ರಾಜಮನೆತನ ಕುರಿತು ಸಚಿವ ಯತೀಂದ್ರ ಹೇಳಿಕೆಗೆ ಸಿಡಿದ ಮೈಸೂರಿಗರು: ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗ ಪ್ರೊಟೆಸ್ಟ್​​

ರಾಜಮನೆತನ ಕುರಿತು ಹೇಳಿಕೆ ನೀಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮೈಸೂರು ನಾಗರಿಕರು, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಯತೀಂದ್ರ, ಮೈಸೂರು ರಾಜರ ಬಗ್ಗೆ ತಾನು ಕೆಟ್ಟದಾಗಿ‌ ಮಾತನಾಡಿಲ್ಲ. ರಾಜಮಾತೆ ಬಗ್ಗೆ ಏನೂ ಕೀಳಾಗಿ ಮಾತನಾಡಿಲ್ಲ. ಅವರ ಮೇಲೆ ನನಗೆ ಗೌರವ ಇದೆ ಎಂದಿದ್ದಾರೆ.

ರಾಜಮನೆತನ ಕುರಿತು ಸಚಿವ ಯತೀಂದ್ರ ಹೇಳಿಕೆಗೆ ಸಿಡಿದ ಮೈಸೂರಿಗರು: ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗ ಪ್ರೊಟೆಸ್ಟ್​​
ರಾಜಮನೆತನ ಕುರಿತು ಸಚಿವ ಯತೀಂದ್ರ ಹೇಳಿಕೆಗೆ ಸಿಡಿದ ಮೈಸೂರಿಗರು
Edited By:

Updated on: Oct 29, 2026 | 12:41 PM

ಮೈಸೂರು, ಅಕ್ಟೋಬರ್​​ 29: ರಾಜಮನೆತನ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗ ಮೈಸೂರು ನಾಗರಿಕರಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಜೆಡಿಎಸ್​, ಬಿಜೆಪಿ ಮುಖಂಡರು ಸಹ ಭಾಗಿಯಾಗಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ಯತೀಂದ್ರ ಕೂಡಲೇ ಕ್ಷಮೆ ಕೇಳಲೇ ಬೇಕು. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ಸರ್ಕಾರ ಮತ್ತು ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾ ಆಚರಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್​​ ಬರೆದಿರುವ ಪತ್ರ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದ್ದ ಸಚಿವ ಯತೀಂದ್ರ, ಅರಮನೆ ಬೋರ್ಡ್ ಸರ್ಕಾರದ್ದು. ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅದಕ್ಕೂ ಸರ್ಕಾರ ದುಡ್ಡು ಕೊಡುತ್ತದೆ ಎಂದಿದ್ದರು. ಅವರ ಈ ಹೇಳಿಕೆಯೀಗ ಮೈಸೂರಿಗರನ್ನು ಕೆರಳಿಸಿದೆ.

‘ಮೈಸೂರು ರಾಜರ ಬಗ್ಗೆ ಕೆಟ್ಟದಾಗಿ‌ ಮಾತನಾಡಿಲ್ಲ’

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಯತೀಂದ್ರ, ಮೈಸೂರು ರಾಜರ ಬಗ್ಗೆ ತಾನು ಕೆಟ್ಟದಾಗಿ‌ ಮಾತನಾಡಿಲ್ಲ. ರಾಜಮಾತೆ ಬಗ್ಗೆ ಏನೂ ಕೀಳಾಗಿ ಮಾತನಾಡಿಲ್ಲ. ಅವರ ಮೇಲೆ ನನಗೆ ಗೌರವ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತನಗೆ ಐಕಾನಿಕ್ ಹೀರೋ ಎಂದಿದ್ದಾರೆ. ತಮ್ಮ ಹೇಳಿಕೆಗಳಿಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಮೈಸೂರು ಅರಮನೆ ಸ್ವಾಧೀನ ಕಾಯ್ದೆಯು ನ್ಯಾಯಾಲಯದಲ್ಲಿ ಇತ್ಯರ್ಥದಲ್ಲಿದ್ದರೂ, ಶಾಸನದ ಪ್ರಕಾರ ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದ್ದೇನೆ ಎಂದು ನಿನ್ನೆಯೂ ಸಚಿವರು ತಿಳಿಸಿದ್ದರು.

ಇದನ್ನೂ ಓದಿ: ಮೈಸೂರಿನಲ್ಲಿ ದಸರಾ ದಂಗಲ್: ಸಚಿವರ ಬೆನ್ನಲ್ಲೇ ಪ್ರಮೋದಾದೇವಿ ಪತ್ರಕ್ಕೆ ಕಮಿಷನರ್ ಸ್ಪಷ್ಟನೆ

ಡಿಸಿಎಫ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

ಮೈಸೂರು ದಸರಾ ಆನೆ ಆಯ್ಕೆ ಕುರಿತು ತಮಗೆ ಹೇಳಿಲ್ಲವೆಂದು ಆರೋಪ ಸಂಬಂಧ ಡಿಸಿಎಫ್ ಡಾ.ಪ್ರಭುಗೌಡ ಅವರು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಅಂಬಾರಿ ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ಲಿಖಿತವಾಗಿ ಅಥವಾ ಔಪಚಾರಿಕವಾಗಿ, ಅಧಿಕೃತವಾಗಿ ಹೇಳುವ ಪದ್ಧತಿ ಇಲಾಖೆಯಲ್ಲಿ ಇಲ್ಲ. ಆದರೂ ಸಮನ್ವಯ ದೃಷ್ಟಿಯಿಂದ ಅಕ್ಟೋಬರ್ 11, ‌12ರಂದು ಫೋನ್‌ನಲ್ಲಿ ಅಗತ್ಯ ಮಾಹಿತಿ ಕೊಟ್ಟಿದ್ದೇವೆ. ಅ.12ರಂದು ಸಂಜೆ 5.44ಕ್ಕೆ ರಾಜವಂಶಸ್ಥೆಗೆ ದೂರವಾಣಿ ಮೂಲಕ ವಿವರಣೆ ನೀಡಲಾಗಿದೆ. ಅ.13ರಂದು ಮಾಧ್ಯಮ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ. ಮಹೇಂದ್ರ ಆನೆ ಆಯ್ಕೆ ವಿಚಾರದಲ್ಲಿ ಏನೇನು ಆಯಿತು? ಏಕೆ ಮಹೇಂದ್ರ ಆನೆ ಆಯ್ಕೆ ಆಗಲಿಲ್ಲ? ಪ್ರಶಾಂತ ಆನೆ ಆಯ್ಕೆಗೆ ಯಾವೆಲ್ಲಾ ಮಾನದಂಡಗಳನ್ನ ಪರಿಗಣಿಸಲಾಗಿದೆ? ಎಂಬ ಬಗ್ಗೆ ಮೈಸೂರು ಡಿಸಿಗೆ ಸುದೀರ್ಘವಾಗಿ ಡಿಸಿಎಫ್​​ ಬರೆದಿದ್ದಾರೆ ಎನ್ನಲಾದ ಪತ್ರ ಇದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:38 pm, Thu, 29 October 26

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us