AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆ ಮಾಡಿಸಿ ಸಾರ್’ ಎಂದು ಶಾಸಕರಿಗೆ ಯುವಕನ ಅರ್ಜಿ! ಎ ಮಂಜು ಕೊಟ್ಟರು ಅಚ್ಚರಿಯ ಸಲಹೆ

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಎಂಬಿಎ ಪದವೀಧರ ಯುವಕನೊಬ್ಬ ಪ್ರಜಾಸೇವಾ ಆಂದೋಲನದಲ್ಲಿ ಶಾಸಕರಿಗೆ ಅರ್ಜಿ ಸಲ್ಲಿಸಿರುವ ಅಚ್ಚರಿಯ ಘಟನೆ ಅರಕಲಗೂಡಿನ ಮಲ್ಲಿಪಟ್ಟಣದಲ್ಲಿ ನಡೆದಿದೆ. ರೈತನ ಮಗ ಎಂಬ ಕಾರಣಕ್ಕೆ ಯುವತಿಯರು ಒಪ್ಪುತ್ತಿಲ್ಲ ಎಂದು ಅಳಲು ತೋಡಿಕೊಂಡ ಯುವಕನಿಗೆ ಶಾಸಕ ಎ. ಮಂಜು, ‘ನೀನೇ ಯಾರನ್ನಾದರೂ ಪ್ರೀತಿಸಿ ಮದುವೆಯಾಗು’ ಎಂದು ಸಲಹೆ ನೀಡಿದ್ದಾರೆ.

‘ಮದುವೆ ಮಾಡಿಸಿ ಸಾರ್’ ಎಂದು ಶಾಸಕರಿಗೆ ಯುವಕನ ಅರ್ಜಿ! ಎ ಮಂಜು ಕೊಟ್ಟರು ಅಚ್ಚರಿಯ ಸಲಹೆ
‘ಮದುವೆ ಮಾಡಿಸಿ ಸಾರ್’ ಎಂದು ಶಾಸಕರಿಗೆ ಯುವಕನ ಅರ್ಜಿImage Credit source: tv9
ಮಂಜುನಾಥ ಕೆಬಿ
| Edited By: |

Updated on:Sep 14, 2026 | 11:54 AM

Share

ಹಾಸನ, ಸೆಪ್ಟೆಂಬರ್ 14: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಯುವಕನೊಬ್ಬ ಶಾಸಕರಿಗೆ ಅರ್ಜಿ ಸಲ್ಲಿಸಿರುವ ಅಚ್ಚರಿಯ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದಿದೆ. ಸೆಪ್ಟೆಂಬರ್ 12ರಂದು ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಆಲದಹಳ್ಳಿ ಗ್ರಾಮದ ಸಂತೋಷ್‌ ಎಂಬುವರು ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಕೇಳಿದ ಶಾಸಕರು ಅಚ್ಚರಿಗೊಳಗಾಗಿದ್ದಾರೆ.

ಎಂಬಿಎ ಪದವೀಧರನಾಗಿರುವ ಸಂತೋಷ್‌, ರೈತನ ಮಗ ಎಂಬ ಕಾರಣಕ್ಕೆ ಯುವತಿಯರು ಮದುವೆಗೆ ಒಪ್ಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮನೆ, ಆಸ್ತಿ ಹಾಗೂ ಸ್ವಂತ ಅಂಗಡಿ ಇದ್ದರೂ ಈಗಾಗಲೇ 30ಕ್ಕೂ ಹೆಚ್ಚು ಯುವತಿಯರನ್ನು ನೋಡಿದ್ದು, ಯಾರೊಬ್ಬರೂ ಒಪ್ಪಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಅಪ್ಪ-ಅಮ್ಮ ಇಲ್ಲದ ತನಗೆ ಹುಡುಗಿ ಹುಡುಕಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಯುವಕನ ಮಾತು ಕೇಳಿ ಶಾಸಕ ಎ ಮಂಜು ಹೇಳಿದ್ದೇನು?

ಯುವಕನ ಮಾತು ಕೇಳಿದ ಶಾಸಕ ಎ. ಮಂಜು ಅಚ್ಚರಿ ವ್ಯಕ್ತಪಡಿಸಿ, ‘ಮದುವೆಯಾಗದೆ ಇರುವವರು ಎಷ್ಟೋ ಜನ ನೆಮ್ಮದಿಯ ಬದುಕು ಬದುಕುತ್ತಿದ್ದಾರೆ. ಇಂಥ ವಿಚಾರಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ. ಇನ್ನೂ ಒಂದು ವಿಚಾರದ ಬಗ್ಗೆ ಯೋಚಿಸಬಹುದು. ನೀನೇ ಯಾರನ್ನಾದರೂ ಪ್ರೀತಿಸಿ ಮದುವೆಯಾಗು’ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಮೃತ ಯೋಧನಿಗೆ ಗೌರವ ಸಲ್ಲಿಸಿಲ್ಲವೆಂದು ಹಾಸನ ಡಿಸಿ ಕಚೇರಿ ಬಳಿ ಪಾರ್ಥಿವ ಶರೀರ ತಂದು ಪ್ರತಿಭಟನೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 am, Mon, 14 September 26

Follow Us