ಅನಿಲ್‌ನನ್ನು ‘ಅಕ್ಷತಾ’ ಮಾಡಿದ್ದ ಮಂಗಳಮುಖಿಯರು: ಮಂಗಳೂರು-ಕೇರಳದಲ್ಲಿ ಅನೈತಿಕ ಚಟುವಟಿಕೆಗೆ ಬಳಕೆ, ಲಿಂಗ ಬದಲಾವಣೆಗೂ ಸ್ಕೆಚ್

ಮೈಸೂರಿನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಬಸ್ ನಿಲ್ದಾಣದಿಂದ ಯುವಕನೋರ್ವನನ್ನು ಅಪಹರಿಸಿ, ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, 'ಅಕ್ಷತಾ' ಎಂದು ಹೆಸರಿಟ್ಟು ಭಿಕ್ಷಾಟನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಲಿಂಗ ಬದಲಾವಣೆಗೂ ಯತ್ನಿಸಲಾಗಿತ್ತು. ತಪ್ಪಿಸಿಕೊಂಡ ಬಳಿಕವೂ ಬೆದರಿಕೆ ಹಾಕಲಾಗಿದ್ದು, ಸಂತ್ರಸ್ತ ಯುವಕ ನ್ಯಾಯಕ್ಕಾಗಿ ಲಷ್ಕರ್ ಠಾಣೆ ಮೆಟ್ಟಿಲೇರಿದ್ದಾನೆ.

ಅನಿಲ್‌ನನ್ನು ಅಕ್ಷತಾ ಮಾಡಿದ್ದ ಮಂಗಳಮುಖಿಯರು: ಮಂಗಳೂರು-ಕೇರಳದಲ್ಲಿ  ಅನೈತಿಕ ಚಟುವಟಿಕೆಗೆ ಬಳಕೆ, ಲಿಂಗ ಬದಲಾವಣೆಗೂ ಸ್ಕೆಚ್
ಮೈಸೂರಿನಲ್ಲಿ ಭಯಾನಕ ಧಂದೆ
Edited By:

Updated on: Apr 13, 2026 | 11:48 AM

ಮೈಸೂರು, ಏ.12: ಜಿಲ್ಲೆಯಲ್ಲಿ (Mysuru Crime) ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಇದೀಗ ಈ ಸುದ್ದಿ ಎಲ್ಲ ಕಡೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಯುವಕನೋರ್ವನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಹಣದ ದಂಧೆ ಹಾಗೂ ಸೆಕ್ಸ್ ವರ್ಕ್​​ಗೆ ಬಳಸಿಕೊಂಡಿರುವ ಆಘಾತಕಾರಿ ಆರೋಪವೊಂದು ಕೇಳಿ ಬಂದಿದೆ. ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ ಈ ಕರಾಳ ದಂಧೆಯ ಬಲಿಪಶುವಾಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಪ್ರಕರಣ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್‌ಗೆ ಮಂಗಳಮುಖಿ ಅನಿತಾ ಮತ್ತು ತಂಡ ಪರಿಚಯವಾಗಿತ್ತು. ನಂತರ ಆತನನ್ನು ಬಲವಂತವಾಗಿ ಅಪಹರಿಸಿದ ತಂಡ ಮಂಗಳೂರಿಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿ ಓಲೆ, ಮೂಗುಬಟ್ಟು ಹಾಕಿಸಿ ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯಾಗಿ ವೇಷ ಬದಲಿಸಿದ್ದರು ಎಂದು ಆರೋಪಿಸಲಾಗಿದೆ.

ಯುವಕ ಅನಿಲ್‌ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್​​ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳಮುಖಿ ಎಂದು ಸರ್ಟಿಫಿಕೇಟ್ ಕೊಡಿಸಲಾಗಿದೆ. ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಈ ತಂಡ ಸ್ಕೆಚ್ ಹಾಕಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ನಂತರ ಇದರಿಂದ ನೊಂದು ಇವರ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ 3 ಲಕ್ಷ ರೂಪಾಯಿ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾಳೆ. ತನ್ನ ಮನೆಯಿಂದ 5 ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅನಿಲ್ ಅಳಲು ತೋಡಿಕೊಂಡಿದ್ದಾರೆ. ಸುಮಾರು ಶೇ. 90ರಷ್ಟು ದೃಷ್ಟಿ ದೋಷ ಹೊಂದಿರುವ ಅನಿಲ್ ಕುಮಾರ್, ನಂಜನಗೂಡು ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:43 am, Mon, 13 April 26

Follow Us