ರಾಖಿ ಸಾವಂತ್ ಪತಿ ವಿರುದ್ಧ ಮತ್ತೊಂದು FIR ದಾಖಲು: ಅತ್ಯಾಚಾರ ಕೇಸ್​ ದಾಖಲಿಸಿದ ಇರಾನಿ ಮೂಲದ ಯುವತಿ

ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 376 ಅಡಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ರಾಖಿ ಸಾವಂತ್ ಪತಿ ವಿರುದ್ಧ ಮತ್ತೊಂದು FIR ದಾಖಲು: ಅತ್ಯಾಚಾರ ಕೇಸ್​ ದಾಖಲಿಸಿದ ಇರಾನಿ ಮೂಲದ ಯುವತಿ
ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿImage Credit source: timesofindia
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 11, 2023 | 8:23 PM

ಮೈಸೂರು: ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ (Adil Khan) ವಿರುದ್ಧ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 376 ಅಡಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಮೈಸೂರಲ್ಲಿ ಅತ್ಯಾಚಾರವೆಸಗಿದ್ದನೆಂದು ಆದಿಲ್ ದುರಾನಿ ವಿರುದ್ಧ ಇರಾನಿ ಮೂಲದ ಯುವತಿ ಆರೋಪಿಸಿದ್ದಳು. ಈಗಾಗಲೇ ರಾಖಿ ಸಾವಂತ್​ ನೀಡಿದ್ದ ವಂಚನೆ ಕೇಸ್​ನಲ್ಲಿ ಆದಿಲ್ ಜೈಲುಪಾಲಾಗಿದ್ದು, ಇದೀಗ ಆತನ ವಿರುದ್ಧ ಮತ್ತೊಂದು FIR ದಾಖಲು ಮಾಡಲಾಗಿದೆ.

14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್​ ಖಾನ್​; ಕುಸಿದು ಬಿದ್ದ ಪತ್ನಿ ರಾಖಿ ಸಾವಂತ್​

ರಾಖಿ ಸಾವಂತ್​ ಪತಿ ಆದಿಲ್​ ಖಾನ್ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಂಡನ ವಿರುದ್ಧ ರಾಖಿ ಸಾವಂತ್​ ಅವರು ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನುರಾಖಿ ಸಾವಂತ್ ಹೊರಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ವಿವರಿಸುತ್ತಿರುವಾಗ ಅವರು ಮಾಧ್ಯಮಗಳ ಕ್ಯಾಮೆರಾ ಎದುರಿನಲ್ಲೇ ಕುಸಿದು ಬಿದ್ದಿದ್ದರು.

ಇದನ್ನೂ ಓದಿ: Rakhi Sawant: ಬೀದಿಗೆ ಬಂತು ಆದಿಲ್​ ಖಾನ್​-ರಾಖಿ ಸಾವಂತ್​ ಮದುವೆ ಗಲಾಟೆ; ಪತಿ ಮೇಲೆ ಅನೈತಿಕ ಸಂಬಂಧದ ಆರೋಪ

ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್​ ಅವರ ತಾಯಿ ನಿಧನರಾದರು. ಅಂದಿನಿಂದ ಇಂದಿನತನಕ ಅವರು ಹಲವು ಬಗೆಯಲ್ಲಿ ಆಘಾತ ಎದುರಿಸುತ್ತಿದ್ದಾರೆ. ಗಂಡ ಆದಿಲ್​ ಖಾನ್​ ನೀಡಿದ ಕಿರುಕುಳಗಳು ಒಂದೆರಡಲ್ಲ ಎಂದು ಅವರು ಹೇಳಿದ್ದಾರೆ. ‘ಮೈಸೂರು ಮತ್ತು ಬೆಂಗಳೂರಿನಲ್ಲಿ ಆತನ ಕ್ರಿಮಿನಲ್​ ರೆಕಾರ್ಡ್​ ಇದೆ. ಮದುವೆಗೂ ಮುನ್ನ ಅದು ತಿಳಿದಿದ್ದರೆ ಈಗ ಇಂಥ ದಿನ ಬರುತ್ತಿರಲಿಲ್ಲ’ ಎಂದು ಅವರು ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: Rakhi Sawant: ರಾಖಿ ಸಾವಂತ್​ ಪತಿ ಆದಿಲ್ ಖಾನ್​ ಬಂಧನ; ‘ಸಾಯೋ ತನಕ ಕ್ಷಮಿಸಲ್ಲ’ ಎಂದು ತುತ್ತು ತಿನ್ನಿಸಿದ ನಟಿ

ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧ

ಕಳೆದ ವರ್ಷ ರಾಖಿ ಸಾವಂತ್​ ಅವರು ಮರಾಠಿ ಬಿಗ್​ ಬಾಸ್​ ಶೋಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರ ಪತಿ ಆದಿಲ್​ ಖಾನ್​ ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡರು ಎಂಬ ಆರೋಪ ಇದೆ. ‘ಆಕೆಯ ಜೊತೆಗಿನ ಸಂಬಂಧದ ಕಾರಣದಿಂದಾಗಿ ನಾನು ಮದುವೆ ಬಗ್ಗೆ ಮೌನವಾಗಿರುವಂತೆ ಆದಿಲ್​ ಖಾನ್​ ಒತ್ತಾಯಿಸಿದ. ಅಲ್ಲಿಯವರೆಗೆ ನಾನು ಸೈಲೆಂಟ್​ ಆಗಿದ್ದೆ. ಮೊದಲಿಗೆ ನನ್ನ ಜೊತೆ ಮದುವೆ ಆಗಿದ್ದನ್ನೇ ಆತ ಒಪ್ಪಿಕೊಳ್ಳಲಿಲ್ಲ. ನಂತರ ಮಾಧ್ಯಮದ ಭಯದಿಂದ ಒಪ್ಪಿಕೊಂಡ’ ಎಂದು ರಾಖಿ ಸಾವಂತ್​ ಇತ್ತೀಚೆಗೆ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:37 pm, Sat, 11 February 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ