ಟಿ.ನರಸೀಪುರ ಇನ್ಸ್​​ಪೆಕ್ಟರ್​​​​ ವಿರುದ್ಧ ಕ್ರಮವಿಲ್ಲ: ಮಸೀದಿ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ

ಗಣೇಶೋತ್ಸವ ಸಮಿತಿಯ ಯುವಕರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾದ ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್(Dhananjay) ಅವರ ವಿರುದ್ಧ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಅಮಾನತಿಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಟಿ. ನರಸೀಪುರದಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಇದರ ಮಧ್ಯೆ ಇದೀಗ ಬಿಜೆಪಿಗರ ಪ್ರತಿಭಟನೆಗೆ ಗೃಹ ಇಲಾಖೆ ಮಣಿದಿದೆ.

ಟಿ.ನರಸೀಪುರ ಇನ್ಸ್​​ಪೆಕ್ಟರ್​​​​ ವಿರುದ್ಧ ಕ್ರಮವಿಲ್ಲ: ಮಸೀದಿ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ
T Narasipura Ganesha Row
Edited By:

Updated on: Sep 14, 2026 | 11:23 AM

ಮೈಸೂರು, (ಸೆಪ್ಟೆಂಬರ್ 14): ಟಿ ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿಚಾರಕ್ಕೆ ಇನ್ಸ್​​ಪೆಕ್ಟರ್​​ ಧನಂಜಯ್ ಧಮ್ಕಿ ಹಾಕಿರುವ ಆರೋಪ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿಯ ಘಟಾನುಘಟಿ ನಾಯಕರು ನಿನ್ನೆ(ಸೆ.13) ಟಿ. ನರಸೀಪುರಕ್ಕೆ ಭೇಟಿ ನೀಡಿ ಇನ್ಸ್​​ಪೆಕ್ಟರ್​​ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ದೊಡ್ಡ ಹೈಡ್ರಾಮಾವೇ ನಡೆದಿದ್ದು, ಕೊನೆ ಪರಿಸ್ಥಿತಿ ಬೇರೆ ಸ್ವರೂಪ ತಿರುಗುತ್ತಿದ್ದಂತೆಯೇ ಬಿಜೆಪಿ ನಾಯಕರನ್ನು ಪೊಲೀಸರುವ ವಶಕ್ಕೆ ಪಡೆದಿದ್ದರು. ಹೀಗಾಗಿ ಟಿ. ನರಸೀಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಇದೆ. ಇದರ ಮಧ್ಯೆ ಇದೀಗ ಮಸೀದಿ ಮಾರ್ಗದಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಮೆರವಣಿಗೆಗೆ ಅವಕಾಶ,ಇನ್ಸ್​​ಪೆಕ್ಟರ್​​​​ ವಿರುದ್ಧ ಕ್ರಮವಿಲ್ಲ

ನಿನ್ನೆ (ಸೆ.13) ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು,ಇನ್ಸ್​​ಪೆಕ್ಟರ್​ ಅಮಾನತು ಅಥವಾ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು. ಅಲ್ಲದೇ ಪೊಲೀಸ್ ಅಧಿಕಾರಿಗಳ ಜೊತೆಗಿನ ಶಾಂತಿ ಸಭೆ ಸಹ ವಿಫಲವಾಗಿದ್ದು, ಅಹೋರಾತ್ರಿ ಧರಣಿಗೆ ಬಿಜೆಪಿ ಕರೆ ನೀಡಿತ್ತು. ಹೀಗಾಗಿ ಗಣೇಶ ಮುರ್ತಿಯನ್ನು ಕೈಯಲ್ಲಿಡಿದುಕೊಂಡು ಪ್ರತಿಭಟನೆ ನಡೆಸಯುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದರು. ಹೀಗಾಗಿ ಟಿ.ನರಸೀಪುರದಲ್ಲಿ ಬಿಗುವಿನ ಬೂದಿ ಮುಚ್ಚಿದ ಕೆಂಡಂತಿದೆ. ಹೀಗಾಗಿ ಬಿಜೆಪಿಗರನ್ನು ಮನವೊಲಿಸಲು ಇದೀಗ ಗೃಹ ಇಲಾಖೆ, ಮಸೀದಿ ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಆದ್ರೆ, ಧಮ್ಕಿ ಇನ್ಸಪೆಕ್ಟರ್ ವಿರುದ್ದ ಯಾವುದೇ ಕ್ರಮ ಆಗಿಲ್ಲ.

ಇದನ್ನೂ ನೋಡಿ: ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!

ಟಿ. ನರಸೀಪುರದಲ್ಲಿ ಈವರೆಗೂ ಯಾವುದೇ ಗಣೇಶೋತ್ಸವದ ಸಂದರ್ಭದಲ್ಲೂ ಗಲಭೆ, ಗಲಾಟೆಗಳು ನಡೆದ ನಿದರ್ಶನಗಳಿರಲಿಲ್ಲ. ಆದರೆ ಇನ್‌ಸ್ಪೆಕ್ಟರ್ ಧನಂಜಯ್, ಮಸೀದಿ ರಸ್ತೆಯಲ್ಲಿ ಮೆರವಣಿಗೆ ಸಂಬಂಧ ಗಣೇಶೋತ್ಸವ ಸಮಿತಿಯ ಯುವಕರಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕೆಂಡಾಮಂಡಲರಾಗಿದ್ದು, ಇನ್ಸ್​​ಪೆಕ್ಟರ್​​ ಧನಂಜಯ್​ ಅಮಾತಿಗೆ ಬಿಜೆಪಿ ನಾಯಕರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಏಕಪಕ್ಷೀಯ ಮತ್ತು ದರ್ಪದ ಮಾತುಗಳು ಇಡೀ ಊರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಬಿಜೆಪಿಗರು ಆರೋಪಿಸಿದ್ದು, ಇನ್ಸ್​ಪೆಕ್ಟರ್​​​​ನನ್ನು ಅಮಾತುನ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಇದೀಗ ಮಸೀದಿ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಈ ಮೂಲಕ ಇನ್ಸ್​​ಪೆಕ್ಟರ್​​​​ ಅಮಾನತಿಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರನ್ನು ಮನವೊಲಿಸುವ ಪಯತ್ನ ಇದಾಗಿದೆ.Mysuru Ganesha Procession Row: ಮಸೀದಿ ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸಿದ ಖಾಕಿ

ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ನಡೆಸಿದ್ದ ದಲಿತ ಸಂಘಟನೆ

ಇನ್ನೊಂದೆಡೆ ಪ್ರತಾಪ್ ಸಿಂಹ ಠಾಣೆಗೆ ನುಗ್ಗುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳು ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆಗಿಳಿದಿದ್ದು, ಪ್ರತಾಪ್‌ ಸಿಂಹರನ್ನ ಬಂಧಿಸುವಂತೆ ಒತ್ತಾಯಿಸಿದರು. ಇತ್ತ ಪ್ರತಾಪ್ ಬೆಂಬಲವಾಗಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಒಂದೆಡೆ ಡಿಎಸ್‌ಎಸ್‌ ಲೀಡರ್ಸ್ ಪ್ರತಾಪ್ ಸಿಂಹ ವಿರುದ್ಧ ದಿಕ್ಕಾರ ಕೂಗುತ್ತಿದ್ದರೆ, ಮತ್ತೊಂದೆಡೆ ‘ಹಿಂದೂ ಹುಲಿ, ಪ್ರತಾಪ್ ಸಿಂಹಗೆ ಜೈ ಎಂದು ಪ್ರತಾಪ್ ಸಿಂಹ ಬೆಂಬಲಿಗರಿಂದಲೂ ಘೋಷಣೆ ಕೂಗಿದ್ದರು. ಒಟ್ಟಾರೆ ಟಿ ನರಸೀಪುರ ಪೊಲೀಸ್ ಠಾಣೆ ಮುಂಭಾಗ ನಿನ್ನೆ ಭಾರೀ ಹೈಡ್ರಾಮ ಸೃಷ್ಟಿಯಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us