ರಾಹುಲ್ ಗಾಂಧಿ ಬಗ್ಗೆ ರಿಷಿ ಕುಮಾರ್ ಸ್ವಾಮೀಜಿ ಅವಹೇಳನಕಾರಿ ಮಾತು: ವಿಡಿಯೋ ವೈರಲ್
ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಿಷಿ ಕುಮಾರ್ ಸ್ವಾಮೀಜಿ ಅವರು ರಾಹುಲ್ ಗಾಂಧಿಯವರನ್ನು ದೃತರಾಷ್ಟ್ರನಿಗೆ ಹೋಲಿಸಿದ್ದಾರೆ.
ಮೈಸೂರು ಡಿ.04: ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ (Rishikumar Swamiji) ಅವರು ವಿವಾದಾತ್ಮಕ ಹೇಳಿಕೆ ನೀಡಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಿಷಿಕುಮಾರ್ ಸ್ವಾಮೀಜಿ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಓರ್ವ ಬುದ್ಧಿಮಾಂದ್ಯ ಎಂದಿದ್ದಾರೆ.
ರಿಷಿ ಕುಮಾರ್ ಸ್ವಾಮೀಜಿ ವಿಡಿಯೋದಲ್ಲಿ ರಾಹುಲ್ ಗಾಂಧಿಯವರನ್ನು ಮಹಾಭಾರತದ ಧೃತರಾಷ್ಟ್ರಗೆ ಹೋಲಿಸಿದ್ದಾರೆ. ಧೃತರಾಷ್ಟ್ರ ಒಬ್ಬ ಅಂಗವಿಕಲ ಕಣ್ಣು ಕಾಣುತ್ತಿರಲಿಲ್ಲ. ಆತನನ್ನು ದೇಶದ ರಾಜ ಮಾಡಲಾಗಿತ್ತು. ಇದರಿಂದ ಮಹಾಭಾರತವೇ ನಡೆದು ಹೋಯಿತು. ಆಗ ಆಗಿದ್ದೇ ಸಾಕು. ಈಗ ಒಬ್ಬ ಬುದ್ಧಿಮಾಂದ್ಯನನ್ನು ಪ್ರಧಾನಿ ಮಾಡಲು ಸಾಧ್ಯವಿಲ್ಲ. ಸನಾತನ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ. ರಾಹುಲ್ ಗಾಂಧಿ ಬಗ್ಗೆ ನನಗೆ ಅನುಕಂಪವಿದೆ.
ಇದನ್ನೂ ಓದಿ: ಆ ಕಂಬಗಳನ್ನು ನೋಡಿದರೆ ಹಿಂದೂಗಳು ಪ್ರಚೋದನೆಗೊಳಗಾಗುತ್ತಾರೆ: ಕಾಳಿ ಸ್ವಾಮಿ
ಆ ದೇವರು ರಾಹುಲ್ ಗಾಂಧಿಗೆ ಯಾಕೆ ಬುದ್ದಿ ಕೊಡಲಿಲ್ಲ? ಮುಂದಿನ ಜನ್ಮದಲ್ಲಿ ಆತನಿಗೆ ದೇವರು ಬುದ್ದಿ ಶಕ್ತಿ ಕೊಡಲಿ. ಆದರೆ ರಾಹುಲ್ ಗಾಂಧಿ ಈಗ ಬುದ್ಧಿಮಾಂದ್ಯ. ಆದರೆ ಅವರ ತಾಯಿಗೆ ಆತನನನ್ನು ಕಂಡರೆ ಇಷ್ಟ. ನನ್ನ ಮಗ ಎಲ್ಲರಿಗಿಂತ ಬುದ್ದಿವಂತ ಅಂದುಕೊಂಡಿದ್ದಾರೆ ಅದು ಎಲ್ಲಾ ತಾಯಂದಿರಿಗೂ ಸಹಜ ಅಂತ ವ್ಯಂಗ್ಯವಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ