಿ

ಅಗಲಿದ ಕೆಪಿಸಿಸಿ ಕಾರ್ಯಾಧ್ಯಕ್ಷ. ಆರ್. ಧ್ರುವನಾರಾಯಣಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಗ್ರಾಮದ ಮುಖ್ಯಸ್ಥಗಳಲ್ಲಿ ಮೇಣದಬತ್ತಿ ಹಿಡಿದು ಕಾಂಗ್ರೆಸ್ ಅಭಿಮಾನಿಗಳು ಮೌನ ಮೆರವಣಿ ನಡೆಸಿದರು. ಹಿರಿಯ ಕಾಂಗ್ರೆಸ್ ಮುಖಡರಿಂದ ಧ್ರುವನಾರಾಯಣ ಗುಣಗಾನ ಮಾಡಿದರು.

ನಾಳೆ ಮಧ್ಯಾಹ್ನ ಹುಟ್ಟೂರಲ್ಲಿ ಧ್ರುವನಾರಾಯಣ ಅಂತ್ಯಕ್ರಿಯೆ 

ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನ ಪಡೆಯಲು ಮೈಸೂರಿನ ವಿಜಯನಗರದ ನಿವಾಸದಲ್ಲಿ ಸಾರ್ವಜನಿಕರಿಗೆ ಅವಕಾಶ ಮಾಡಲಾಗಿತ್ತು. ಬಳಿಕ ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂಜನಗೂಡಿನ ಹುಲ್ಲಳ್ಳಿ ಸರ್ಕಲ್​ನಿಂದ ಆರ್​​ಪಿ ರಸ್ತೆವರೆಗೆ ಮೆರವಣಿಗೆ, ನಂತರ ಚಾಮರಾಜನಗರ ಕಾಂಗ್ರೆಸ್ ಕಚೇರಿ ಬಳಿ ದರ್ಶನಕ್ಕೆ ಅವಕಾಶ‌ ಕಲ್ಪಿಸಲಾಗಿತ್ತು. ನಾಳೆ ಮಧ್ಯಾಹ್ನ 2 ಗಂಟೆಗೆ ಹುಟ್ಟೂರು ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೈಸೂರಿನಲ್ಲಿ ಟಿವಿ9ಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತಿಹಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:15 pm, Sat, 11 March 23