AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ವರ್ಷದ ಹುಡುಗಿ ಬೇಕಂದ್ರೆ 20 ಲಕ್ಷ ರೂ.​: ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದವರು ಅರೆಸ್ಟ್

12 ರಿಂದ 13 ವರ್ಷದ ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಋತುಮತಿಯಾದ ಅಪ್ರಾಪ್ತ ಬಾಲಕಿ ಜೊತೆ ಮೊದಲ ಬಾರಿಗೆ ದೈಹಿಕ ಸಂಪರ್ಕಕ್ಕೆ ಲಕ್ಷಾಂತರ ರೂಪಾಯಿ ರೇಟ್ ಫಿಕ್ಸ್ ಮಾಡುತ್ತಿದ್ದರು. ಇನ್ನು ವಾಟ್ಸಾಪ್​ ವಿಡಿಯೋ ಮೂಲಕ ಬಾಲಕಿಯನ್ನು ತೋರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.

13 ವರ್ಷದ ಹುಡುಗಿ ಬೇಕಂದ್ರೆ 20 ಲಕ್ಷ ರೂ.​: ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದವರು ಅರೆಸ್ಟ್
Prostitution
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on:Sep 28, 2025 | 7:03 PM

Share

ಮೈಸೂರು, (ಸೆಪ್ಟೆಂಬರ್ 28):  ಅಪ್ರಾಪ್ತ ಬಾಲಕಿಯರನ್ನು (minor girls) ವೇಶ್ಯಾವಾಟಿಕೆಗೆ (prostitution )ತಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರು(Mysuru) ಪೊಲೀಸರು ಬಂಧಿಸಿದ್ದಾರೆ. ಆಗತಾನೆ ಋತುಮತಿಯಾದ ಬಾಲಕಿಯರನ್ನೇ ತೋರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ಶೋಭಾ ಹಾಗೂ ತುಳಸಿಕುಮಾರ್ ಎನ್ನುವರನ್ನು ಬಂಧಿಸಲಾಗಿದೆ. ಇವರಿಬ್ಬರು ವಾಟ್ಸಪ್ ಮೂಲಕ ವಿಡಿಯೋ ಮೂಲಕ ಬಾಲಕಿಯರನ್ನು ಗ್ರಾಹಕರಿಗೆ ತೋರಿಸುತ್ತಿದ್ದರು.

ಅಪ್ರಾಪ್ತ ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ರೇಟ್ ಫಿಕ್ಸ್ ಮಾಡಿದ್ದರು. ವಾಟ್ಸಾಪ್​ ವಿಡಿಯೋ ಮೂಲಕ ಬಾಲಕಿಯನ್ನು ಗ್ರಾಹಕರಿಗೆ ತೋರಿಸಿ ಸೆಳೆಯುತ್ತಿದ್ದರು. ಈ ಕೃತ್ಯವನ್ನು ಒಡನಾಡಿ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

ಹೀಗೆ ಬಂಧಿತ ಪಿಂಪ್​ ಗಳು ಹುಡುಗಿರಯನ್ನು ತೋರಿಸಿ ರೇಟ್ ಫಿಕ್ಸ್ ಮಾಡುತ್ತಿದ್ದರು. ಅದರಂತೆ 12 ರಿಂದ 13 ವರ್ಷದ ಬಾಲಕಿಯನ್ನು ತೋರಿಸಿ ಬರೋಬ್ಬರಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸದ್ಯ ಒಡನಾಡಿ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಬ್ರೋಕರ್​ಗಳಾದ ಶೋಭಾ ಹಾಗೂ ತುಳಸಿಕುಮಾರ್ ಎನ್ನುವರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Sun, 28 September 25